• search
  • Live TV
keyboard_backspace

ಮದ್ಯ, ಮಾದಕ ವಸ್ತುಗಳು ಹಾನಿಕಾರಕ ಹೌದೋ? ಅಲ್ಲವೋ?

By ಮನೋವಿಜ್ಞಾನಿ ಡಾ ಆಚಾರ್ಯ ಶ್ರೀಧರ

ಇತ್ತೀಚಿನ ಕೆಲ ದಿನಗಳಲ್ಲಿ "ಡ್ರಗ್ಸ್" ದಾಳಿ ಎಲ್ಲಾ ಮಾಧ್ಯಮಗಳ ಪ್ರಜ್ಞಾ ಸ್ಥಿತಿಯಲ್ಲಿ ಚುರುಕು ಮೂಡಿಸಿದೆ. ದಿನದುದ್ದಕ್ಕೂ ಚರ್ಚೆ, ರಾಜಕಾರಣಿಗಳ ಅಟ್ಟಹಾಸದ ಮಾತುಗಳು, ತಜ್ಞರ ಹಳಸಿದ ನಿರೂಪಣೆಗಳು, ಚಿಂತಕರ ಆಕ್ರೋಶ, ಹಳೆಯ ಪುರಾಣ, ಪುಣ್ಯಕತೆಗಳ ವ್ಯಾಖ್ಯಾನಗಳು, ಸುರ ಸೋಮ ರಸಗಳನ್ನು ಸೇವಿಸಿ ಸಮೃದ್ಧಿ ಪಡೆದ ಋಷಿ ಮುನಿ ಸಾಧು ಸಂತರ ದಿವ್ಯಾವಾಣಿಗಳು ಈಚಿನ ಮಳೆಗಾಲದ ನದಿ ಪ್ರವಾಹಗಳನ್ನು ಮೀರಿಸಿದ್ದೇನೋ ಎನಿಸುತ್ತದೆ.

ಇವೆಲ್ಲವೂ ಮಾದಕ ವಸ್ತುಗಳ ಸರಬರಾಜಿನಲ್ಲಿದೆ, ಅದರ ವಿತರಕರು, ಬಳಕೆದಾರರು ಸಮಾಜದ ನಾನಾ ವರ್ಗಗಳಿಗೆ ಸೇರಿದವರು, ಶ್ರೀಮಂತರ ಮಕ್ಕಳು, ರಾಜಕಾರಣಿಗಳ ಕುಡಿಗಳು, ಚಲನಚಿತ್ರ, ಕಿರುತಾರೆಯ ತಾರಾಗಣಗಳು, ಸಾಮಾನ್ಯ ಯುವಜನರ ಈ "ಡ್ರಗ್ಸ್" ಬಳಸಿ ಬಳಲುತ್ತಿದ್ದಾರೆ ಎನ್ನುವಂತಹ ಮಾತುಗಳು ಕಣ್ಣ್‌ ಕಿವಿಗಳನ್ನು ತುಂಬಿಸುವಷ್ಟಾಗಿದೆ. ಅದೇನು ಇಷ್ಟಕ್ಕೆ ನಿಲ್ಲವುದಿಲ್ಲ ಬಿಡಿ.

ಗಾರ್ಡನ್ ಸಿಟಿ ಡ್ರಗ್ಸ್ ಘಾಟು; ಸೇಲಂ ಪೊಣ್ಣು, ಆಫ್ರಿಕಾ ಜುಂಬೋ ನಶೆ

ಏಕೆಂದರೆ ಈ ವಿಷಯದ ಬಗ್ಗೆ ನಡೆಯುತ್ತಿರುವ ಚರ್ಚೆ, ಸಂವಾದ, ನಿಯಮ, ನಿಗ್ರಹದ ಪ್ರಯತ್ನಗಳು ನೂರಾರು ವರ್ಷಗಳಿಗಿಂತಲೂ ಹಳೆಯದು. ಈ ಪ್ರಸಂಗದಲ್ಲಿ ಮುಖ್ಯ ಪಾತ್ರಧಾರಿಗಳೆಂದರೆ ರಾಜಕೀಯ ಮತ್ತು ವ್ಯಾಪಾರ. ಹೀಗಾಗಿ ವೈಜ್ಞಾನಿಕ ಅಧ್ಯಯನ, ಶೋಧನೆಗಳ ಪ್ರಯತ್ನ ಫಲಿತಾಂಶಗಳ ಮೇಲೂ ಈ ಪಾತ್ರಧಾರಿಗಳ ಹಿಡಿತ ಇದೆ ಎನ್ನುವುದು ಬಲ್ಲ ಸಂಗತಿಯೇ ಆದರೂ ಬಹಿರಂಗವಾಗಲಾರದ ಸತ್ಯ.

ಕಮ್ಮನಹಳ್ಳಿಯಲ್ಲಿ ಡ್ರಗ್ ಹಬ್ ಸೃಷ್ಟಿಸಿದ್ದ ಪೆಡ್ಲರ್ ಅನೂಪ್

ಏಕೆಂದರೆ ಅಧಿಕಾರವನ್ನು ಹಿಡಿತದಲ್ಲಿರಿಸಿಕೊಂಡಿರುವ ವರ್ಗ ವಿಚಾರ, ವಿವೇಚನೆ, ಸತ್ಯವನ್ನು ಒಪ್ಪಿಕೊಳ್ಳುದಿರುವುದಷ್ಟೇ ಅಲ್ಲ ಅದನ್ನು ತದಕಿ, ಹೊಸಕಿಹಾಕುವುದಕ್ಕೆ ಸದಾ ಸನ್ನದ್ಧರಾಗಿರುವುದು. ಈ ಎಲ್ಲದ್ದಕ್ಕೂ ಮೂಲ ಎನ್ನುವಂತಹ ವಿಷಯವೆಂದರೆ "ಡ್ರಗ್ಸ್".

ಇನ್ನು “ಡ್ರಗ್ಸ್” ಬಳಸುವುದು ಎಂದರೇನು?

ಇನ್ನು “ಡ್ರಗ್ಸ್” ಬಳಸುವುದು ಎಂದರೇನು?

ಡ್ರಗ್ಸ್‌ ಎಂದರೆ ಏನು? ಅದೇನು ಔಷಧಿಯೇ? ಮದ್ದೆ? ರೋಗ ನಿಯಂತ್ರಣ ನಿವಾರಣೆಗಾಗಿ ಬಳಸುವ ವಸ್ತುಗಳೆ? ಅವುಗಳು ವ್ಯಕ್ತಿಯ ಮನಸಿನ ಮೇಲೆ ಕೆಟ್ಟ ಪರಿಣಾಮ ಬೀರುವುದೆ? ಕೆಟ್ಟ ಪರಿಣಾಗಳಿಗೆ ಡ್ರಗ್ಸ್‌ ಎನ್ನುವುದು ಮಾತ್ರವೇ ಕಾರಣವಾ? ಹಾಗಿದ್ದಲ್ಲಿ ಹಾಳಾಗುವುದಕ್ಕಾಗಿಯೇ ಇದನ್ನು ಬಳಸುತ್ತಾರಾ, ಕೆಲವರು? ಇನ್ನು "ಡ್ರಗ್ಸ್" ಬಳಸುವುದು ಎಂದರೇನು? ಹಾಗೆಯೇ ಡ್ರಗ್ಸ್‌ ದಾಸ್ಯ ಹುಟ್ಟಿಸುವುದೆ? ಡ್ರಗ್ಸ್‌ ಪದಾರ್ಥದ ಗುಂಪಿನಲ್ಲಿ ರೋಗ ನಿವಾರಣೆ ಮಾಡುವ ಗುಣಗಳು ಇರಬಲ್ಲದೆ? ಏಕೆಂದರೆ ನೂರಾರು ವರ್ಷಗಳಿಂದಲೂ ವೈದ್ಯಶಾಸ್ತ್ರದಲ್ಲಿ ನೋವು ನಿವಾರಣೆಯ ಚಿಕಿತ್ಸಾ ಕ್ರಮದಲ್ಲಿ ಮನದ ತಲ್ಲಣದ ಸ್ಥಿತಿಗಳನ್ನು ಹತೋಟಿಯಲ್ಲಿರಿಸಿ, ಹಿತಭಾವವನ್ನು ಮೂಡಿಸುವುದಕ್ಕಾಗಿ ಬಳಸಲ್ಪಡುವ ಹಲವಾರು ಔಷಧಿಗಳವೆ.

ಅಂತಹ ಔಷಧಿಗಳನ್ನು ತಯಾರಿಸುವವರು ಉದ್ದೇಶಗಳು ಎಷ್ಟರ ಮಟ್ಟಿಗೆ ಇತಿಮಿತಿಯಲ್ಲಿದೆ? ಎನ್ನುವಂತಹ ನೂರಾರು ಪ್ರಶ್ನೆಗಳನ್ನು ಕೇಳುವ ಅಧ್ಯಯನ, ಪ್ರಯೋಗಗಳು ಲೆಕ್ಕವಿಲ್ಲದಷ್ಟು ಇವೆ. ಆದರೆ ಇವುಗಳೂ ರಾಜಕಾರಣಿ ಮತ್ತು ಔಷಧಿ ತಯಾರಕರ ಸಂಪೂರ್ಣ ಹಿಡಿತದಲ್ಲಿದೆ ಎನ್ನುವುದು ಯಾರಿಗೆ ತಾನೇ ತಿಳಿದಿಲ್ಲ.

ಮದ್ಯ ವ್ಯಸನ ಕೆಟ್ಟ ಪರಿಣಾಮ ಬೀರಿಲ್ಲವೇ?

ಮದ್ಯ ವ್ಯಸನ ಕೆಟ್ಟ ಪರಿಣಾಮ ಬೀರಿಲ್ಲವೇ?

ಇದೇ ರೀತಿಯಲ್ಲಿ ನಶೆ, ಮಾದಕ ಮಾನಸಿಕ ಸ್ಥಿತಿಯನ್ನು ಮೂಡಿಸುವ ಧೂಮಪಾನ, ವಿವಿಧ ರೀತಿಯ ಮದ್ಯಗಳೂ ಕೂಡ ಕೆಲ ವ್ಯಕ್ತಿಗಳ ಮನಸನ್ನು ಸುಲಭವಾಗಿ ವಶಪಡಿಸಿಕೊಳ್ಳಬಲ್ಲದ್ದಾಗಿರುವುದು. ಆದರೆ ಅವುಗಳ ಮೇಲೆ ಇರುವಂತಹ ನಿಯಂತ್ರಣಗಳು ಎಂತಹದ್ದು ಎನ್ನುವುದರ ವಿವರಣೆ ಅನಗತ್ಯ.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ಕೋವಿಡ್‌19 ರ ಸಮಯದಲ್ಲಿ ತಾತ್ಕಾಲಿಕವಾಗಿ ಮದ್ಯ ಮಾರಾಟ ನಿಂತಿದ್ದನ್ನು ಅತಿ ಶೀಘ್ರವಾಗಿ ಸಡಿಲಗೊಳಿಸುವುದಕ್ಕೆ ಸಿದ್ದವಾಗಿದ್ದು ಸರಕಾರಗಳಲ್ಲವೆ? ಮದ್ಯ ವ್ಯಸನವು ವ್ಯಕ್ತಿ ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರಲ್ಲವೆ? ಇನ್ನು ವ್ಯಕ್ತಿ ಶರೀರದ ಮೇಲೂ ಇದರ ಕೆಟ್ಟ ಪರಿಣಾಮವಿದೆ ಎನ್ನುವುದನ್ನು ಸಣ್ಣ ಮಗುವೂ ತಿಳಿದಿರುತ್ತದೆ.

ನಿರ್ದಿಷ್ಟ ಪ್ರಮಾಣದಲ್ಲಿ ಬಳಕೆ

ನಿರ್ದಿಷ್ಟ ಪ್ರಮಾಣದಲ್ಲಿ ಬಳಕೆ

ಇಂತಹ ವಿಷಯಗಳೇಕೆ ಪದೇ ಪದೇ ಚರ್ಚೆ ಮತ್ತು ತಿಳಿವಳಿಕೆಗೆ ಬರುವುದಿಲ್ಲ ಮತ್ತು ನಿಯಂತ್ರಣ ಸಾಧ್ಯವಿದ್ದರೂ ಕೂಡ ಅದರತ್ತ ಮನಸೇಕೆ ಹರಿಸುತ್ತಿಲ್ಲ ಸರಕಾರಗಳು. ಬದಲಿಗೆ ಮಾದಕ ವಸ್ತುಗಳನ್ನಷ್ಟೇ ಕಾನೂನು ಬಾಹಿರ ಎಂದು ಗುರುತಿಸಿ ಅಸಹಾಯಕ ಮಾನಸಿಕ ಸ್ಥಿತಿಯಲ್ಲಿರುವವರನ್ನು, ಅದರಲ್ಲಿಯೂ ಯುವಜನರು, ಸೂಕ್ಷ್ಮ ಮತಿಗಳು ಮತ್ತು ಸಮಸ್ಯಾತ್ಮಕ ಸನ್ನಿವೇಶಗಳಲ್ಲಿ ಸಿಕ್ಕಿರುವವರು ಅನಿವಾರ್ಯ ಎನ್ನುವಂತಹ ಸ್ಥಿತಿಯಲ್ಲಿ ಬಳಸಿದಾಗ ಸದ್ದು ಗದ್ದಲಗಳ ಮೂಲಕ ವಿಷಯದ ಮೂಲವನ್ನೇ ತಿರುಚಿ, ಮರೆಮಾಡಿ ವ್ಯಕ್ತಿಗಳನ್ನು ಸಮಾಜ ದ್ರೋಹಿಗಳೆಂದು ಪರಿಗಣಿಸುವ ಪ್ರಯತ್ನಗಳು ಅಮಾನವೀಯ ಎನಿಸುವುದಿಲ್ಲವೆ? ಈ ಕಾರಣದಿಂದಲೇ ಕೆಲ ರಾಷ್ಟ್ರಗಳಲ್ಲಿ ಮಾದಕ ವಸ್ತುಗಳನ್ನು ಕೆಲವೊಂದು ನಿರ್ದಿಷ್ಟ ಪ್ರಮಾಣದಲ್ಲಿ ಬಳಸುವುದಕ್ಕೆ ಮುಕ್ತ ಅವಕಾಶ ಮಾಡಿಕೊಟ್ಟಿರುವುದು.

ಮುಕ್ತವಾಗಿ ಬಳಸಬಹುದಾದ ಮಾದಕ ವಸ್ತುಗಳು

ಮುಕ್ತವಾಗಿ ಬಳಸಬಹುದಾದ ಮಾದಕ ವಸ್ತುಗಳು

ಮುಕ್ತವಾಗಿ ಬಳಸಬಹುದಾದ ಮಾದಕ ವಸ್ತುಗಳು, ವ್ಯಕ್ತಿಯ ವರ್ತನೆಯ ಮೇಲೆ ಅವು ಬೀರುವಂತಹ ಕೆಟ್ಟ ಪರಿಣಾಮ ಮತ್ತು ಅಧಿಕ ಸೇವನೆಯನ್ನು ಹೆಚ್ಚಿಸುವ, ಅಮಲೇರಿಸಬಲ್ಲ ಬಲವನ್ನು ಗಮನಿಸಿ ಸಾರ್ವಜನಿಕ ಬಳಕೆಗೆ ಬಿಡಲಾಗುತ್ತದೆ. ಒಂದು ರೀತಿಯಲ್ಲಿ ಸಿಗರೇಟು, ಬೀಡಿ, ಗುಟ್ಕಾ, ಮದ್ಯದಂಗಡಿಗಳು ಮಾರಾಟ ಮಾಡುತ್ತಿರುವ ರೀತಿಯಲ್ಲಿ. ಸಾವಿರಾರು ಜನ ಮದ್ಯ ಸೇವಿಸುತ್ತಾರಾದರೂ ಹತ್ತಾರು ಜನರಷ್ಟೇ ಅದಕ್ಕೆ ಅಂಟಿಕೊಳ್ಳುತ್ತಾರೆ. ಇದನ್ನು ಮತ್ತಷ್ಟು ವಿವರಿಸುವ ಅಗತ್ಯವಿದೆಯೆ?

ನಟನಾ ಕೌಶಲ್ಯ ಇರುವವರೆಲ್ಲರೂ ನಟರಾಗದಿರಬಹುದು, ನಟನೆಯಲ್ಲಿ ಅಭಿರುಚಿ ಇದ್ದು ಕೌಶಲ್ಯ ವೃದ್ಧಿಸಿಕೊಳ್ಳುವುದಕ್ಕೆ ಚಲನಚಿತ್ರ ರಂಗ ಅವಕಾಶ ಕಲ್ಪಿಸುತ್ತದೆ. ಇಂತಹವರು ತಮ್ಮ ವೃತ್ತಿ ಬದುಕನ್ನು ಅನಗತ್ಯವಾಗಿ ನಾಶಪಡಿಸಿಕೊಳ್ಳುತ್ತಾರೆ ಎನ್ನುವುದು ಖಂಡಿತವಾಗಿಯೂ ಹುಂಬತನವಷ್ಟೇ.

ಪರಿಪೂರ್ಣ ವೈಜ್ಞಾನಿಕ ವಿವರಣೆಗಳು ಅಗತ್ಯ

ಪರಿಪೂರ್ಣ ವೈಜ್ಞಾನಿಕ ವಿವರಣೆಗಳು ಅಗತ್ಯ

ಒಂದು ವೇಳೆ ಮದ್ಯ ಸೇವನೆಯು ಮನಸಿಗೆ ಹಿತಕೊಡುತ್ತದೆ ಎನ್ನುವ ಕಲ್ಪನೆಯು ಅವರ ವೃತ್ತಿ ಘರ್ಷಣೆ, ಸಂಕಟಗಳನ್ನು ಇಳಿಸುವ ಗುಣ ಹೊಂದಿದ್ದರೇ ಆ ಲಕ್ಷಣಗಳನ್ನು ಅನೈತಿಕ, ಸಮಾಜವಿರೋಧಿ ಎನ್ನುವಂತಹ ಮಾತುಗಳನ್ನು ಪ್ರಶ್ನಿಸಬೇಕಾಗುವುದು. ಯುವ ನಟನೊಬ್ಬ ಮಾದಕ ವಸ್ತುವನ್ನು ಹಿತಮಿತವಾಗಿ ಬಳಸುತ್ತೇನೆ ಎನ್ನುವ ಮಾತುಗಳು... ನಾನು ಮಲಗುವ ಮುಂಚೆ ಕಾಫಿ ಕುಡಿಯುತ್ತೇನೆ- ಎನ್ನುವ ಮಾತಿನ ಅರ್ಥವನ್ನಷ್ಟೇ ಹೊಂದಿರುತ್ತದೆ.

ಇನ್ನು ಮದ್ಯ, ಮಾದಕ ವಸ್ತುಗಳ ಸೇವನೆಯ ಬಗ್ಗೆ ಪರಿಪೂರ್ಣ ವೈಜ್ಞಾನಿಕ ವಿವರಣೆಗಳು ಹೊರಬರಬೇಕಾದರೆ ರಾಜಕಾರಣಿಗಳ ಅಧಿಕಾರದ ನಶೆ ಮತ್ತು ಔಷಧಿ ತಯಾರಿಕರ ಹಣಮಾಡುವ ಅಮಲು ಸಂಪೂರ್ಣವಾಗಿ ಇಳಿದಾಗ ಮಾತ್ರ. ಆಗಷ್ಟೇ ಮದ್ಯ, ಮಾದಕ ವಸ್ತುಗಳು ಹಾನಿಕಾರಕ ಹೌದೋ? ಅಲ್ಲವೋ ಎನ್ನುವುದು ಗೊತ್ತಾಗುವುದು.

English summary
A Debate: Is liquor, Synthetic Drugs harmful to health explains psychiatrist Dr A Sridhar, Bengaluru.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X