ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮ್ಮೇಳನ ವಿರೋಧಿಸಿ ಒಂಟೆ ಏರಿದ ವಾಟಾಳ್ ಅಳಲು

By Mahesh
|
Google Oneindia Kannada News

Vatal protest against VKS 2011
ಬೆಂಗಳೂರು, ಮಾ.12: ಉತ್ಸವ, ಮೆರವಣಿಗೆಗಳಿಂದ ಕನ್ನಡ ನಾಡು-ನುಡಿಯ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಕನ್ನಡ ಚಳವಳಿ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ವಿಶ್ವ ಕನ್ನಡ ಸಮ್ಮೇಳನ ವಿರೋಧಿಸಿ ಒಂಟೆಯ ಮೇಲೆ ಕುಳಿತು ವಿನೂತನ ರೀತಿಯಲ್ಲಿ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆದರೆ, ಇದೇ ವಾಟಾಳ್ ನಾಗರಾಜ್ 77ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರಿಯಾಗಿ ಆಹ್ವಾನ ಸಿಗಲಿಲ್ಲ ಎಂದು ಹೇಳಿ ಕನ್ನಡ ಹಬ್ಬಕ್ಕೆ ಚಕ್ಕರ್ ಹೊಡೆದಿದ್ದರು. ಪ್ರತಿ ಬಾರಿ ಪ್ರತಿಭಟನೆ ಮಾಡುವಾಗಲೂ ಒಂದಲ್ಲ ಒಂದು ಪ್ರಾಣಿಯನ್ನು ಹಿಡಿದು ತರುವ ವಾಟಾಳ್ ಅವರ ಮೇಲೆ ಪೆಟಾ, ಪ್ರಾಣಿ ದಯಾ ಸಂಘದವರು ಇನ್ನೂ ಯಾವುದೇ ವಿರೋಧ ವ್ಯಕ್ತಪಡಿಸದಿರುವುದು ಆಶ್ಚರ್ಯದ ಸಂಗತಿ.

ಬೆಳಗಾವಿ ಸಮ್ಮೇಳನದ ಉದ್ಘಾಟನಾ ಚಿತ್ರಗಳು

ಮೈಸೂರು ಸರ್ಕಲ್ ಬಳಿ ನಿಂತ ವಾಟಾಳ್ ಹೇಳಿದ್ದಿಷ್ಟು, ರಾಜ್ಯದಲ್ಲಿ ಕನ್ನಡಿಗರು ಸಮಸ್ಯೆಗಳ ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಸರಕಾರ ನಡೆಸುತ್ತಿರುವ ವಿಶ್ವ ಕನ್ನಡ ಸಮ್ಮೇಳನದಿಂದ ಯಾವ ಪ್ರಯೋಜನವೂ ಇಲ್ಲ. ಹೈದರಾಬಾದ್ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿ ಸಲಾಗಿದೆ. ನೆರೆ ಸಂತ್ರಸ್ತರು ಯಾತನೆಯಲ್ಲಿದ್ದಾರೆ. ಅವರಿಗೆ ಸರಿಯಾದ ಸೂರಿಲ್ಲ. ಈ ಸಂದರ್ಭದಲ್ಲಿ ಸಮ್ಮೇಳನದ ಅಗತ್ಯವಿತ್ತೆ ಎಂದು ಉಚ್ಚ ಸ್ಥಾಯಿಯಲ್ಲಿ ಗರ್ಜಿಸಿದ್ದಾರೆ.

ಸೂತಕದ ಮನೆಯಲ್ಲಿ ಸಂಭ್ರಮದ ಮೆರವಣಿಗೆ ಬೇಕೆ ಎಂದು ಸರ್ಕಾರವನ್ನು ಪ್ರಶ್ನಿಸಿದ ವಾಟಾಳ್, ತಾನು ಕಳೆದ 50 ವರ್ಷಗಳಿಂದ ರಾಜ್ಯದಲ್ಲಿ ಕನ್ನಡಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಕನಿಷ್ಠ ಸೌಜನ್ಯಕ್ಕಾದರೂ ತನ್ನನ್ನು ಆಹ್ವಾನಿಸಿಲ್ಲ ಎಂದು ಆಪಾದನೆ ಮಾಡಿದರು. ಅಲ್ಲಿ ನೆರೆದಿದ್ದ ಮೂರು ಮತ್ತೊಂದು ಜನ ಜೋರಾಗಿ ಚಪ್ಪಾಳೆ ತಟ್ಟಿದರು. ಇದರಿಂದ ಉತ್ತೇಜನಗೊಂಡ ವಾಟಾಳ್, ವ್ಯಾಪಾರಿ ಮನೋಭಾವದ ಇನ್ಫೋಸಿಸ್ ನಾರಾಯಣಮೂರ್ತಿ ಕನ್ನಡ ನಾಯಕರಾಗಿದ್ದು ಹೇಗೆ? ಬಿಜೆಪಿ ಸರ್ಕಾರ ಕನ್ನಡ ಚಳವಳಿಯನ್ನು ನಿರ್ಲಕ್ಷಿಸಿದೆ ಎಂದು ಗುಡುಗಿದರು.

English summary
Kannada activist Vatal Nagaraj opposed Belgaum Kannada Convention and held a Kannada awareness Rally at Mysore bank circle in Bangalore on Friday. He said Kannada Convention and conference won't help in developing border city Belagavi. He also condemned Karnataka government for not inviting him for the mega Kannada meet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X