• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅರ್ಥಾಂಗಿ: ಮನಸಲ್ಲೂ ಕನ್ನಡ, ಮೈಮೇಲೂ ಕನ್ನಡ

By Mahesh
|

ಟೀ ಶರ್ಟ್ ಮೇಲೆ ಏನೇನೋ ಬರಹಗಳು. ಚಿತ್ರ ವಿಚಿತ್ರ ಘೋಷಣೆಗಳು. ಏನೇನೋ ಚಿತ್ರಗಳು ಹಾಕಿಕೊಳ್ಳುವ ಬದಲು ಅರ್ಥಾಂಗಿಯನ್ನು ಬಳಸಿ ಎನ್ನುತ್ತಿದ್ದಾರೆ ಅರಿವೇ ಗುರು ಬ್ಲಾಗರ್ಸ್. ಅರ್ಧಾಂಗಿ ಗೊತ್ತು ಏನಿದು ಅರ್ಥಾಂಗಿ? ಅರ್ಥಾಂಗಿಗಳು ಅಂದ್ರೆ ಅರ್ಥಪೂರ್ಣವಾಗಿರುವ ಅಂಗಿಗಳು - ಅಂದರೆ ಕನ್ನಡ ನುಡಿಮುತ್ತುಗಳನ್ನು ಬರೆದಿರುವಂಥಾ ಅಂಗಿಗಳು. ಎಲ್ಲರಿಗೂ ಅರ್ಥವಾಗೋ ಹಾಗೆ ಹೇಳಬೇಕೆಂದರೆ "ಕನ್ನಡ ಮೆಸೇಜಿರುವ ಟೀಶರ್ಟು"ಗಳು.

ಬೆಂಗಳೂರಿನಲ್ಲಿ ನಡೆಯಲಿರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ವಿಶೇಷ ಅರ್ಥಾಂಗಿಗಳು ತಯಾರಾಗಿವೆ. "ಮನಸಲ್ಲೂ ಕನ್ನಡ, ಮೈಮೇಲೂ ಕನ್ನಡ" ಎಂಬ ಘೋಷವಾಕ್ಯದೊಂದಿಗೆ ಅರ್ಥಪೂರ್ಣ ಟೀಶರ್ಟ್ ಗಳನ್ನು ಅರಿವೇ ಗುರು ಬ್ಲಾಗ್ ನ ಗುರು ಕುಲಕರ್ಣಿ ಅವರು ಹೊರತಂದಿದ್ದಾರೆ.

ಗ್ಯಾಲರಿ: ಎಲ್ಲ ಕನ್ನಡಿಗರ ಚಿತ್ತ ಬಸವನಗುಡಿಯತ್ತ

ಅರ್ಥಾಂಗಿ ವಿವರ: ಕಾಲರ್ ಇರುವ ಅರ್ಥಾಂಗಿ ಮತ್ತು ದುಂಡು ಕತ್ತಿನ ಅರ್ಥಾಂಗಿಗಳು ಲಭ್ಯವಿರುತ್ತದೆ. ಕಾಲರ್ ಇರುವ ಅರ್ಥಾಂಗಿ ಎದೆಯ ಮೇಲೆ "ಮನಸಲ್ಲೂ ಕನ್ನಡ, ಮೈಮೇಲೂ ಕನ್ನಡ" ಎಂಬ ಘೋಷವಾಕ್ಯವಿದೆ. ಬೆನ್ನ ಮೇಲೆ ಕುವೆಂಪು, ಬೇಂದ್ರೆ ಅವರ ನುಡಿಮುತ್ತುಗಳನ್ನು ಒಳಗೊಂಡ ವಿನ್ಯಾಸವಿರುತ್ತದೆ. ಇದಲ್ಲದೆ ಕೆಲವು ಪಂಚ್ ಡೈಲಾಗ್ ಗಳನ್ನು ಸಹ ವಿನ್ಯಾಸಕ್ಕೆ ಬಳಸಲಾಗಿದೆ. ಕೆಂಪು, ಬಿಳಿ ಮತ್ತು ನೀಲಿ ಬಣ್ಣಗಳಲ್ಲಿ ಅರ್ಥಾಂಗಿಗಳು ಲಭ್ಯವಿವೆ.

ಬೆಲೆ ಕೂಡಾ ಕೈಗೆಟಕುವಂತಿದೆ. ಕಾಲರ್ ಸಹಿತ ಅರ್ಥಾಂಗಿ ಬೆಲೆ 350 ರು ಹಾಗೂ ಕಾಲರ್ ರಹಿತ ಅರ್ಥಾಂಗಿ ಬೆಲೆ 250 ರು. ಕನ್ನಡದ ಜಾತ್ರೆಗೆ ಸಾಹಿತ್ಯಾಸಕ್ತರು "ಮನಸಲ್ಲೂ ಕನ್ನಡ, ಮೈಮೇಲೂ ಕನ್ನಡ" ವನ್ನು ಧರಿಸಿಕೊಂಡು ಎಲ್ಲೆಡೆ ಓಡಾಡಲಿ ಎಂಬುದು ನಮ್ಮ ಆಶಯ ಎಂದು ಗುರು ಹೇಳುತ್ತಾರೆ.

ಹೆಚ್ಚಿನ ಮಾಹಿತಿಗೆ 98450 04782 ಗೆ ariveguru4u@gmail.com ಪತ್ರ ಕಳಿಸಿ ವ್ಯವಹರಿಸಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Good News for Kannada enthusiasts at 77th Kannada Sahitya Sammelana. In an attempt to make kannada t-shirts popular, arive-guru blog team have produced some t-shirts with Kannaad poets Quotes. and some funny punch liners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more