keyboard_backspace

ಷರಿಯಾ ಕಾನೂನು ಎಂದರೇನು; ಅಫ್ಘಾನಿಸ್ತಾನದಲ್ಲಿ ಕೈ-ಕಾಲು ಕತ್ತರಿಸಲು ಹೇಳುತ್ತದೆಯೇ ಕಾಯ್ದೆ!?

Google Oneindia Kannada News

ಕಾಬೂಲ್, ಆಗಸ್ಟ್ 18: ಅಫ್ಘಾನಿಸ್ತಾನದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು, ಕಾನೂನುಗಳನ್ನು ಜಾರಿಗೊಳಿಸುವುದಾಗಿ ಈಗಾಗಲೇ ತಾಲಿಬಾನ್ ಘೋಷಿಸಿದೆ. ತಾಲಿಬಾನ್ ಪ್ರತಿಜ್ಞೆ ಮಾಡಿರುವ ಷರಿಯಾ ಕಾನೂನಿನ ಬಗ್ಗೆ ತಿಳಿದುಕೊಳ್ಳಲು ಜನರು ಕುತೂಹಲಗೊಂಡಿದ್ದಾರೆ. ಆನ್‌ಲೈನ್‌ನಲ್ಲಿ ಷರಿಯಾ ಕುರಿತಾದ ಪ್ರಶ್ನೆಗಳಲ್ಲೇ ಅತಿಹೆಚ್ಚಿನ ಹುಡುಕಾಟ ಶುರುವಾಗಿದೆ.

ಅಫ್ಘಾನಿಸ್ತಾನದಲ್ಲಿ ಹೊಸತಾಗಿ ಅಧಿಕಾರ ರಚಿಸುವುದಕ್ಕೆ ಮುಂದಾಗಿರುವ ತಾಲಿಬಾನಿ ಸಂಘಟನೆಯು ಇದೇ ಷರಿಯಾ ಕಾನೂನುಗಳನ್ನು ನೆಚ್ಚಿಕೊಂಡಿದೆ. ಅತ್ಯಂತ ಕಠಿಣವಾಗಿರುವ ಷರಿಯಾ ಕಾನೂನು ಜಾರಿದ ಜೊತೆಗೆ ತಾಲಿಬಾನ್ ಕ್ರೌರ್ಯದ ಬಗ್ಗೆ ಅಫ್ಘಾನ್ ಜನತೆ ಆತಂಕಕ್ಕೀಡಾಗಿದ್ದಾರೆ. ತಮ್ಮ ಮುಂದಿನ ಭವಿಷ್ಯ ಹೇಗಿರುತ್ತದೆಯೋ ಏನೋ ಎಂಬ ಭೀತಿಯಲ್ಲೇ ಮುಳುಗಿ ಹೋಗುತ್ತಿದ್ದಾರೆ.

5 ಕಾರಣಗಳ ಗುಟ್ಟು: ಅಫ್ಘಾನಿಸ್ತಾನದಿಂದ ಸೇನೆ ವಾಪಸ್ ಕರೆಸಿಕೊಂಡ ಯುಎಸ್ ಯಡವಟ್ಟು!5 ಕಾರಣಗಳ ಗುಟ್ಟು: ಅಫ್ಘಾನಿಸ್ತಾನದಿಂದ ಸೇನೆ ವಾಪಸ್ ಕರೆಸಿಕೊಂಡ ಯುಎಸ್ ಯಡವಟ್ಟು!

"ತಾಲಿಬಾನ್ ಸಿದ್ಧಾಂತದ ಬಗ್ಗೆ ಪ್ರಶ್ನೆ ಮಾಡುವುದಾದರೆ, ನಮ್ಮ ಸಿದ್ಧಾಂತ ಮತ್ತು ನಂಬಿಕೆಗಳ ಮೇಲೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಆದರೆ ನಮ್ಮ ಅನುಭವ, ಪ್ರಬುದ್ಧತೆ ಮತ್ತು ಒಳನೋಟದ ಆಧಾರದ ಮೇಲೆ ನೋಡುವುದಾದರೆ ನಿಸ್ಸಂದೇಹವಾಗಿ ಹಲವು ವ್ಯತ್ಯಾಸಗಳಿವೆ" ಎಂದು ಮುಜಾಹಿದ್ ಹೇಳಿದ್ದಾರೆ. ಷರಿಯಾ ಕಾನೂನಿನ ಅಡಿಯಲ್ಲೇ ಆಡಳಿತ ನಡೆಸುವ ಬಗ್ಗೆ ಘೋಷಿಸಿರುವ ತಾಲಿಬಾನ್, ಪರಿಸ್ಥಿತಿಯು ಮೊದಲಿನಷ್ಟು ಕಠಿಣವಾಗಿ ಇರುವುದಿಲ್ಲ ಎಂದು ಮೇಲಿಂದ ಮೇಲೆ ಸ್ಪಷ್ಟಪಡಿಸುತ್ತಿದೆ. ಅಸಲಿಗೆ ಈ ಷರಿಯಾ ಕಾನೂನು ಎಂದರೇನು?, ಷರಿಯಾ ಕಾನೂನುಗಳ ಬಗ್ಗೆ ಅಫ್ಘಾನ್ ಪ್ರಜೆಗಳಲ್ಲಿ ಯಾಕಷ್ಟು ಭಯ?, ತಾಲಿಬಾನಿಗಳು ಷರಿಯಾ ಕಾನೂನುಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವುದು ಏಕೆ?, ಷರಿಯಾ ಕಾನೂನುಗಳ ಕುರಿತಾಗಿ ಸಾಮಾನ್ಯವಾಗಿ ಹುಟ್ಟಿಕೊಳ್ಳುತ್ತಿರುವ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಮುಂದೆ ಓದಿ.

ಜನರಲ್ಲಿ ಭೀತಿ ಹುಟ್ಟಿಸಿದ್ದು ಏಕೆ ಷರಿಯಾ ಕಾನೂನು?

ಜನರಲ್ಲಿ ಭೀತಿ ಹುಟ್ಟಿಸಿದ್ದು ಏಕೆ ಷರಿಯಾ ಕಾನೂನು?

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಈ ಹಿಂದೆ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಇದೇ ಷರಿಯಾ ಕಾನೂನುಗಳನ್ನು ಪಾಲನೆ ಮಾಡಲಾಗುತ್ತಿತ್ತು. ಈ ಕಾನೂನುಗಳ ಪ್ರಕಾರ, ಸಾರ್ವಜನಿಕರ ಮರಣ ದಂಡನೆ, ಕೋಲುಗಳಿಂದ ಬಲವಾಗಿ ಹೊಡೆಯುವುದು, ಕೈ-ಕಾಲುಗಳನ್ನು ಛಿದ್ರಗೊಳಿಸುವುದು, ಹೀಗೆ ಒಂದಕ್ಕಿಂತ ಒಂದು ಶಿಕ್ಷೆಯ ವಿಧಾನ ಘೋರವಾಗಿತ್ತು. ಜನರನ್ನು ತಿದ್ದುವುದಕ್ಕಾಗಿ ಇರುವ ಇಸ್ಲಾಮಿಕ್ ಕಾನೂನುಗಳನ್ನು ಉಲ್ಲಂಘಿಸಿ ಅತಿರೇಕದ ಶಿಕ್ಷೆಯನ್ನು ನೀಡಲಾಗುತ್ತಿತ್ತು. ಚಿಕ್ಕದಾಗಿ ಗಡ್ಡ ಬಿಟ್ಟ ಪುರುಷರಿಗೆ ಶಿಕ್ಷೆ ನೀಡುವುದು ಒಂದು ವಿಧಾನವಾಗಿತ್ತು. ಆದರೆ ಮಹಿಳೆಯರಿಗೆ ತೀರಾ ಮುಜುಗರ ಉಂಟು ಮಾಡುವಂತಾ ಶಿಕ್ಷೆಗಳನ್ನು ಈ ಕಾನೂನುಗಳಡಿಯಲ್ಲಿ ನೀಡಲಾಗುತ್ತಿತ್ತು. ಮಹಿಳೆಯರು ಧರಿಸುವ ಬಟ್ಟೆಯಿಂದ ಹಿಡಿದು ನಡವಳಿಕೆವರೆಗೂ ಪ್ರತಿಯೊಂದಕ್ಕೂ ನಿಯಮಗಳ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದ್ದು, ಉಲ್ಲಂಘಿಸಿದವರಿಗೆ ಸಾರ್ವಜನಿಕವಾಗಿ ಹಿಂಸೆ ನೀಡಲಾಗುತ್ತಿತ್ತು.

* ಕಲೆ ಮತ್ತು ಮನೋರಂಜನೆ ನಿಷೇಧ:

ಫೋಟೋಗ್ರಫಿ, ಸಿನಿಮಾ, ಮಹಿಳೆಯರ ಚಿತ್ರ ಪ್ರದರ್ಶನ ಸೇರಿದಂತೆ ಕಲೆ ಹಾಗೂ ಮನೋರಂಜನೆಯನ್ನು ನಿಷೇಧಿಸಲಾಗುವುದರ ಜೊತೆಗೆ ಪಾದ್ರಿಗಳಿಗೆ ಆಡಳಿತದ ಹೊಣೆ ವಹಿಸಲಾಗುತ್ತದೆ. ತಾಲಿಬಾನ್ ವಿದ್ಯಾರ್ಥಿಗಳಿಗೆ ಪಾಷ್ಟೋ ಮತ್ತು ಗುಂಪಿನ ಹೆಚ್ಚಿನ ನಾಯಕತ್ವ ವಹಿಸಿದವರಿಗೆ ಧಾರ್ಮಿಕ ವಿದ್ವಾಂಸರೆಂದು ಹೇಳಿಕೊಳ್ಳಲಾಗುತ್ತಿದೆ.

* ಮಹಿಳೆಯರಿಗೆ ಕಟ್ಟುನಿಟ್ಟಿನ ನಿಯಮಗಳು:

ಬಾಲಕಿಯರ ಹೊರತಾಗಿ ವಯಸ್ಸಿಗೆ ಬಂದ ಯುವತಿಯರ ಶಿಕ್ಷಣಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಮಹಿಳೆಯರ ಚಟುವಟಿಕೆಗಳಿಗೆ ಕಠಿಣ ಷರತ್ತುಗಳನ್ನು ವಿಧಿಸಿರುವುದರಿಂದ ಅವರು ಗೃಹಬಂಧನಕ್ಕೆ ಒಳಗಾದರು. ಸಾರ್ವಜನಿಕವಾಗಿ ಮಹಿಳೆಯರು ಒಬ್ಬರೇ ಓಡಾಡುವಂತಿಲ್ಲ ಹಾಗೂ ಕಡ್ಡಾಯವಾಗಿ ಒಬ್ಬ ಪುರುಷನ ನೆರಳಿನಲ್ಲಿರಬೇಕು. ಬುರ್ಖಾದ ಮೂಲಕ ಮಹಿಳೆಯರು ಕಡ್ಡಾಯವಾಗಿ ತಲೆಯಿಂದ ಪಾದದವರೆಗೂ ಮುಚ್ಚಿಕೊಂಡಿರಬೇಕು ಎಂಬ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಜಾರಿಗೊಳಿಸಲಾಗಿತ್ತು.

* ಕಳ್ಳತನ, ವ್ಯಭಿಚಾರಕ್ಕೆ ಕಠಿಣ ಶಿಕ್ಷೆ:

ವ್ಯಭಿಚಾರ ನಡೆಸುವವರಿಗೆ ಕಲ್ಲಿನಲ್ಲಿ ಹೊಡೆಯುವುದು. ಕಳ್ಳತನ ಮತ್ತು ಲೂಟಿ ಮಾಡುವ ಅಪರಾಧಕ್ಕೆ ಶಸ್ತ್ರಾಸ್ತ್ರಗಳಿಂದ ಅಪರಾಧಿಗಳ ಕೈಗಳನ್ನೇ ಕತ್ತರಿಸುವಂತಾ ಕ್ರೌರ್ಯ ನಿಯಮಗಳನ್ನು ಪಾಲನೆ ಮಾಡಲಾಗುತ್ತಿತ್ತು.

ಅಫ್ಘಾನಿಸ್ತಾನದ ಜನರಲ್ಲಿ ನಡುಕ ಹೆಚ್ಚಾಗಲು ಕಾರಣ

ಅಫ್ಘಾನಿಸ್ತಾನದ ಜನರಲ್ಲಿ ನಡುಕ ಹೆಚ್ಚಾಗಲು ಕಾರಣ

ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಳ್ಳುತ್ತಿದ್ದಂತೆ ದೇಶದ ಲಕ್ಷಾಂತರ ಜನರ ಎದೆಯಲ್ಲಿ ಢವಢವ ಜೋರಾಗಿದೆ. ಭವಿಷ್ಯದ ಭೀತಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ದೇಶವನ್ನೇ ತೊರೆದು ಹೋಗುವುದಕ್ಕೆ ಶುರು ಮಾಡಿದ್ದಾರೆ. 1996 ರಿಂದ 2001ರ ಅವಧಿಯಲ್ಲಿ ಆಡಳಿತ ನಡೆಸಿದ ಇದೇ ತಾಲಿಬಾನ್ ಉಗ್ರರು ಕ್ರೂರಾತೀಕ್ರೂರ ಶಿಕ್ಷೆಗಳನ್ನು ನೀಡುವ ಮೂಲಕ ಜನರ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. 1990ರ ದಶಕದ ತಾಲಿಬಾನ್ ಉಗ್ರರ ಆಳ್ವಿಕೆಯಲ್ಲಿ ಜಾರಿಗೊಳಿಸಿದ ಷರಿಯಾ ಕಾನೂನಿನ ಕ್ರೌರ್ಯತೆ ಬಗ್ಗೆ ಅರಿತಿರುವ ಜನರು ಉಗ್ರರ ಮುಷ್ಠಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಹಾತೊರೆಯುತ್ತಿದ್ದಾರೆ.

ಷರಿಯಾ ಕಾನೂನು ಎಂಬುದರ ಅರ್ಥ?

ಷರಿಯಾ ಕಾನೂನು ಎಂಬುದರ ಅರ್ಥ?

ಇಸ್ಲಾಮಿಕ್ ಕಾನೂನುಗಳಿಗೆ ಸಮಾನಾರ್ಥವಾಗಿ ಈ ಷರಿಯಾ ಕಾನೂನುಗಳನ್ನು ಗುರುತಿಸಲಾಗುತ್ತದೆ. ಷರಿಯಾ ನಿಜವಾಗಿಯೂ ಲಿಖಿತ ನಿಯಮಗಳ ಸಂಹಿತೆಯಲ್ಲ, ಬದಲಾಗಿ ಹಲವು ಮೂಲಗಳಿಂದ ಪಡೆದ ನಿಯಮಗಳ ಒಂದು ಅಂಗವಾಗಿದೆ. ಅವುಗಳ ಪೈಕಿ ಪ್ರಮುಖವಾಗಿರುವುದೇ ಕುರಾನ್. ಇದರ ಹೊರತಾಗಿ ಇಸ್ಲಾಂನ ಪವಿತ್ರ ಗ್ರಂಥಗಳು, ಹಾಗೂ ಹದೀಸ್ ಎಂದು ಕರೆಯಲ್ಪಡುವ ಪ್ರವಾದಿ ಮೊಹಮ್ಮದ್ ಅವರ ಜೀವನ, ಬೋಧನೆಗಳು ಮತ್ತು ಅಭ್ಯಾಸಗಳನ್ನು ಸಾರಿ ಹೇಳುವ ಸಾಕ್ಷ್ಯಚಿತ್ರಗಳಿವೆ.

ಅರೇಬಿಕ್ 'ಷರಿಯಾ' ಕಟ್ಟುನಿಟ್ಟಾದ ಕಾನೂನು ಸಂಹಿತೆಗಿಂತ ಅನುಸರಿಸಬೇಕಾದ ಮಾರ್ಗಗಳನ್ನು ಸೂಚಿಸುತ್ತದೆ. ಇದು ಧರ್ಮವನ್ನು ಹೇಗೆ ಪಾಲಿಸುವುದು, ನಡವಳಿಕೆ ಮತ್ತು ನಿಯಮಗಳ ಜೊತೆಗೆ ಕಾನೂನು ವಿಷಯಗಳನ್ನೂ ಒಳಗೊಂಡಿರುತ್ತದೆ. ಇದರ ಹೊರತಾಗಿ ಷರಿಯಾ ಕಾನೂನುಗಳು ಹೇಗೆ ರೂಪಗೊಂಡವು ಎಂಬುದನ್ನು ನಿರ್ಧರಿಸುವುದಕ್ಕೆ ಇನ್ನೂ ಎರಡು ಅಂಶಗಳಿವೆ. "ಒಂದು ವಿಶ್ಲೇಷಣೆ ಆಧಾರಿತ 'ಕಿಯಾಸ್' ಆದರೆ, ಎರಡು ನ್ಯಾಯಸಮ್ಮತವಾದ 'ಇಜ್ಮಾ' ಆಗಿದೆ.

ಕುರಾನ್ ಮತ್ತು ಹದೀಸ್ ನಲ್ಲಿ ಉಲ್ಲೇಖವಿಲ್ಲ:

"ಷರಿಯಾ ಕಾನೂನುಗಳು ಮತ್ತು ನಿಯಮಗಳ ಅನುಷ್ಠಾನವು ಹೆಚ್ಚಾಗಿ ಇಸ್ಲಾಮಿಕ್ ವಿದ್ವಾಂಸರ ವ್ಯಾಖ್ಯಾನಕ್ಕೆ ಬಿಟ್ಟಿದೆ." ಸಾಮಾಜಿಕ ಮತ್ತು ವೈಯಕ್ತಿ ನಡವಳಿಕೆಗಳ ಬಗ್ಗೆ ಕುರಾನ್ ಅಥವಾ ಹದೀಸ್‌ಗಳಲ್ಲಿ ಯಾವುದೇ ರೀತಿಯ ಉಲ್ಲೇಖವಿಲ್ಲ. ಕಟ್ಟುನಿಟ್ಟಾದ ಕಾನೂನು ಸಂಹಿತೆ ಮತ್ತು ನಿಯಮಗಳ ಬಗ್ಗೆ ಅವು ಹೇಳುವುದಿಲ್ಲ.

ಇಸ್ಲಾಮಿಕ್ ಕಾನೂನುಗಳಲ್ಲಿ ಕ್ರೌರ್ಯದ ಉಲ್ಲೇಖವಿಲ್ಲ

ಇಸ್ಲಾಮಿಕ್ ಕಾನೂನುಗಳಲ್ಲಿ ಕ್ರೌರ್ಯದ ಉಲ್ಲೇಖವಿಲ್ಲ

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಹೇಳುವಂತೆ ಮತ್ತು ನೀಡುವಂತೆ ಕ್ರೌರ್ಯವನ್ನು ಬಿಂಬಿಸುವ ನಿಯಮಗಳು ಇಸ್ಲಾಮಿಕ್ ಕಾನೂನುಗಳಲ್ಲಿ ಉಲ್ಲೇಖವಾಗಿರುವುದಲ್ಲ. ಹಾಗಾಗಿ ಇಸ್ಲಾಮಿಕ್ ಕಾನೂನನ್ನು ಅನುಸರಿಸುವ ವಿವಿಧ ಪಂಗಡಗಳು ಮತ್ತು ದೇಶಗಳಲ್ಲಿ ಆಚರಿಸಲ್ಪಡುವ ಇಸ್ಲಾಮಿಕ್ ನ್ಯಾಯಶಾಸ್ತ್ರದ ಹಲವಾರು ಶಾಲೆಗಳು ಅಸ್ತಿತ್ವದಲ್ಲಿವೆ. ಹನ್‌ ಬಲಿಯಂತಹ ಅತಿ-ಸಾಂಪ್ರದಾಯಿಕ ಶಾಲೆಗಳಿವೆ. ಸೌದಿ ಅರೇಬಿಯಾದಲ್ಲಿ ಮತ್ತು ತಾಲಿಬಾನ್ ಮತ್ತು ಹನಫಿಯಂತಹ ಜಾಗತಿಕ ಶಾಲೆಗಳಲ್ಲಿ ಅದನ್ನು ಅನುಸರಿಸಲಾಗುತ್ತದೆ. ಮಧ್ಯ ಏಷ್ಯಾ, ಈಜಿಪ್ಟ್, ಪಾಕಿಸ್ತಾನ, ಭಾರತ, ಚೀನಾ, ಟರ್ಕಿ, ಬಾಲ್ಕನ್ಸ್ ಮತ್ತು ಕಾಕಸಸ್‌ನ ಸುನ್ನಿಗಳಲ್ಲಿ ಪ್ರಬಲವಾಗಿದೆ. ಉತ್ತರ ಆಫ್ರಿಕಾದ ಮಾಲಿಕಿ, ಶಾಫಿ (ಇಂಡೋನೇಷ್ಯಾ, ಮಲೇಷ್ಯಾ, ಬ್ರೂನಿ, ಇತ್ಯಾದಿ) ಇತರ ಶಾಲೆಗಳಿವೆ ಆದರೆ ಶಿಯಾ ಇರಾನ್ ಜಾಫಾರಿ ಬೋಧನೆ ಕ್ರಮವನ್ನು ಅನುಸರಿಸುತ್ತದೆ.

ಇಸ್ಲಾಮಿಕ್ ಶಾಲೆಗಳಲ್ಲಿ ನಿರ್ದಿಷ್ಟ ಅಪರಾಧಗಳು ಮತ್ತು ಅಂಥ ಅಪರಾಧಗಳಿಗೆ ಯಾವ ರೀತಿ ಶಿಕ್ಷೆ ವಿಧಿಸಬೇಕು ಎಂಬುದನ್ನು ಸೂಚಿಸುತ್ತವೆ. ಆದ್ದರಿಂದ ಕಲ್ಲಿನಲ್ಲಿ ಹೊಡೆಯುವುದು ಹಾಗೂ ಕೈ-ಕಾಲುಗಳನ್ನು ಕತ್ತರಿಸುವ ಶಿಕ್ಷೆಯನ್ನು ಸೇರಿಸಲಾಗಿದೆ. ಆದ್ದರಿಂದಲೇ ಜಾಗತಿಕ ಮಟ್ಟದಲ್ಲಿ "ಷರಿಯಾ" ಕಾನೂನುಗಳನ್ನು ಹಲವು ರಾಷ್ಟ್ರಗಳಲ್ಲಿ ಜಾರಿಗೊಳಿಸಿಲ್ಲ.

ತಾಲಿಬಾನಿಗಳು ಷರಿಯಾ ಕಾನೂನು ಪಾಲಿಸುವುದೇಕೆ?

ತಾಲಿಬಾನಿಗಳು ಷರಿಯಾ ಕಾನೂನು ಪಾಲಿಸುವುದೇಕೆ?

ಅಫ್ಘಾನಿಸ್ತಾನದಲ್ಲಿ ಹೆಚ್ಚಿನ ತಾಲಿಬಾನಿಗಳು ಪಶ್ತೂನ್ ಜನಾಂಗಕ್ಕೆ ಸೇರಿದ್ದು, ಇಸ್ಲಾಂನ ಸುನ್ನಿ ಅನುಯಾಯಿಗಳಾಗಿದ್ದಾರೆ. ತಾಲಿಬಾನ್ ಸಂಘಟನೆಯ ಬಹುಪಾಲು ಉನ್ನತ ಸ್ಥಾನಗಳಲ್ಲಿ ಇದೇ ಸುನ್ನಿ ಜನಾಂಗದ ನಾಯಕರಿದ್ದಾರೆ. ಇದರ ಮಧ್ಯೆ ಅಫ್ಘಾನಿಸ್ತಾನದಲ್ಲಿ ಜಾರಿಗೊಳಿಸಲು ಹೊರಟಿರುವ ಷರಿಯಾ ಕಾನೂನುಗಳಿಂದ ಹಜಾರಸ್ ಮತ್ತು ಶಿಯಾಗಳಂತಹ ಧಾರ್ಮಿಕ ಹಾಗೂ ಜನಾಂಗೀಯ ಅಲ್ಪಸಂಖ್ಯಾತರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆಗಳು ಹುಟ್ಟುಕೊಳ್ಳುತ್ತವೆ. ಅಲ್ಲದೆ, ಇಸ್ಲಾಮಿಕ್ ಪಾದ್ರಿಗಳ ಮಟ್ಟದಲ್ಲಿ ಮಹಿಳೆಯರು ಇಲ್ಲದೇ ಕಾನೂನು ಮತ್ತು ರಾಜಕೀಯ ಕ್ರಮದಲ್ಲಿ ಹಿತಾಸಕ್ತಿಗಳಿಗೆ ಸ್ಥಾನ ಸಿಗುವುದಿಲ್ಲ ಎಂಬ ಭಯವನ್ನು ಸೃಷ್ಟಿಸುತ್ತದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದ 2.0 ಭರವಸೆಗಳು

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದ 2.0 ಭರವಸೆಗಳು

"ಅಫ್ಘಾನಿಸ್ತಾನ ವಿಮೋಚನೆ ಆಗಿರುವ ಈ ಸಂದರ್ಭದಲ್ಲಿ ತಾಲಿಬಾನ್ ಯಾರ ವಿರುದ್ಧವೂ ಸೇಡು ತೀರಿಸಿಕೊಳ್ಳುವುದಕ್ಕೆ ಬಯಸುವುದಿಲ್ಲ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ. ಅದರ ಜೊತೆಗೆ ಕಾಬೂಲ್‌ನಲ್ಲಿ ಇರುವ ವಿದೇಶಿ ದೂತವಾಸ ಕಚೇರಿಗಳು, ರಾಯಭಾರಿ ಸಿಬ್ಬಂದಿ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಭದ್ರತೆ ಮತ್ತು ಸುರಕ್ಷತೆಗೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ನಾವು ಭರವಸೆ ನೀಡುತ್ತೇವೆ. ದೇಶದ ಉಳಿದ ಪ್ರದೇಶಗಳನ್ನು ವಶಪಡಿಸಿಕೊಂಡ ನಂತರ ಕಾಬೂಲ್‌ನಲ್ಲಿ ಅಸ್ತಿತ್ವ ಸ್ಥಾಪಿಸುವುದು ನಮ್ಮ ಉದ್ದೇಶವಾಗಿತ್ತು. ಆದರೆ ದುರದೃಷ್ಟವಶಾತ್, ಈ ಹಿಂದಿನ ಸರ್ಕಾರವು ಅಸಮರ್ಥವಾಗಿತ್ತು. ಅವರಿಗೆ ಭದ್ರತೆ ನೀಡಲು ಸಾಧ್ಯವಾಗಲಿಲ್ಲ. ನಾವು ಈಗ ಎಲ್ಲಾ ವಿದೇಶಿ ಸಂಸ್ಥೆಗಳಿಗೆ ಭದ್ರತೆ ಒದಗಿಸುತ್ತೇವೆ. ನಾವು ಅಫ್ಘಾನಿಸ್ತಾನದ ಒಳಗೆ ಅಥವಾ ಹೊರಗೆ ಯಾವುದೇ ಶತ್ರುಗಳನ್ನು ಹುಡುಕುವುದಿಲ್ಲ," ಎಂದಿದ್ದಾರೆ.

ಅಫ್ಘಾನ್ ದುಸ್ಥಿತಿ ಹಾಗೂ ತಾಲಿಬಾನ್ ವಕ್ತಾರರ ಮಾತು

ಅಫ್ಘಾನ್ ದುಸ್ಥಿತಿ ಹಾಗೂ ತಾಲಿಬಾನ್ ವಕ್ತಾರರ ಮಾತು

ತಾಲಿಬಾನ್ ಕಾಬೂಲ್ ಮೇಲೆ ಹಿಡಿತ ಸಾಧಿಸಿದ ನಂತರದಲ್ಲಿ ಕೆಲವೇ ಕೆಲವು ಅಂಗಡಿಗಳು ತೆರೆದಿವೆ. ತಾಲಿಬಾನಿಗಳು ಸರ್ಕಾರದ ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದ ಹೊರತಾಗಿಯೂ ಕೆಲವು ಅಧಿಕಾರಿಗಳು ಮತ್ತು ಮಹಿಳೆಯರು ಮಾತ್ರ ರಸ್ತೆಗೆ ಇಳಿದಿದ್ದಾರೆ. ತಾಲಿಬಾನ್ ಅಡಿಯಲ್ಲಿ ನಿರೀಕ್ಷಿತ ಕಠಿಣ ಇಸ್ಲಾಮಿಸ್ಟ್ ಆಳ್ವಿಕೆಯಿಂದ ತಪ್ಪಿಸಿಕೊಳ್ಳಲು ಅಥವಾ ಕಳೆದ ಎರಡು ದಶಕಗಳಿಂದ ಅಧಿಕಾರದಲ್ಲಿರುವ ಪಾಶ್ಚಿಮಾತ್ಯ ಬೆಂಬಲಿತ ಸರ್ಕಾರದೊಂದಿಗೆ ನೇರ ಪ್ರತೀಕಾರಕ್ಕೆ ಹೆದರಿ ಸಾವಿರಾರು ಜನರು ದೇಶವನ್ನು ತೊರೆದು ಹೋಗುತ್ತಿದ್ದಾರೆ.

ಇದರ ಮಧ್ಯೆ ಮಂಗಳವಾರ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್, ಸಾರ್ವಜನಿಕರಲ್ಲಿ ವಿಶ್ವಾಸ ತುಂಬುವ ರೀತಿ ಮಾತನಾಡಿದ್ದಾರೆ. ತಾಲಿಬಾನ್ ಹೊಸ ಸರ್ಕಾರ ಮತ್ತು ಆಡಳಿತವು 1996-2001ರ ಆಡಳಿತಕ್ಕಿಂತ ಸಕಾರಾತ್ಮಕ ಹಾಗೂ ಭಿನ್ನವಾಗಿರುತ್ತದೆ. ಪುರುಷರ ಜೊತೆಗೆ ಸರಿಸಮಾನವಾಗಿ ಕೆಲಸ ಮಾಡುವ ಮಹಿಳೆಯರನ್ನು ಕಲ್ಲು ಹೊಡೆದು ಕೊಲ್ಲುವ ಸ್ಥಿತಿ ಇರುವುದಿಲ್ಲ. "ತಾಲಿಬಾನ್ ಸಿದ್ಧಾಂತದ ಬಗ್ಗೆ ಪ್ರಶ್ನೆ ಮಾಡುವುದಾದರೆ, ನಮ್ಮ ಸಿದ್ಧಾಂತ ಮತ್ತು ನಂಬಿಕೆಗಳ ಮೇಲೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಆದರೆ ನಮ್ಮ ಅನುಭವ, ಪ್ರಬುದ್ಧತೆ ಮತ್ತು ಒಳನೋಟದ ಆಧಾರದ ಮೇಲೆ ನೋಡುವುದಾದರೆ ನಿಸ್ಸಂದೇಹವಾಗಿ ಹಲವು ವ್ಯತ್ಯಾಸಗಳಿವೆ" ಎಂದು ಮುಜಾಹಿದ್ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಂಘಟನೆಯು ಆದಷ್ಟು ಬೇಗವೇ ಹೊಸ ಸರ್ಕಾರವನ್ನು ರಚಿಸಲಿದೆ. "ಇಸ್ಲಾಮಿಕ್ ಕಾನೂನುಗಳ ವ್ಯಾಪ್ತಿಯಲ್ಲಿ ಮಹಿಳೆಯರ ಭದ್ರತೆ ಮತ್ತು ಸುರಕ್ಷತೆಗೆ ತಾಲಿಬಾನ್ ಸಂಘಟನೆಯು ಆದ್ಯತೆ ನೀಡುತ್ತದೆ. ಸಮಾಜದಲ್ಲಿ ಮಹಿಳೆಯರು ಕೂಡಾ ಸ್ವತಂತ್ರರಾಗಿ ಕಾರ್ಯ ಚಟುವಟಿಕೆಗಳಿಂದ ಇರಬೇಕು, ಆದರೆ ಅದು ಇಸ್ಲಾಮಿಕ್ ಪರಧಿಯನ್ನು ಮೀರುವಂತಿಲ್ಲ. ನಮ್ಮ ರಾಷ್ಟ್ರವು ಮುಸ್ಲೀಂ ರಾಷ್ಟ್ರವಾಗಿದೆ, ಅದು 20 ವರ್ಷಗಳ ಹಿಂದೆಯೇ ಆಗಿರಬಹುದು ಅಥವಾ ಇಂದೇ ಆಗಿರಬಹುದು. ಆದರೆ 20 ವರ್ಷಗಳ ಹಿಂದಿನ ಪರಿಸ್ಥಿತಿಗೂ ಇಂದಿನ ಸ್ಥಿತಿಗತಿಗೂ ತುಂಬಾ ವ್ಯತ್ಯಾಸವಿದೆ. ಸರ್ಕಾರ ರಚನೆ ಪ್ರಕ್ರಿಯೆ ಮುಗಿದ ನಂತರದಲ್ಲಿ ಕಾನೂನುಗಳ ಬಗ್ಗೆ ಮಾತನಾಡಲಾಗುವುದು," ಎಂದು ಮುಜಾಹಿದ್ ಹೇಳಿದರು.

ಪ್ರಜೆಗಳನ್ನು ಕರೆ ತರಲು ಅಫ್ಘಾನ್ ಕಡೆಗೆ ವಿಮಾನ

ಪ್ರಜೆಗಳನ್ನು ಕರೆ ತರಲು ಅಫ್ಘಾನ್ ಕಡೆಗೆ ವಿಮಾನ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಿಡಿತ ಸಾಧಿಸಿದ ಬೆನ್ನಲ್ಲೇ ಗೊಂದಲಮಯ ವಾತಾವಾರಣ ಸೃಷ್ಟಿಯಾಯಿತು. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ತನ್ನ ದೂತವಾಸ ಕಚೇರಿ ಸಿಬ್ಬಂದಿ ಮತ್ತು ಪ್ರಜೆಗಳನ್ನು ಕರೆ ತರುವ ಕಾರ್ಯಾಚರಣೆಗೆ ಮೊದಲು ಚಾಲನೆ ನೀಡಿತು. ಈ ಕಾರ್ಯಾಚರಣೆ ನಡೆಸುವುದಕ್ಕಾಗಿಯೇ 6,000 ಸೇನಾ ಸಿಬ್ಬಂದಿಯನ್ನು ರವಾನಿಸಲಾಗಿತ್ತು. ಅಲ್ಲಿಂದ ಅಮೆರಿಕಾದ ಪ್ರಜೆಗಳನ್ನು ವಿಶೇಷ ವಿಮಾನಗಳ ಮೂಲಕ ಸ್ವದೇಶಕ್ಕೆ ವಾಪಸ್ ಕರೆ ತರಲಾಯಿತು.

ಅಮೆರಿಕಾವಷ್ಟೇ ಅಲ್ಲದೇ ಫ್ರಾನ್ಸ್, ಜರ್ಮನಿ, ಭಾರತ ಮತ್ತು ಆಸ್ಟ್ರೇಲಿಯಾದಿಂದ ಅಫ್ಘಾನಿಸ್ತಾನಕ್ಕೆ ವಿಶೇಷ ವಿಮಾನಗಳನ್ನು ಬಿಡಲಾಯಿತು. ಅಫ್ಘಾನ್ ನೆಲದಲ್ಲಿರುವ ದೂತವಾಸ ಕಚೇರಿ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆ ತರುವ ಕಾರ್ಯಾಚರಣೆ ನಡೆಸಲಾಯಿತು. ಇದರ ಮಧ್ಯೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸೃಷ್ಟಿಯಾದ ಚಿತ್ರಣದ ಬಗ್ಗೆ ವಿವಿಧ ರಾಷ್ಟ್ರ ನಾಯಕರು ತಮ್ಮದೇ ವ್ಯಾಖ್ಯಾನ ನೀಡಿದ್ದಾರೆ.

"ಕಾಬೂಲ್ ವಿಮಾನ ನಿಲ್ದಾಣದಲ್ಲಿ ಹತಾಶೆಯ ಚಿತ್ರಗಳು ನಾಚಿಕೆಗೇಡು" ಎಂದು ಜರ್ಮನ್ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೈನ್ಮಿಯರ್ ಹೇಳಿದ್ದಾರೆ. ಅಫ್ಘಾನಿಸ್ತಾನ ಮತ್ತು ತಾಲಿಬಾನ್ ಬಿಕ್ಕಟ್ಟಿನ ಕುರಿತು ಮುಂದಿನ ವಾರ ಏಳನೇ ಗುಂಪುಗಳ ಶೃಂಗಸಭೆ ನಡೆಸುವುದಾಗಿ ಯುಎಸ್ ಅಧ್ಯಕ್ಷ ಜೋ ಬೈಡೆನ್ ಮತ್ತು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಘೋಷಿಸಿದ್ದಾರೆ.

10 ದಿನದಲ್ಲೇ ಅಫ್ಘಾನಿಸ್ತಾನ ತಾಲಿಬಾನ್ ವಶ

10 ದಿನದಲ್ಲೇ ಅಫ್ಘಾನಿಸ್ತಾನ ತಾಲಿಬಾನ್ ವಶ

ಎರಡು ದಶಕಗಳ ಕಾಲ ಯುನೈಟೆಡ್ ಸ್ಟೇಟ್ಸ್ ಸೇನೆ ಭದ್ರತೆ ನಡುವೆ ಸುಭದ್ರವಾಗಿದ್ದ ಅಫ್ಘಾನಿಸ್ತಾನವನ್ನು ತಾಲಿಬಾನ್ ಕೇವಲ 10 ದಿನಗಳಲ್ಲೇ ಸಂಪೂರ್ಣ ಕೈವಶ ಮಾಡಿಕೊಂಡಿದೆ. ಯುಎಸ್ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಾಗಿ ಘೋಷಿಸುತ್ತಿದ್ದಂತೆ ತಾಲಿಬಾನ್ ಉಗ್ರ ಸಂಘಟನೆ ಅಲರ್ಟ್ ಆಗಿದೆ. ಮೊದಲಿಗೆ ದೇಶದ ಒಂದೊಂದೇ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡ ತಾಲಿಬಾನ್ ಉಗ್ರರು ಕಳೆದ ಆಗಸ್ಟ್ 15ರಂದು ರಾಜಧಾನಿ ಕಾಬೂಲ್‌ಗೆ ಲಗ್ಗೆ ಇಡುವ ಮೂಲಕ ಇಡೀ ದೇಶವನ್ನು ಹಿಡಿತಕ್ಕೆ ತೆಗೆದುಕೊಂಡಿದೆ.

ಅಫ್ಘಾನ್ ಮೇಲೆ ಅಮೆರಿಕಾ ಹಿಡಿತ ಸಾಧಿಸಿದ ಕಾಲ:

ಕಳೆದ 1996 ರಿಂದ 2001ರವರೆಗೂ ಅಫ್ಘಾನಿಸ್ತಾನದಲ್ಲಿ ಇದೇ ತಾಲಿಬಾನ್ ಉಗ್ರ ಸಂಘಟನೆಯ ಹಿಡಿತದಲ್ಲಿತ್ತು. 2001ರ ಸಪ್ಟೆಂಬರ್ 11ರಂದು ಯುನೈಟೆಡ್ ಸ್ಟೇಟ್ಸ್ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ್ದರು. ಅಲ್ ಖೈದಾ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದ ಕಾರಣಕ್ಕಾಗಿ ತಾಲಿಬಾನ್ ಮೇಲೂ ಯುಎಸ್ ಸೇನಾಪಡೆಗಳು ಕಾರ್ಯಾಚರಣೆಗೆ ಇಳಿದವು. ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಅಫ್ಘಾನ್ ಮೇಲೆ ದಾಳಿ ನಡೆಸಿದ ಯುಎಸ್ ಸೇನೆಯು ಅಫ್ಘಾನಿಸ್ತಾನವನ್ನು 2001ರಲ್ಲಿ ತಾಲಿಬಾನ್ ಹಿಡಿತದಿಂದ ಬಿಡುಗಡೆಗೊಳಿಸಿತು. ಅದರ ಪರಿಣಾಮವಾಗಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಕಳೆದುಕೊಂಡಿತು. ಯುಎಸ್ ಬೆಂಬಲಿತ ಸರ್ಕಾರವು ಅಸ್ತಿತ್ವಕ್ಕೆ ಬಂದಿತ್ತು.

English summary
Afghansitan Taliban Crisis: What Is Sharia Law And How Was Taliban Interpreted it? Explained in Kannada.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X