ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ ಸಮ್ಮೇಳನ ಗೋಷ್ಠಿಗಳು, ವಿದ್ವಾಂಸರು

By Shami
|
Google Oneindia Kannada News

Prof Nisar Ahmed
ಬೆಳಗಾವಿ, ಮಾ. 5 : ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನದಲ್ಲಿ ಜರುಗುವ ಗೋಷ್ಠಿಗಳು ಮತ್ತು ಅದರಲ್ಲಿ ಪಾಲ್ಗೊಳ್ಳುವ ಕನ್ನಡಿಗರ ಪಟ್ಟಿ ಇಂತಿವೆ ; ಪ್ರೊ.ಕೆ.ಎಸ್.ನಿಸಾರ್ ಅಹಮದ್ ಉದ್ಘಾಟಿಸಿ, ಡಾ. ಚನ್ನವೀರ ಕಣವಿಯವರ ಅಧ್ಯಕ್ಷತೆಯಲ್ಲಿ 29 ಜನ ಕವಿಗಳನ್ನೊಳಗೊಂಡ ಸಿರಿಗನ್ನಡ, ಕವಿಗೋಷ್ಠಿ ; ಎಚ್.ಎಸ್.ಶಿವಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಕನ್ನಡವು ಸೇರಿದಂತೆ ತೆಲುಗು, ಮರಾಠಿ, ತುಳು, ತಮಿಳು, ಕೊಂಕಣಿ, ಬ್ಯಾರಿ, ಉರ್ದು, ಹಿಂದಿ ಕವಿಗಳು ಭಾಗವಹಿಸುವ ಬಹುಭಾಷಾ ಕವಿಗೋಷ್ಠಿ.

ಪ್ರೊ. ಅ.ರಾ.ಮಿತ್ರ ಅವರ ಅಧ್ಯಕ್ಷತೆಯಲ್ಲಿ ನಗುನಗುತಾ ಬಂದೇವಾ ಎಂಬ ಹಾಸ್ಯ ಗೋಷ್ಠಿ; ಸಾಂಸ್ಕೃತಿಕ ಕರ್ನಾಟಕ ; ಸಮಕಾಲೀನ ಜಗತ್ತು ಮತ್ತು ಮಹಿಳೆ ; ಹೊರನಾಡು ಮತ್ತು ಹೊರದೇಶದ ಕನ್ನಡಿಗರು ; ಗಡಿನಾಡ ಕನ್ನಡಿಗರು ; ಕನ್ನಡ ಆಡಳಿತ ಭಾಷೆ ; ಜಾಗತೀಕರಣ ಕರ್ನಾಟಕ ; ಜ್ಞಾನ ವಿಜ್ಞಾನ ತಂತ್ರಜ್ಞಾನ ಕರ್ನಾಟಕ ; ಕೃಷಿ ಸಾಧನೆ ಸವಾಲು ; ಸಮೂಹ ಮಾಧ್ಯಮ ಸಾಮಾಜಿಕ ಕಾಳಜಿ ; ಕನಸಿನ ಕರ್ನಾಟಕ ; ದೇಸಿ ಚಿಂತನೆ ; ದಲಿತ ಸಂಸ್ಕೃತಿ ಅನನ್ಯತೆ ಎಂಬ ಗೋಷ್ಠಿಗಳ ಜೊತೆಗೆ ಕನ್ನಡ ಪುಸ್ತಕೋದ್ಯಮ ಕನ್ನಡ ಚಿತ್ರೋದ್ಯಮ ಕುರಿತ ವಿಚಾರಸಂಕಿರಣಗಳು ಹಾಗೂ ಮಕ್ಕಳಿಗಾಗಿ ವಿಶೇಷವಾದ ಗೋಷ್ಠಿಗಳಿವೆ.

ಈ ಗೋಷ್ಠಿಗಳಲ್ಲಿ ಒಟ್ಟು ಸುಮಾರು 331ಕ್ಕೂ ಹೆಚ್ಚು ವಿದ್ವಾಂಸರು, ಕವಿಗಳು, ಸಂಸ್ಕೃತಿ ಚಿಂತಕರು ಭಾಗವಹಿಸುತ್ತಿದ್ದಾರೆ. ಇದಲ್ಲದೆ 400ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು ; 15,000 ಅಮೂಲ್ಯ ಕನ್ನಡ ಗ್ರಂಥಗಳ ಪ್ರದರ್ಶನ ; ವಿವಿಧ ಇಲಾಖೆಗಳಿಂದ ಪ್ರಗತಿ ದರ್ಶನ ಮಳಿಗೆಗಳು ; ಶಿಲ್ಪಕಲೆ ; ಚಿತ್ರಕಲೆ ಕುರಿತ ಪ್ರಾತ್ಯಕ್ಷಿಕ ಶಿಬಿರಗಳು ; ರಂಗಭೂಮಿ ; ಕನ್ನಡ ಚಿತ್ರೋದ್ಯಮ ; ಜಾನಪದ ಕ್ಷೇತ್ರ ಕುರಿತಂತೆ ವಸ್ತುಪ್ರದರ್ಶನ ; ಅಪರೂಪದ ದಾಖಲೆಗಳು ; ಅಂಚೆಚೀಟಿ ಹಾಗೂ ನಾಣ್ಯಗಳ ಕುರಿತ ಪ್ರದರ್ಶನ ಏರ್ಪಡಿಸಲಾಗಿದೆ.

ಒಟ್ಟಾರೆ 5500 ಜನ ಜನಪದ ಕಲಾವಿದರು, ಸಂಗೀತ ನೃತ್ಯ ಮುಂತಾದ ಕಲಾವಿದರು ಭಾಗವಹಿಸುತ್ತಿದ್ದಾರೆ. ಕನ್ನಡತೇರು ಮೆರವಣಿಗೆ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಪ್ರತಿಜಿಲ್ಲೆಯಿಂದ ವಿಶ್ವ ಕನ್ನಡ ತೇರು ಹೊರಟು ಬೆಳಗಾವಿಗೆ ಮಾರ್ಚ್ 10ರಂದು ಸೇರಲಿವೆ. 11ರಂದು ಆಕರ್ಷಕವಾದ ಬೃಹತ್ ಮೆರವಣಿಗೆಯನ್ನು ಬೆಳಗಾವಿ ನಗರದಲ್ಲಿ ಏರ್ಪಡಿಸಲಾಗಿದೆ. ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ 101 ಕನ್ನಡ ಗ್ರಂಥಗಳು, ಸಂದರ್ಭ ಗ್ರಂಥ ಪುನರಾವಲೋಕನ ಹಾಗೂ 36 ಜಾನಪದ ಯಕ್ಷಗಾನ ಗ್ರಂಥಗಳು ಬಿಡುಗಡೆಯಾಗಲಿವೆ. [ಬೆಳಗಾವಿ ಸಮ್ಮೇಳನದ ಸುದ್ದಿಬಿಂಬ]

English summary
331 Scholars from various disciplines to participate in parallel sessions in Vishwa Kannada Sammelanam Belgaum, March 11-13, 2011. The Belgaum Kannada Convention major attraction is 400 Kannada Book stalls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X