• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರತೆಗಳ ಒರತೆ, ಸತ್ಯಮೇವ ಜಯತೆ!

By Shami
|

ಬೆಳಗಾವಿ, ಮಾ. 10 : ಕರ್ನಾಟಕಕ್ಕೆ ಜಯವಾಗಲಿ, ತಾಯಿ ಭುವನೇಶ್ವರಿಗೆ ನಮಸ್ಕಾರ, ಕನ್ನಡ ಸಾಹಿತ್ಯ ಸಂಸ್ಕೃತಿ ಸಹಸ್ರ ಸಹಸ್ರ ವರ್ಷ ಬದುಕಲಿ ಮತ್ತು ಬಾಳಲಿ. ಇದು ನಮ್ಮ ಮನದಾಳದ ಅಪೇಕ್ಷೆ. ಆದರೆ, ಮಂಗಳೂರಿನಿಂದ ಬೆಳಗಾವಿ ತನಕ ಬಂದ ನಾವು ಐವತ್ತು ಮಂದಿಗೆ ಸಮ್ಮೇಳನದಲ್ಲಿ ಊಟ ಇಲ್ಲ, ಊರಲ್ಲಿ ಮಲಗಲು ಜಾಗವಿಲ್ಲ. ಎರಡು ಸಾವಿರ ರು. ಕೊಡುತ್ತೇನೆಂದರೂ ಹೊಟೇಲ್ ನಲ್ಲಿ ರೂಂ ಖಾಲಿ ಇಲ್ಲ. ಆಹ್ವಾನಿತರು, ಗಣ್ಯರು ಮತ್ತು ಆಹ್ವಾನಿತರ ಅತಿಥಿ ಸತ್ಕಾರಕ್ಕೋಸ್ಕರ ಬೆಳಗಾವಿ ಜಿಲ್ಲಾಧಿಕಾರಿ ಏಕರೂಪ್ ಕೌರ್ ಎಲ್ಲಾ ಹೊಟೇಲುಗಳ ಎಲ್ಲಾ ರೂಂಗಳನ್ನು ಬುಕ್ ಮಾಡಿದ್ದಾರೆ. ಓ ಬೆಳಗಾವಿ, ನನಗೆ ಇಂದು ಮಲಗಲು ಜಾಗ ಕೊಡುವೆಯಾ?

ಸಮ್ಮೇಳನ ತಾಣದ ಸುತ್ತಮುತ್ತ ಮತ್ತು ಊರೆಲ್ಲ ಅಡ್ಡಾಡಿ ಜನಾಭಿಪ್ರಾಯ ಸಂಗ್ರಹಣೆ ಮಾಡುತ್ತಿರುವ ನಮ್ಮ ವರದಿಗಾರರ ಕಿವಿಗೆ ಬಿದ್ದ ಅಳಲುಗಳು ಇಂಥವು ಇನ್ನೆಷ್ಟೊ. ಮಂಗಳೂರಿನ ರಮಾನಾಥ ಶೆಣೈ ಇರಲು ಜಾಗವಿಲ್ಲದೆ ಪರದಾಡುತ್ತಿದ್ದರು. ಅಯ್ಯೋ ಅದಕ್ಕೇನಂತೆ ದಟ್ಸ್ ಕನ್ನಡ ಕಚೇರಿಯಲ್ಲೇ ಬಂದು ಮಲಗಿರಿ ಎಂದು ಕರೆದರೆ ಅಯ್ಯೋ ಪೇಪರ್ ರಿಪೋರ್ಟರ್ಸ್ ಜೊತೆಗೆ ಬೇಡ ಸಾರ್, ನೀವು ತುಂಬಾ ಬಿಜಿ ಎಂದು ಹೇಳಿ ಶೆಣೈ ಕಿರ್ಲೋಸ್ಕರ್ ರೋಡಲ್ಲಿ ಮರೆಯಾದರು.

* ಬೆಳಗಾವಿಯ ಸಮ್ಮೇಳನದ ಭೋಜನ ಶಾಲೆಯಿಂದ ಆಹಾರ ಪೂರೈಕೆಯಾಗುವುದು ಶುಕ್ರವಾರ ಬೆಳಿಗ್ಗೆಯಿಂದ ಮಾತ್ರ. ಅಲ್ಲಿಯವರೆಗೆ ನಿಮ್ಮ ವ್ಯವಸ್ಥೆಯನ್ನು ನೀವೇ ಮಾಡಿಕೊಳ್ಳಬೇಕು. ಬೆಳಗಾವಿಯಲ್ಲಿ ಹೊಟೇಲಿನಲ್ಲಿ ಕೊರತೆಯೇನಿಲ್ಲ. ಬೇಕಾದಷ್ಟು ಖಾನಾವಳಿಗಳಿವೆ. ನಮ್ಮ ಸಲಹೆ ಬಸ್ ಸ್ಟ್ಯಾಂಡ್ ಸಮೀಪ ಇರುವ ಸಾಯಿ ಲಂಚ್ ಹೋಂ. ಜೋಳದ ರೊಟ್ಟಿ ಕಾಯಿಪಲ್ಲೆ ಅನ್ನ ಸಾರು ಮೊಸರು ಮತ್ತು ಈರುಳ್ಳಿ. ಅಯ್ಯೋ, ಈ ಪುಳಿಚಾರ್ ಯಾರಿಗಪ್ಪ ಅನ್ನುವವರಿಗೆ ಬಸ್ ಸ್ಟ್ಯಾಂಡ್ ಹತ್ತಿರವಿರುವ ಹೊಟೇಲಿ ನಿಯಾಜ್ ನಿಮಗಾಗಿ ಕಾಯುತ್ತಿದೆ. ಬಿರಿಯಾನಿ, ಖೀಮಾ ಮತ್ತು ಎಗ್ ಬುರ್ಜಿ ಎರಡು ಪ್ಲೇಟ್ ಆರ್ಡರ್ ಮಾಡಿ. ಏನೂ ದಕ್ಕದಿದ್ದರೆ ರಸ್ತೆಯಲ್ಲಿ ಕಡ್ಲೆಕಾಯಿ ಬೀಜ, ಮಸಾಲಾ ಬಟಾಣಿ ಸಿಗೋದು ಗ್ಯಾರಂಟಿ. ಎಲ್ಲಿ ಅಂತೀರಾ? ಆದಿತ್ಯಾ ಆರ್ಕೇಡ್ ಕಾಂಪೌಂಡ್, ಅಪೋಸಿಟ್ ಟು ಹೊಟೇಲ್ ಹನುಮಾನ್!

ನಾನ್ ವೆಜ್ ಆಹಾರ ಮತ್ತು ವಸತಿ ಎರಡೂ ಒಂದೇ ಕಡೆ ದೊರೆಯುವ ಜಾಗ ಕೊಲ್ಹಾಪೂರ್ ಸರ್ಕಲ್ ಸಮೀಪವಿರುವ ಹೊಟೇಲ್ ರಾಮದೇವ್. ಇಲ್ಲಿ ನಿಮಗೆ ಏನು ಬೇಕೋ ಅದೆಲ್ಲ ಲಭ್ಯ. ಟ್ರೈ ಮಾಡಿ ಗುಡ್ ಲಕ್. ಜೈ ಕನ್ನಡಾಂಬೆ.

ಬೈ ದಿ ವೇ, ನಮ್ಮ ಸುದ್ದಿ ಸಂಪಾದಕರು ಅಡುಗೆ ಶಾಲೆಗೆ ಹೋಗಿ ಬಂದಿದ್ದರು. ಅಲ್ಲಿ ಮೂರು ಮೂರು ಹೊತ್ತು ಆಹಾರ ಪೂರೈಕೆಗೆ ಭರ್ಜರಿ ವ್ಯವಸ್ಥೆಗಳು ನಡೆಯುತ್ತಿವೆ. ಸಚಿವ ಉಮೇಶ್ ಕತ್ತಿ ಕೆಎಲ್ಇ ಸರದಾರ ಪ್ರಭಾಕರ್ ಕೋರೆ ಅವರ ಸುಪರ್ದಿನಲ್ಲಿ ಮೇಜವಾನಿಗೆ ಏನೂ ಕೊರತೆಯಿಲ್ಲ. ಶುಕ್ರವಾರ ಬೆಳಿಗ್ಗೆಯಿಂದ ಭಾನುವಾರ ರಾತ್ರಿಯವರೆಗೆ ಒಟ್ಟು 7 ಭೋಜನ ಶಾಲೆಗಳಲ್ಲಿ ಏರ್ಪಡಿಸಲಾಗಿರುವ ಸಮಾರಾಧನೆಯಲ್ಲಿ ಊಟ, ತಿಂಡಿ ಏನೇನಿದೆ? ಗಡಿಬಿಡಿ ಮಾಡಬೇಡಿ ಸ್ವಲ್ಪ ತಾಳಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The city of Belgaum struggling to contain the influx of guests pouring in to participate in World Kannada Convention. Hospitality industry in Belgaum yet to develop.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more