ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಠಮಾನ್ಯಗಳಿಗೆ ಹಣ ನೀಡುವುದೇಕೆ ? ಗೀತಾ

By Mrutyunjaya Kalmat
|
Google Oneindia Kannada News

Geetha Nagabhushan
ಗದಗ, ಫೆ. 19 : ಮಾಡಬಾರದ ಕೆಲಸ ಮಾಡುತ್ತಿರುವ ಮಠಮಾನ್ಯಗಳಿಗೆ ಸರಕಾರ ಏಕೆ ಹಣ ಕೊಡಬೇಕು. ದೇವರ ಗುಡಿ, ಗುಂಡಾರ, ಮಠಗಳಿಗೆ ಸರಕಾರ ನೀಡುತ್ತಿರುವ ಅನುದಾನದಲ್ಲಿ ಅಲ್ಪಭಾಗವನ್ನಾದರೂ ನೆರೆ ಸಂತ್ರಸ್ತರಿಗೆ ಕೊಟ್ಟಿದ್ದರೆ ಸಾರ್ಥಕವಾಗುತ್ತಿತ್ತು. ಕೃಷ್ಣದೇವರಾಯನ ಪಟ್ಟಾಭಿಷೇಕಕ್ಕೆ ಕೋಟಿಗಟ್ಟಲೆ ಖರ್ಚು ಮಾಡುವ ಸರಕಾರ ಸಾಹಿತ್ಯ ಸಮ್ಮೇಳನ ಸರಳವಾಗಿ ಆಚರಿಸಿ ಎಂದು ಹೇಳುವುದು ಎಷ್ಟು ಸರಿ ಎನ್ನುವುದು 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಗೀತಾ ನಾಗಭೂಷಣ ಅವರ ನೇರ ಪ್ರಶ್ನೆ.

'ಅರಸು ರಾಕ್ಷಸ ಮಂತ್ರಿ ಮೊರೆವ ಹುಲಿ... ನೆರವಿ ಬಡವರ ಭಿನವಪ ಕೇಳುವರು' ಎಂದು ಹಾಡಿದ ಕುಮಾರವ್ಯಾಸನ ಕಾವ್ಯಭೂಮಿ ಗದಗದಲ್ಲಿ ಮಾತು ಆರಂಭಿಸಿದ ಅವರು, ಸರಕಾರದ ಇತ್ತೀಚಿನ ನಡಾವಳಿಗಳನ್ನು ತೀವ್ರವಾಗಿ ಖಂಡಿಸಿದರು. ಶ್ರೀಕೃಷ್ಣದೇವರಾಯನ ಪಟ್ಟಾಭಿಷೇಕಕ್ಕೆ 50 ಕೋಟಿ ಖರ್ಚು ಮಾಡುವುದಾದರೆ, ಸಾಹಿತ್ಯ ಸಮ್ಮೇಳನಕ್ಕೆ ಸರಳವಾಗಿ ನಡೆಯಬೇಕು ಎನ್ನುವುದು ಎಲ್ಲಿಯ ನ್ಯಾಯ. ಇಂತಹ ದ್ವಂದ್ವ ನೀತಿ ಮಾಡುತ್ತಿರುವುದು ಏಕೆ ?

ನೆರೆ ಸಂತ್ರಸ್ತರಿಗೆ ಇನ್ನೂ ಕೂಡ ತಾತ್ಕಾಲಿಕ ಶೆಡ್, ಸಮುದಾಯ ಭವನದಲ್ಲಿ ಬದುಕುತ್ತಿದ್ದಾರೆ. ಹೆಣ್ಣುಮಕ್ಕಳಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಹಾಗಿರುವಾಗ ಕೋಟಿಗಟ್ಟಿಲೇ ಹಣವನ್ನು ನೀರಿನಂತೆ ಖರ್ಚು ಮಾಡುವುದು ಏಕೆ ಎಂದು ಗೀತಾ ಪ್ರಶ್ನಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X