ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತ್ಯ ಸಮ್ಮೇಳನಕ್ಕೆ ಹಣದ ಕೊರತೆ ಇಲ್ಲ

By Mahesh
|
Google Oneindia Kannada News

Sriramulu
ಗದಗ ,ಫೆ.17: ಫೆ.19 ರಿಂದ 21ರ ವರೆಗೆ ಜರುಗಲಿರುವ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ವಿದ್ಯಾದಾನ ಸಮಿತಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಿರ್ಮಿಸಲಾಗುವ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಧಾನ ವೇದಿಕೆ ಸಜ್ಜಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಶ್ರೀ ಬಿ. ಶ್ರೀರಾಮುಲು ಅವರು ಸಮ್ಮೇಳನಕ್ಕೆ ಯಾವುದೇ ರೀತಿಯ ಹಣಕಾಸಿನ ತೊಂದರೆ ಉಂಟಾಗಿಲ್ಲ, ನೆರೆ ಪೀಡಿತ ಪ್ರದೇಶವಾದರೂ, ಅತಿಥಿ ಸತ್ಕಾರಕ್ಕೇನೂ ಕಡಿಮೆ ಮಾಡುವುದಿಲ್ಲ ಎಂದಿದ್ದಾರೆ.

ಅಕ್ಷರಜಾತ್ರೆಗೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು, ಈಗಾಗಲೇ ವಿವಿಧ ಸಮಿತಿಗಳು ತಮ್ಮ ಚಟುವಟಿಕೆಗಳನ್ನು ಪ್ರಾರಂಭಿಸಿವೆ.
ತಾಯಿ ಭುವನೇಶ್ವರಿದೇವಿಯ ಆಶೀರ್ವಾದ, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಹಯೋಗದೊಂದಿಗೆ ಸಂಪೂರ್ಣ ಯಶಸ್ವಿಗೊಳಿಸುವುದಾಗಿ ನುಡಿದರು.

ಸಾಹಿತ್ಯ ಸಮ್ಮೇಳನಕ್ಕೆ ಸಕಲ ವ್ಯವಸ್ಥೆ

* ಸಮ್ಮೇಳನಕ್ಕಾಗಿ ಈಗಾಗಲೇ 21 ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಈ ವರೆಗೆ ವಿವಿಧ ಮೂಲಗಳಿಂದ 85 ಲಕ್ಷ ರೂ.ಗಳು ನೆರವು ಸಂಗ್ರಹಿಸಲಾಗಿದೆ.
* ಸಮ್ಮೇಳನಕ್ಕೆ ಬರುವ ಪ್ರತಿನಿಧಿಗಳು, ಗಣ್ಯರು ಹಾಗೂ ಸಾರ್ವಜನಿಕರಿಗೆ ಸಹ ಊಟದ ವ್ಯವಸ್ಥೆ ಮಾಡಲಾಗಿದೆ.
* ಸಮ್ಮೇಳನಕ್ಕೆ ರಾಜ್ಯ ಸರ್ಕಾರ 1 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಆ ಪೈಕಿ 40 ಲಕ್ಷ ರೂ.ಗಳನ್ನು ಸಾಹಿತ್ಯ ಪರಿಷತ್ ಉಳಿಸಿಕೊಂಡು, 60 ಲಕ್ಷ ರೂ.ಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿದೆ.
* ಈಗಾಗಲೇ 1.5 ಕೋಟಿ ರೂ.ಗಳ ವಂತಿಗೆ ಸಂಗ್ರಹವಾಗಿದ್ದು, ಇನ್ನೂ ಹಲವು ನಿಗಮ ಮಂಡಳಿ ಹಾಗೂ ಸಂಸ್ಥೆಗಳಿಂದ ದೇಣಿಗೆ, ಹಣ ನಿರೀಕ್ಷಿಸಲಾಗಿದೆ.
* ಸರ್ಕಾರದಿಂದ 50 ಲಕ್ಷ ರೂ.ಗಳ ಹೆಚ್ಚಿನ ನೆರವನ್ನು ಸಹ ಕೋರಲಾಗಿದೆ ಎಂದು ಸಚಿವ ಶ್ರೀರಾಮುಲು ಹೇಳಿದರು.
* ಸ್ವಾಗತ, ಪ್ರಚಾರ ಮತ್ತು ಮಾಧ್ಯಮ ಸಂಪರ್ಕ, ಊಟ ಉಪಹಾರ, ವಸತಿ, ಸಾರಿಗೆ, ಜಾಹೀರಾತು, ವೇದಿಕೆ, ಕಲಾ ಪ್ರದರ್ಶನ, ವಾಣಿಜ್ಯ ಮಳಿಗೆ, ಸ್ಮರಣ ಸಂಚಿಕೆ, ಅತಿಥಿ ಸತ್ಕಾರ, ಭದ್ರತೆ ಮತ್ತು ಸುರಕ್ಷತೆ, ಮಹಿಳಾ ನೆರವು ಮುಂತಾದ ಸಮಿತಿಗಳ ಕಾರ್ಯ ನಿರ್ವಹಣೆಯನ್ನು ಸಚಿವರು ಪರಿಶೀಲಿಸಿದರು.
* ಸಮ್ಮೇಳನಕ್ಕೆ ಬರುವವರಿಗೆ ಉಪಹಾರ ಹಾಗೂ ಊಟಕ್ಕಾಗಿ ರೊಟ್ಟಿ, ಪಲ್ಲೆ, ಅನ್ನ, ಸಾಂಬಾರು ಜೊತೆ ಸಿಹಿ ತಿನಸನ್ನು ಸಹ ನೀಡಲಾಗುವುದು.
* 7 ಸಾವಿರ ಪ್ರತಿನಿಧಿಗಳನ್ನು ನಿರೀಕ್ಷಿಸಲಾಗಿದೆ, ಅವರ ವ್ಯಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
* ಅಕ್ಷರ ಹಬ್ಬಕ್ಕೆ ಆಗಮಿಸುವವರಿಗೆ ಜಿಲ್ಲೆಯ ಐತಿಹಾಸಿಕ ಸ್ಥಳ ಹಾಗೂ ಸನಿಹದ ಪ್ರೇಕ್ಷಣೀಯ ಸ್ಥಳಕ್ಕೆ ಸಾರಿಗೆ ಇಲಾಖೆಯಿಂದ ಪ್ರವಾಸಕ್ಕೆ ಏರ್ಪಾಟು ಮಾಡಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X