ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮ್ಮೇಳನ ಮೆರವಣಿಗೆ ಹೊಂಟಿದೆ ಜೊತೆಗೆ ಬನ್ನಿ

By Mahesh
|
Google Oneindia Kannada News

Prof. G Venkata subbaiah
77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬೆಂಗಳೂರು ಸಜ್ಜಾಗಿದೆ. ನಾಳೆ ಬೆಳಗ್ಗೆ ಮೆರವಣಿಗೆ ಆರಂಭಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ.

ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ. ಜಿ.ವೆಂಕಟಸುಬ್ಬಯ್ಯನವರನ್ನು ಬಿಬಿಎಂಪಿ ಕಚೇರಿಯ ಮುಂದಿರುವ ನಾಡಪ್ರಭು ಕೆಂಪೇಗೌಡ ಪುತ್ಥಳಿಯ ಬಳಿಯಿಂದ ಸಮ್ಮೇಳನ ವೇದಿಕೆಗೆ ಭವ್ಯ ಮೆರವಣಿಗೆಯಲ್ಲಿ ಕರೆತರಲಾಗುವುದು. ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ನುಡಿಜಾತ್ರೆಯ ಮೆರವಣಿಗೆಗೆ ಚಾಲನೆ ದೊರಕಲಿದೆ ಎಂದು ಮೆರವಣಿಗೆಯ ಉಸ್ತುವಾರಿ ವಹಿಸಿಕೊಂಡಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿಎ ನಾರಾಯಣ ಗೌಡ ಅವರು ತಿಳಿಸಿದರು.

ಗ್ಯಾಲರಿ : ಕನ್ನಡದ ಸವಿ ಬಡಿಸಲು ಸಮ್ಮೇಳನ ಸಜ್ಜಾಗಿದೆ

ಮೆರವಣಿಗೆಯಲ್ಲಿ ಪೊಲೀಸ್ ವಾದ್ಯಗೋಷ್ಠಿ, ಅಶ್ವದಳ, ಸಾಲಂಕೃತ ಆನೆಗಳು, ಒಂಟೆಗಳು ಮತ್ತು ನಾಡಿನ ವೈವಿಧ್ಯದ ಮೆರಗನ್ನು ತೋರಿಸುವ 15 ಸ್ತಬ್ಧ ಚಿತ್ರಗಳು ಪಾಲ್ಗೊಳ್ಳುತ್ತಿರುವುದು ಈ ಬಾರಿಯ ವಿಶೇಷವಾಗಿದೆ. ದಸರೆಯ ನೆನಪನ್ನು ಮರುಕಳಿಸುವಂತೆ ಮೆರವಣಿಗೆ ನಡೆಸಬೇಕೆಂಬುದು ಕರವೇ ಕನಸು ಕಾಣುತ್ತಿದೆ.

ಬೆಂಗಳೂರಿನ ಊರ ದೇವತೆ ಅಣ್ಣಮ್ಮದೇವಿ ಉತ್ಸವ, ಕನ್ನಡ ದೇವಿ ಭುವನೇಶ್ವರಿಯ ಭವ್ಯ ಮೆರವಣಿಗೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಗೃಹರಕ್ಷಕ ದಳ ಸಿಬ್ಬಂದಿ, 33ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಪಾಲ್ಗೊಳ್ಳುತ್ತಿದೆ.

ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆಯೊಂದರಲ್ಲೆ ಕನಿಷ್ಠ 50ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಮೆರವಣಿಗೆಯಲ್ಲಿ ತೆರಳುವ ಕಾರಣ ಸಂಚಾರದ ಒತ್ತಡ ನಿಭಾಯಿಸಲು ವಿಶೇಷ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಹೇಳಿದ್ದಾರೆ.

English summary
77th Kannada Sahitya Sammelana Procession will start on feb 4 morning. Prof G Venkatasubbaiah will launch procession by offering flower garland to Kempegowda Statue. Whole procession from Corporation to Basavanagudi will be under in charge of Karave TA Narayana Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X