ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮ್ಮೇಳಾನಧ್ಯಕ್ಷರ ಮೆರವಣಿಗೆ ಆರಂಭ

By Srinath
|
Google Oneindia Kannada News

gvenkatasubbaiah
ಬೆಂಗಳೂರು, ಫೆ. 4: ಬೆಂಗಳೂರಿನ ಮಹಾಪೌರ ಎಸ್.ಕೆ. ನಟರಾಜ್ ಅವರು ಕಾರ್ಪೊರೇಶನ್‌ನ ಪ್ರಧಾನ ಕಚೇರಿ ಎದುರು ಆಕರ್ಷಕ, ಭವ್ಯ ಸಾರೋಟಿನಲ್ಲಿ ಆಸೀನರಾಗಿರುವ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಕೊರಳಿಗೆ ಬೃಹತ್ ಹೂವಿನ ಹಾರ ಹಾಕುವ ಮೂಲಕ ಮೆರವಣಿಗೆಗೆ ಶುಕ್ರವಾರ ಬೆಳಗ್ಗೆ 10.00ಕ್ಕೆ ಚಾಲನೆ ನೀಡಲಾಗಿದೆ. ಅದಕ್ಕೂ ಮುನ್ನ ಸಮ್ಮೇಳಾನಧ್ಯಕ್ಷ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಸಾರೋಟಿನಲ್ಲಿ ಗೃಹ ಸಚಿವ ಆರ್. ಅಶೋಕ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಲ್ಲೂರು ಪ್ರಸಾದ್, ಮೇಯರ್ ನಟರಾಜ್, ಸಂಸದ ಅನಂತಕುಮಾರ್ ಅವರು ಸಮ್ಮೇಳಾನಧ್ಯಕ್ಷರಿಗೆ ಸಾಥ್ ನೀಡಿದ್ದಾರೆ. ವಿವಿಧ ಕಲಾ ತಂಡಗಳ 500ಕ್ಕೂ ಹೆಚ್ಚು ಕಲಾವಿದರು, ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲೆಲ್ಲೂ ಕನ್ನಡ ಬಾವುಟ ಎಲ್ಲೆಲ್ಲೂ ರಾರಾಜಿಸುತ್ತಿದೆ.

ಬೆಳಗ್ಗೆ 10.10ಕ್ಕೆ ಕಾರ್ಪೊರೇಷನ್ ವೃತ್ತದಿಂದ ಸಾಗಿರುವ ಮೆರವಣಿಗೆ ಜೆ.ಸಿ. ರಸ್ತೆ, ಮಿನರ್ವ ಸರ್ಕಲ್, ಮಕ್ಕಳ ಕೂಟ, ಪಂಪ ಮಹಾಕವಿ ರಸ್ತೆ ಮೂಲಕ ನ್ಯಾಷನಲ್ ಕಾಲೇಜು ಮೈದಾನ ತಲುಪಲಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಇಡೀ ನಾಡು ನುಡಿ ಹಬ್ಬ ಸಂಭ್ರಮದಲ್ಲಿ ಪುಳಕಿತಗೊಂಡಿದೆ. ಸಹಸ್ರಾರು ಕನ್ನಡಿಗರು ಮೆರವಣಿಗೆಯಲ್ಲಿ ಹೆಮ್ಮೆಯಿಂದ ಪಾಲ್ಗೊಂಡಿದ್ದಾರೆ.

ಈ ಮಧ್ಯೆ, ಕನ್ನಡ ಚಿತ್ರೋದ್ಯಮದ ಕಾಶಿ ಎನಿಸಿರುವ ಗಾಂಧಿನಗರದ ಸಮೀಪ ಫ್ರೀಂ ಪಾರ್ಕ್‌ನಿಂದ ಕನ್ನಡ ಚಿತ್ರ ಕಲಾವಿದರು ನ್ಯಾಷನಲ್ ಕಾಲೇಜಿನತ್ತ ಪಥಸಂಚಲನ ನಡೆಸುವ ಮೂಲಕ ಚಿತ್ರೋದ್ಯಮದ ಸಹ ಈ ಬಾರಿ ಸಕ್ರಿಯವಾಗಿ ಪಾಲ್ಗೊಂಡಿದೆ. ಹಿರಿಯ ಕಲಾವಿದ ಅಶೋಕ್ ಅವರು ಇದರ ನೇತೃತ್ವ ವಹಿಸಿದ್ದಾರೆ.

English summary
Sahitya Sammelana president Pro.G.Venkatasubbaiah procession formally started in Banglore near corporation circle on Feb. 4th. earlier to this Home minister R.Asok flagged off the event
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X