ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮ್ಮೇಳನಕ್ಕೆ ಬೆಂಬಲ : ಬೆಳಗಾವಿ ಆಟೋರಿಕ್ಷಾ

By * ಪ್ರಸಾದ ನಾಯಿಕ
|
Google Oneindia Kannada News

Belgaum auto drivers support Kannada Sammelana
ಬೆಳಗಾವಿ, ಮಾ. 10 : ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ನಗರದ ಆಟೋ ರಿಕ್ಷಾ ಚಾಲಕರು ಸಾರ್ವಜನಿಕರೊಂದಿಗೆ ಸಹಕರಿಸುವುದರ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸುವಲ್ಲಿ ಸ್ಮರಣೀಯ ಪಾತ್ರ ವಹಿಸಬೇಕೆಂದು ಜಿಲ್ಲಾಧಿಕಾರಿ ಏಕರೂಪ್ ಕೌರ್ ಮನವಿ ಮಾಡಿದ್ದಾರೆ. ಮಾರ್ಚ್ 10 ಗುರುವಾರದಿಂದ ಆರಂಭವಾಗುವಂತೆ ನೂತನ ಆದೇಶ ಜಾರಿಯಾಗಿದ್ದು, ಆಟೋ ಮೀಟರ್ ರೇಟುಗಳು ಮತ್ತು ಸೇವಾ ನಿಯಮಗಳು ಬದಲಾಗಿವೆ.

ಆದೇಶದ ಪ್ರಕಾರ, ಆಟೋದಲ್ಲಿ ಐದು ಪ್ರಯಾಣಿಕರನ್ನು ಕುಳ್ಳಿರಿಸಬಹುದಾಗಿದೆ. ಕನಿಷ್ಠ ಆಟೋದರ 15 ರು.ದಿಂದ 20 ರು.ಗೆ ಏರಿಸಲಾಗಿದೆ. ಆದರೆ, ಏಕಕಾಲಕ್ಕೆ ಐದು ಜನ ಪ್ರಯಾಣಿಕರನ್ನು ಕರೆದೊಯ್ಯಬಹುದಾದದ್ದು ಸಾರ್ವಜನಿಕರಿಗೆ ಬೋನಸ್. ಅಂದ ಹಾಗೆ, ಎರಡು ಕಿ.ಮೀ. ನಂತರದ ಪ್ರತಿ ಕಿ.ಮೀ. ದರ 4 ರು.

ಬೆಳಗಾವಿಯಲ್ಲಿ ಸುಮಾರು ಎಂಟು ಸಾವಿರ ಆಟೋ ರಿಕ್ಷಾಗಳು ಹರಿದಾಡುತ್ತವೆ. ಬಹುತೇಕ ಆಟೋಗಳು 2 ಸ್ಟ್ರೋಕ್ ಇಂಜಿನ್ ದವಾದರೆ, ಇತ್ತೀಚೆಗೆ ಬರುತ್ತಿರುವ ಆಟೋಗಳೆಲ್ಲ 4 ಸ್ಟ್ರೋಕ್ ಮಾಡೆಲ್ ಗಳಾಗಿವೆ. ಎಲ್ಲಾ ಆಟೋಗಳಿಗೂ ಲಾಕ್ ಅಂಡ್ ಬೋಲ್ಟ್ ಸೌಲಭ್ಯವಿರುವ ಬಾಗಿಲುಗಳಿವೆ. ಮಕ್ಕಳನ್ನು ಶಾಲೆಗೆ ಒಯ್ಯುವ ಚಾಲಕರಿಗೆ ಮತ್ತು ಮಳೆಗಾಲದಲ್ಲಿ ಸುತ್ತಾಡುವವರಿಗೆ ಇದು ತುಂಬಾ ಅನುಕೂಲವಾಗುತ್ತದೆ. ಇಂಥ ಆಟೋವನ್ನು ಬೆಂಗಳೂರಿನಲ್ಲಿ ಹುಡುಕಿಕೊಟ್ಟವರಿಗೆ ಒಂದು ಐಪ್ಯಾಡ್ 2 ಬಹುಮಾನವಾಗಿ ನೀಡಲಾಗುತ್ತದೆ!

"ಸಮ್ಮೇಳನ ನಡೆಯುತ್ತಿರುವುದು ಭಾಳ ಖುಷಿ ತಂದೈತಿ. ಬೆಳಗಾನಿಂದ ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ಮಸ್ತ್ ಓಡಾಟ ನಡದೈತಿ. ಕಮಾಯಿನೂ ಭರಪೂರೈತಿ" ಎಂದು ಹೇಳುತ್ತಾರೆ ಆಟೋ ಚಾಲಕ ಶೇಖರ್ ಕಾಮತಕರ್. ಆಟೋ ನಂಬರ್, ಕೆಎ 22 - 2758. ಶೇಖರ್ ಮಾತಿಗೆ ದನಿಗೂಡಿಸಿದವರು ಆಟೋ ಚಾಲಕ ಹಫೀಜ್ ಲಷ್ಕರ್. ಅವರ ಆಟೋ ನಂಬರ್ ಕೆಎ 22 ಬಿ 3645.

"ನಾವು ಇಂತಹ ಸಂಭ್ರಮವನ್ನು ನೋಡಿರಲಿಲ್ಲ. ಊರು ತುಂಬ ಹೊಸ ಮಂದಿ ಬಂದಾರ. ಕನ್ನಡ ಸಮ್ಮೇಳನಕ್ಕೆ ನಮ್ಮ ಮತ್ತು ಎಲ್ಲಾ ಆಟೋ ಚಾಲಕರ ಬೇಷರತ್ ಬೆಂಬಲ ಇದೆ. ಜಿಲ್ಲಾಧಿಕಾರಿಗಳ ಆದೇಶವನ್ನು ಶಿರಸಾವಹಿಸಿ ಪಾಲಿಸುವಂತೆ ಆಟೋ ಯೂನಿಯನ್ ನಮಗೆಲ್ಲ ಹೇಳಿದೆ" ಎಂದು ಶೇಖರ್ ಜೆಎನ್ಎಮ್ ಸಿ ರಸ್ತೆಯಲ್ಲಿ ಹೇಳಿದರು.

English summary
Belgaum Auto rickshaw drivers have extended their full cooperation to Vishwa Kannada Sammelana taking place in their city. Deputy Commissioner Ekroop Kaur has ordered new slab and regulations for auto fare which helps both drivers and commuters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X