ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ ಸಮ್ಮೇಳನಕ್ಕೆ ಯುಕೆ ಕನ್ನಡಿಗರ ಲಗ್ಗೆ

By * ಡಾ. ರಾಜಾರಾಮ್ ಕಾವಳೆ
|
Google Oneindia Kannada News

Kannada Balaga UK off to Belgaum Kannada Convention
ಕರ್ನಾಟಕ ಏಕೀಕರಣಗೊಂಡು 50 ವರ್ಷಗಳು ತುಂಬಿರುವ ಸವಿನೆನಪಿಗಾಗಿ ಕರ್ನಾಟಕ ಸರ್ಕಾರವು ಸುವರ್ಣೋತ್ಸವದ ಸಲುವಾಗಿ ಬೆಳಗಾವಿಯಲ್ಲಿ ಇದೇ ಮಾ.11ರಿಂದ 13ರವರೆಗೆ ನಡೆಯಲಿರುವ ವಿಶ್ವಕನ್ನಡ ಸಮ್ಮೇಳನದಲ್ಲಿ ಕನ್ನಡಬಳಗ ಯುಕೆ ತಂಡವೊಂದು ಭಾಗವಹಿಸಲಿದೆ. ಕನ್ನಡಬಳಗದ ಅಧ್ಯಕ್ಷಿಣಿಯಾದ ಸುರೇಣು ಜಯರಾಮ್ ಅವರ ನೇತೃತ್ವದಲ್ಲಿ ಭಾಗವಹಿಸಲಿರುವ ತಂಡದ ಸದಸ್ಯರು ಕೆಳಗೆ ನಮೂದಿಸಿರುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

* ಡಾ. ಜೋತ್ಸ್ನ ಶ್ರೀಕಾಂತ್ ಅವರ "ಫ್ಯೂಶನ್ ಡ್ರೀಮ್ಸ್" ಎಂಬ ಭಾರತೀಯ ಜ್ಯಾಸ್ ಮತ್ತು ಸಮಕಾಲೀನ ಭಾರತೀಯ ಸಂಗೀತದ ಸಮ್ಮಿಳನವನ್ನು ಒಳಗೊಂಡ ತಮ್ಮ ಪಿಟೀಲು ಗಾನಗೋಷ್ಠಿ.

* ದೇವಿಕ ರಾವ್ ಮತ್ತು ತಂಡದವರ ಯಕ್ಷಗಾನ ಮತ್ತು ನಾಟ್ಯಗಳ ಮಿಶ್ರಶ್ರೇಣಿ.

* ಚಿತ್ರಕಲಾ ಮತ್ತು ತಂಡದವರಿಂದ "ಮಾಯಾ ಅಯಮ್" ಎಂಬ ದಶಾವತಾರದ ನಾಟ್ಯರೂಪಕ.

* ಡಾ. ಉಮಾ ವೆಂಕಟೇಶ್ ಅವರು ಸಾಹಿತ್ಯಗೋಷ್ಠಿಯಲ್ಲಿ ಭಾಗವಹಿಸುವರು.

ಡಾ. ಭಾನುಮತಿಯವರು ವಿಶ್ವಕನ್ನಡಸಮ್ಮೇಳನಕ್ಕೆ ಬ್ರಿಟನ್ನಿನ ಸಂಯೋಜಕರಾಗಿ ಭಾಗವಹಿಸುವರು. ಕನ್ನಡಬಳಗ ಯು.ಕೆ.ಯ ಕಾರ್ಯಕಾರಿ ಸಮಿತಿಯವರು ಮತ್ತು ಬಳಗದ ಎಲ್ಲಾ ಸದಸ್ಯರು ಈ ತಂಡಕ್ಕೆ ವಿಶ್ವಕನ್ನಡ ಸಮ್ಮೇಳನದಲ್ಲಿ ಜಯವಾಗಲಿ ಎಂದು ಶುಭಕೋರಿ ತಂಡವನ್ನು ಬೀಳ್ಕೊಟ್ಟರು.

English summary
A contingent of representatives from Kannada balaga uk participating in Belgaum Kannada Sammelana, 2011. The artists from UK are giving performances at Belgaum Kannada Convention.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X