keyboard_backspace

ಕಾಲಿಲ್ಲದ ಅಧಿಕಾರಿ ಎಂದು ಭಾವಿಸಿದ್ದ ಎಸಿಬಿ ಪೊಲೀಸರೇ ಈಗ ಸುಸ್ತು!

Google Oneindia Kannada News

ಬೆಂಗಳೂರು, ಫೆಬ್ರವರಿ 08: ಒಸಿ ಕಂಠ ಪೂರ್ತಿ ಕುಡಿದು ಬಿಬಿಎಂಪಿ ಹೆಸರಿನಲ್ಲಿ ಬೋಗಸ್ ಒಸಿ ( ಸ್ವಾಧೀನ ಪತ್ರ) ಕೊಟ್ಟು ಲಕ್ಷ ಲಕ್ಷ ಲಂಚ ಪಡೆಯುತ್ತಿದ್ದ. ಇಪ್ಪತ್ತು ಲಕ್ಷ ರೂ. ಲಂಚ ಸ್ವೀಕರಿಸಿ ಬಲೆಗೆ ಬಿದ್ದಾಗ ಎಸಿಬಿ ಪೊಲೀಸರು ಅಯ್ಯೋ ಪಾಪ ಕಾಲಿಲ್ಲ ಎಂದು ಪೇಚಾಡಿದ್ದರು. ಕಾಲಿಲ್ಲದ ಕುಂಟಪ್ಪನ ಅಕ್ರಮ ವ್ಯವಹಾರ, ಸೀಲು ಸಾಮ್ರಾಜ್ಯ ಹಾಗೂ ಕಡತಗಳ ಕರ್ಮಕಾಂಡ ನೋಡಿ ಎಸಿಬಿ ಪೊಲೀಸರೇ ದಂಗಾಗಿದ್ದಾರೆ.

ಕಾಲಿಲ್ಲದಿದ್ದರೂ ಕಂತು ಕಂತು ಲಂಚ: ಎಸಿಬಿ ಬಲೆಗೆ ಬಿದ್ದ ಭ್ರಷ್ಟೇಂದ್ರಪ್ಪ ! ಕಾಲಿಲ್ಲದಿದ್ದರೂ ಕಂತು ಕಂತು ಲಂಚ: ಎಸಿಬಿ ಬಲೆಗೆ ಬಿದ್ದ ಭ್ರಷ್ಟೇಂದ್ರಪ್ಪ !

ಒಸಿ ಕುಡಿದು ಬೋಗಸ್ ಒಸಿ ಕೊಡ್ತಿದ್ದದ್ದ ದೇವೆಂದ್ರನ ಸೀಲು ಸಾಮ್ರಾಜ್ಯ !

ಒಸಿ ಕುಡಿದು ಬೋಗಸ್ ಒಸಿ ಕೊಡ್ತಿದ್ದದ್ದ ದೇವೆಂದ್ರನ ಸೀಲು ಸಾಮ್ರಾಜ್ಯ !

ಮನೆಯನ್ನೇ ಬಾರ್ ಮಾಡಿಕೊಂಡು ಎಸಿಬಿ ಪೊಲೀಸರನ್ನು ‌ಬಚ್ಚಿ ಬೀಳಿಸಿದ್ದ ಬಿಬಿಎಂಪಿ ಅಧಿಕಾರಿಯ ಇನ್ನೊಂದು ಮುಖ ನೋಡಿ ಎಸಿಬಿ ಪೊಲೀಸರು ನಡುಗಿ ಹೋಗಿದ್ದಾರೆ. ದೇವೆಂದ್ರಪ್ಪನ ಮನೆಯಲ್ಲಿ ರಾಶಿಗಟ್ಟಲೇ ಶೀಲು, ಐದು ಮೂರು ಕಡತಗಳು ಸಿಕ್ಕಿವೆ. ಜತೆಗೆ ಒಂದು ಆಟೋ ತುಂಬುವಷ್ಟು ಎಣ್ಣೆ ಬಾಟಲಿಗಳು ಸಿಕ್ಕಿದ್ದು, ಎಲ್ಲವನ್ನೂ ಎಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಒಸಿ ಕುಡಿದು ಬೋಗಸ್ ಒಸಿ ಕೊಡ್ತಿದ್ದದ್ದ ದೇವೆಂದ್ರನ ಸೀಲು ಸಾಮ್ರಾಜ್ಯ !

ಒಸಿ ಕುಡಿದು ಬೋಗಸ್ ಒಸಿ ಕೊಡ್ತಿದ್ದದ್ದ ದೇವೆಂದ್ರನ ಸೀಲು ಸಾಮ್ರಾಜ್ಯ !

ಬೆಂಗಳೂರು ನಗರ ಘಟಕದ ಎಸ್ಪಿ ಕುಲದೀಪ್ ಕುಮಾರ್ ಆರ್. ಜೈನ್ ಮಾರ್ಗದರ್ಶನದಲ್ಲಿ ಬೊಮ್ಮನಹಳ್ಳಿ ಬಿಬಿಎಂಪಿ ನಗರ ಯೋಜನೆ ಸಹಾಯಕ ನಿರ್ದೇಶಕ ದೇವೆಂದ್ರಪ್ಪನ ಲಂಚ ಸ್ವೀಕಾರ ಪ್ರಕರಣ ತನಿಖೆ ನಡೆಯುತ್ತಿದೆ. ಅಪಾರ ಲಂಚ ಸ್ವೀಕರಿಸಿದ ದೇವೆಂದ್ರಪ್ಪನ ಮನೆ ಶೋಧ ನಡೆಸಿದಾಗ ಮತ್ತಷ್ಟು ಅಕ್ರಮ ಬಯಲಾಗಿದೆ.

ಸೀಲಿಗೆ ಲಿಂಕು ಒಸಿ :

ಸೀಲಿಗೆ ಲಿಂಕು ಒಸಿ :

ದೇವೆಂದ್ರಪ್ಪನ ಮನೆಯಲ್ಲಿ ನೂರಾರಇಚ್ಚಿ ಸೀಲು ಸಿಕ್ಕಿವೆ.‌ ಬಿವಿಎಂಪಿ ಆಯುಕ್ರರ ಹೆಸರಿನಲ್ಲಿರುವ ಸೀಲು ಈತ ಯಾಕೆ ಮಾಡಿಸಿದ ಎಂಬ ಪ್ರಶ್ನೆ ಎದ್ದಿದೆ. ಬಿಬಿಎಂಪಿ ಅಧಿಕಾರಿಗಳು ಹೇಳುವ ಪ್ರಕಾರ ಈತ ಬಿಬಿಎಂಪಿ ಎಲ್ಲಾ ವಲಯದಲ್ಲೂ ಕೈ ಆಡಿಸುತ್ತಿದ್ದ. ಏಜೆಂಟರ ಮೂಲಕ ಅಕ್ರಮವಾಗಿ ಕಟ್ಟಿದ ಮನೆಗಳಿಗೆ ಕಾನೂನು ಬಾಹಿರವಾಗಿ ನಕಲಿ ಒಸಿ ( ಅಕ್ಯೂಪೈ ಸರ್ಟಿಫಿಕೇಟ್ ) ನೀಡುತ್ತಿದ್ದ. ಇದಕ್ಕಾಗಿ ಲಕ್ಷಾಂತರ ಪೀಕುತ್ತಿದ್ದ. ಈ ಉದ್ದೇಶಕ್ಕಾಗಿ ಈತ ಸೀಲು ಮಾಡಿಸಿದ್ದ. ಇನ್ನು ಕಚೇರಿಯಲ್ಲಿರಬೇಕಿದ್ದ 500 ಕಡತಗಳನ್ನು ಮನೆಯಲ್ಲೇ ಇಟ್ಟುಕೊಂಡಿದ್ದ. ಈ ಕಡತಗಳ ಹಾಗೂ ಸೀಲು ಗಳ ಜಾಡು ಹಿಡಿದು ಎಸಿಬಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆ ವೇಳೆ ಬೊಗಸ್ ಒಸಿ ಚರಿತ್ರೆ ಬಯಲಾಗಲಿದೆ ಎನ್ನಲಾಗಿದೆ. ಈತನ ಬೋಗಸ್ ಡೀಲಿಂಗ್ ಬಿಬಿಎಂಪಿ ಅಧಿಕಾರಿಗಳಿಗೆ ಗೊತ್ತಿತ್ತು. ದೂರುಗಳು ಹೋಗಿದ್ದವು‌. ಅವು ತನಿಖೆಯಾಗದಂತೆ ಮುಚ್ಚಿಹಾಕಿಸಿದ್ದ ಎಂದು ಹೆಸರು ಹೇಳಲು ಇಚ್ಚಿಸದ ಬಿಬಿಎಂಪಿ ಅಧಿಕಾರಿ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಸ್ವಂತ ಬ್ಯಾಂಕ್ ಗೆ ಚಾಲನೆ :

ಸ್ವಂತ ಬ್ಯಾಂಕ್ ಗೆ ಚಾಲನೆ :

ಅಕ್ರಮವಾಗಿ ದುಡಿದ ಹಣ ಕಾನೂನು ಬದ್ಶಗೊಳಿಸಲು ದೇವೇಂದ್ರಪ್ಪ ಕ್ರಿಮಿನಲ್ ಐಡಿಯಾ ಬಳಿಸಿದ್ದಾನೆ. ತನ್ನ ಊರಿನಲ್ಲಿ ಪತ್ನಿ ಹೆಸರಿನಲ್ಲಿ ಸಹಕಾರಿ ಬ್ಯಾಂಕ್ ತೆರೆದಿದ್ದಾನೆ. ಅಲ್ಲಿ ಮುಗ್ಧರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆಗೆದು ಅದರಲ್ಲಿ ತನ್ನ ಹಣ ಹಾಕಿ ಸಕ್ರಮಗೊಳಿಸುತ್ತಾನೆ. ಈತನ ಸಹಕಾರಿ ಬ್ಯಾಂಕ್ ಖಾತೆದಾರರನ್ನು ವಿಚಾರಣೆಗೆ ಒಳಪಡಿಸಿದರೆ ಮತ್ತಷ್ಟು ಅಕ್ರಮ‌ ಬಯಲಿಗೆ ಬರಲಿದೆ. ಈ ಹಿಂದೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಕೆಲಸ ಮಾಡುವರ ಹೆಸರಿಲ್ಲಿ ಖಾತೆ ತೆರದು ವಹಿವಾಟು ಮಾಡಿದ ಶೈಲಿಯಲ್ಲಿ ದೇವೆಂದ್ರಪ್ಪ ವಹಿವಾಟು ನಡೆಸಿದ್ದಾನೆ ಎಂದು ಗೊತ್ತಾಗಿದೆ. ದೇವೇಂದ್ರಪ್ಪನ ಒಂದೊಂದೇ ಅಕ್ರಮ ಹೊರ ಬೀಳುತ್ತಿದ್ದು, ಎಸಿಬಿ ಪೊಲೀಸರು ಅದನ್ನು ಬಯಲಿಗೆ ಎಳೆಯುವ ಸಾಧ್ಯತೆ ಇದೆ.

English summary
ACB police have seized 480 bbmp files and illigal seals from devendrappa house, who was trapped in bribe case.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X