ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಾರೋಪಕ್ಕೆ ಡಾ. ಬರಗೂರು ಬರ್ತಾರಾ? ಇಲ್ವಾ!

By Srinath
|
Google Oneindia Kannada News

Baraguru valedictory
ಬೆಂಗಳೂರು, ಮಾ. 13: ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನೆಗೆ ಇನ್ಫಿ ನಾರಾಯಣ ಮೂರ್ತಿ ಅವರನ್ನು ಆಹ್ವಾನಿಸಿದ್ದಕ್ಕೆ ರಾಜ್ಯ ಸರಕಾರದ ನಿಲುವಿಗೆ ತಾತ್ವಿಕ ವಿರೋಧ ವ್ಯಕ್ತಪಡಿಸಿ ಸುದ್ದಿಯಾಗಿದ್ದ ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರೀಗ ಸಮ್ಮೇಳನದ ಸಮಾರೋಪಕ್ಕೂ ತಾವು ಬರುವುದಿಲ್ಲ ಎಂದು ಸರಕಾರಕ್ಕೆ ಶನಿವಾರ ಪತ್ರ ಬರೆದು ಸ್ಪಷ್ಟಪಡಿಸಿದ್ದಾರೆ. ಗಮನಾರ್ಹವೆಂದರೆ ಸಮ್ಮೇಳನದಲ್ಲಿ ಒಂದೆರಡು ದಿನದಿಂದ ಸಾಹಿತ್ಯಾಸಕ್ತರು ಗುಂಪುಗೂಡಿದಾಗ ಇದು ಪ್ರಮುಖ ಚರ್ಚೆಯ ವಿಷಯವಾಗಿತ್ತು. ವಿವಾದ ತಣ್ಣಗಾಗಿದೆ, ಬರಗೂರು ಬರುತ್ತಾರೆ ಎಂದು ಸಂಘಟಕರೂ ಹೇಳಿದ್ದರು.

ಈ ವಿವಾದ ಸೃಷ್ಟಿಯಾಗುವ ಮುನ್ನವೇ ಸರಕಾರ ಸಮ್ಮೇಳನದ ಸಮಾರೋಪ ಸಮಾರಂಭದ ಆತಿಥಿಗಳ ಪಟ್ಟಿಯಲ್ಲಿ ಡಾ. ಬರಗೂರು ಹೆಸರನ್ನು ಸೇರಿಸಿತ್ತು. ಸಮ್ಮೇಳನದ ವಿಶೇಷಾಧಿಕಾರಿ ಡಾ. ಐ.ಎಂ. ವಿಠ್ಠಲಮೂರ್ತಿ ದೂರವಾಣಿ ಮೂಲಕ ಅವರನ್ನು ಅಹ್ವಾನಿಸಿದ್ದರು. ಆದರೆ, ಸ್ವತಃ ಈಗ ಬರಗೂರು ಪತ್ರ ಬರೆದು ಯಾವುದೇ ಕಾರಣಕ್ಕೂ ತಾವು ಸಮ್ಮೇಳನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

'ಸಮ್ಮೇಳನ ಉದ್ಘಾಟನೆ ವಿಷಯದಲ್ಲಿ ತಾತ್ತ್ವಿಕ ವಿರೋಧ ವ್ಯಕ್ತಪಡಿಸಿದ ನಾನು ನನ್ನ ನೈತಿಕತೆ ಮತ್ತು ವಿಶ್ವಾಸಾರ್ಹತೆಯ ದೃಷ್ಟಿಯಿಂದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸುತ್ತಿಲ್ಲ. ಇದು ನನ್ನ ತಾತ್ವಿಕ ವಿರೋಧದ ನೆಲೆಗೆ ಅನುಗುಣವಾಗಿದೆ. ತಾವು ಅರ್ಥ ಮಾಡಿಕೊಳ್ಳುವಿರೆಂದು ನಂಬಿರುವೆ. ಇದು ವಿವಾದವೂ ಆಗುವುದು ಬೇಡ. ಇಷ್ಟಾದರೂ ನಾನು ಸಮ್ಮೇಳನದ ವಿರೋಧಿಯಲ್ಲ. ನನ್ನ ಬಹಿಷ್ಕಾರವೂ ಅಲ್ಲ. ನೈತಿಕ ನೆಲೆಯ ಗೈರು ಹಾಜರಿ ಅಷ್ಟೆ. ಸಮ್ಮೇಳನ ಯಶಸ್ವಿಯಾಗಲಿ' ಎಂದು ಅವರು ಪತ್ರದಲ್ಲಿ ಹಾರೈಸಿದ್ದಾರೆ.

ಅತ್ತೂ ಕರೆದೂ ಆಮಂತ್ರಣ:
ಈ ಮಧ್ಯೆ ಇಂದು (ಮಾರ್ಚ್ 13) ನಡೆಯಲಿರುವ ಸಮ್ಮಳನದ ಸಮಾರೋಪದ ಅಧ್ಯಕ್ಷತೆ ವಹಿಸಲಿರುವ ಹಿರಿಯ ಪತ್ರಕರ್ತ, ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರಿಗೆ ಸರಕಾರದಿಂದ ಅಧಿಕೃತ ಕರೆ ಬಂದಿದೆ. ಸಮ್ಮೇಳನದ ಆಯೋಜಕರಾಗಲಿ ಅಥವಾ ಸರಕಾರವಾಗಲಿ ತಮ್ಮನ್ನು ಸರಿಯಾಗಿ ಆಹ್ವಾನಿಸಿಲ್ಲ ಎಂದು ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿ, ತೀವ್ರ ಅಸಾಮಾಧಾನ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಧಾರವಾಡದ ಜಿಲ್ಲಾಧಿಕಾರಿ ದರ್ಪಣ ಜೈನ್ ಶುಕ್ರವಾರ ಸಂಜೆ ಪಾಪು ಮನೆಗೆ ಭೇಟಿ ನೀಡಿ, ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಸರಕಾರದ ವತಿಯಿಂದ ವಿನಂತಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಮ್ಮೇಳನದ ವಿಶೇಷಾಧಿಕಾರಿ ಡಾ. ಐ.ಎಂ. ವಿಠ್ಠಲಮೂರ್ತಿ ಅವರು ಶನಿವಾರ ಪಾಪು ಜತೆ ದೂರವಾಣಿಯಲ್ಲಿ ಮಾತನಾಡಿ, ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದ್ದಾರೆ.

English summary
Rebel writer and Kannada film Director Prof Baraguru Ramachandrappa as well known was against Infosys NR Narayan Murthy to inaugurate the Belgaum Kannada Convention. Prof Baraguru has written a letter to state government on saturday making his stand clear on the issue and informed that he is not participating in valedictory function of the Convention.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X