ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸಂಸ್ಕೃತಿ ಕಲೆ ಅನಾವರಣಕ್ಕೆ ಗದಗ ಸಜ್ಜು

By Mahesh
|
Google Oneindia Kannada News

Dollu Kunitha team
ಗದಗ, ಫೆ . 16: ಫೆ.19 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದು ದಿನ ಮುಂಚಿತವಾಗೇ ನಾಂದಿ ಹಾಡಲಿವೆ. ಒಟ್ಟು ನಾಲ್ಕು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವವನ್ನು ಉಣಬಡಿಸಲು ಕಲಾವಿದರ ಸಜ್ಜಾಗಿದ್ದಾರೆ. ಫೆ. 18ರ ಸಂಜೆಯಿಂದ ಮನರಂಜನಾ ಕಾರ್ಯಕ್ರಮಗಳು ಆರಂಭವಾಗಲಿದೆ ಎಂದು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬನಶಂಕರಿ ಅಂಗಡಿ ತಿಳಿಸಿದರು.

ಕಾರ್ಯಕ್ರಮದ ವಿವರಗಳು ಇಂತಿವೆ:
ಫೆಬ್ರವರಿ 18: ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಸಂಗೀತ ಲಹರಿ ತಂಡದಿಂದ ಭಾವಗೀತೆ, ಬಸವರಾಜು, ನರಸಿಂಹ ಜೋಶಿ ಹಾಗೂ ಬಿ. ಪ್ರಾಣೇಶ ತಂಡದಿಂದ ನಗೆ ಕೂಟ, ಮಹಾಮನೆ ಜಾನಪದ ತಂಡದಿಂದ ಜಾನಪದ ಜಾತ್ರೆ, ಶಿವಮೊಗ್ಗದ ಮಹಿಳೆಯರ ತಂಡದಿಂದ ಡೊಳ್ಳುಕುಣಿತ
ಸೇರಿದಂತೆ ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ.

ಫೆಬ್ರವರಿ.19: ಬಾಲೇಖಾನ ಸಹೋದರರ ಪಂಚ ಸಿತಾರ ವಾದನ, ನಿರೂಪಮಾ ರಾಜೇಂದ್ರ ತಂಡದಿಂದ ನೃತ್ಯ ಪ್ರದರ್ಶನ, ಯುವರಾಜ ತಂಡದಿಂದ ಜಾನಪದ ಗೀತೋತ್ಸವ, ಇದಲ್ಲದೆ ಸ್ಥಳೀಯರಿಂದ ಡೊಳ್ಳು ಕುಣಿತ ಮತ್ತು ನಾಟಕ ಪ್ರದರ್ಶನ.

ಫೆಬ್ರವರಿ.20: ಉಡುಪಿಯ ಸುಂದರ ಶೇರಿಗಾರ, ವಾದ್ಯಗೋಷ್ಠಿ, ಪದ್ಮಾ ಹೇಮಂತ್ ತಂಡದಿಂದ ನೃತ್ಯ ರೂಪಕ, ಕಾವ್ಯ - ಕುಂಚ - ಗಾಯನ, ಧಾರವಾಡ ಅನಿಲ್ ದೇಸಾಯಿ ತಂಡದಿಂದ ನಾಟಕ ಪ್ರದರ್ಶನ.

ಫೆಬ್ರವರಿ.21: ಕಿನ್ನರಿ ವಾದ್ಯ ವೃಂದದಿಂದ ವಾದ್ಯಗೋಷ್ಠಿ, ಕಿಕ್ಕೇರಿ ಕೃಷ್ಣಮೂರ್ತಿ ತಂಡದಿಂದ ಕನ್ನಡವೇ ಸತ್ಯ ಭಾವಗೀತೆ, ಡಾ. ವಿಶ್ವಜೀತ ತಂಡದಿಂದ ಒಡೆಸ್ಸಿ ನೃತ್ಯ, ರಿಚರ್ಡ್ ಲೂಯಿಸ್ ತಂಡದಿಂದ ಮಾತಿನ ಮಂಟಪ. ಇದಲ್ಲದೆ ಶುಭಾ ಧನಂಜಯ, ಯು.ಕೆ. ಪ್ರವೀಣ್, ಡಾ. ವಿದ್ಯಾ ಮಡಿಕೇರಿ, ಮಹಾಲಕ್ಷ್ಮೀ ಅವರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.

ಮಕ್ಕಳ ಕಾರ್ಯಕ್ರಮ: ಹಿರಿಯ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಕಿರಿಯರ ಕಲೆ ಅನಾವರಣಕ್ಕೂ ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟನಲ್ಲಿ ಮಕ್ಕಳಿಂದ ಮಕ್ಕಳಿಗಾಗಿಯೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದಕ್ಕಾಗಿ ಗದಗಿನ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ವೇದಿಕೆ ಸಜ್ಜಾಗುತ್ತಿದೆ. ಇದರಲ್ಲಿ ಸುಮಾರು 60 ಮಕ್ಕಳ ತಂಡಗಳು ಭಾಗವಹಿಸಲಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X