ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತ್ಯ ಸಮ್ಮೇಳನ ವಿವರಗಳಿಗೆ ಕ್ಲಿಕ್ ಮಾಡಿ

By Mahesh
|
Google Oneindia Kannada News

Kannada Sahithya parishat
ಗದಗದಲ್ಲಿ ನಡೆಯಲಿರುವ 76 ನೇಆಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಪೂರ್ಣ ಮಾಹಿತಿಯನ್ನು ವಿಶ್ವದೆಲ್ಲೆಡೆ ಪಸರಿಸಲು ಕನ್ನಡ ಸಾಹಿತ್ಯ ಪರಿಷತ್ ಅಂತರ್ಜಾಲದ ಮೊರೆ ಹೊಕ್ಕಿದೆ. ಸಾಹಿತ್ಯ ಪರಿಷತ್ ತನ್ನ ಅಧಿಕೃತ ವೆಬ್‌ಸೈಟ್ ನ್ನು ಪ್ರಾರಂಭಿಸಲಿದ್ದು, ಸಧ್ಯದಲ್ಲೇ ಅದಕ್ಕೆ ಚಾಲನೆ ನೀಡಲಿದೆ.

ಈ ತನ್ನ ವೆಬ್‌ಸೈಟ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಉಗಮ, ಬೆಳವಣಿಗೆ, ಸೇರಿದಂತೆ ಕಸಾಪದ ಎಲ್ಲಾ ಅಧ್ಯಕ್ಷರ ವಿವರ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ವಿವರಗಳು ಲಭ್ಯವಿರುತ್ತದೆ. ಇದುವರೆಗೂ ನಡೆದಿರುವ ಎಲ್ಲಾ 76 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಕುರಿತು ಎಲ್ಲಿ, ಯಾವಾಗ ನಡೆಯಿತು ಹಾಗೂ ಅಲ್ಲಿ ಕೈಗೊಂಡ ನಿರ್ಣಯಗಳು ಹೀಗೆ ಇಲ್ಲಾ ಮಾಹಿತಿಗಳು ಇದರಲ್ಲಿ ಸಿಗಲಿದೆ.

ಇಷ್ಟೇ ಅಲ್ಲದೆ ಪರಿಷತ್‌ನ ದತ್ತಿ ನಿಧಿಗಳು, ಪರಿಷತ್ ಪ್ರಕಟಣೆ ಪುಸ್ತಕಗಳು ಮುಖಪುಟ ಹಾಗೂ ಬೆಲೆಯೊಂದಿಗೆ ಲಭ್ಯವಾಗಲಿದ್ದು, ಕಸಾಪ ವತಿಯಿಂದ ನಡೆಸುತ್ತಿರುವ ಕಾವಾ,ಜಾಣ,ಪ್ರವೇಶ ಮತ್ತು ರತ್ನ ಪರೀಕ್ಷೆಗಳ ಮಾಹಿತಿ ಕೂಡ ಒಳಗೊಂಡಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಾದಾಗಿನಿಂದ ಇಲ್ಲಿವರೆಗೂ ನಡೆಸಿರುವ ಅಧಿಕೃತ ಕಾರ್ಯಕ್ರಮಗಳ ಛಾಯಾಚಿತ್ರಗಳು ಮತ್ತು ಪರಿಷತ್ ಸಿಬ್ಬಂದಿಗಳ ಸಂಪೂರ್ಣ ವಿವರ ಇದರಲ್ಲಿ ಲಭ್ಯವಿರುತ್ತದೆ.

ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಸಹಕಾರದೊಂದಿಗೆ ನಿರ್ಮಾಣಗೊಂಡಿರುವ ಈ ವೈಬ್‌ಸೈಟ್‌ನ ಸಂಪೂರ್ಣ ನಿರ್ವಹಣೆಯನ್ನು ಕನ್ನಡರತ್ನ.ಕಾಂ ಸಂಪಾದಕ ಟಿ.ಎಂ.ಸತೀಶ್ ಅವರಿಗೆ ಪರಿಷತ್ ವಹಿಸಿದೆ ಎಂದು ಕಸಾಪ ಅಧ್ಯಕ್ಷ ಡಾ. ನಲ್ಲೂರ್ ಪ್ರಸಾದ್ ಹೇಳಿದರು.

2006ರಲ್ಲಿ ಶಿವಮೊಗ್ಗದಲ್ಲಿ ನಡೆದ 73 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಚಂಪಾ ಅಧಿಕಾರಾವಧಿಯಲ್ಲಿ http://www.kasapa.org ಎಂಬ ವೆಬ್ ತಾಣವನ್ನು ಆರಂಭಿಸಲಾಗಿತ್ತು. ಆದರೆ ತಾಂತ್ರಿಕ ದೋಷದ ಕಾರಣ, ಮಾಹಿತಿಯನ್ನು ಅಪ್ ಡೇಟ್ ಮಾಡುವಲ್ಲಿ ಪರಿಷತ್ ವಿಫಲವಾಗಿತ್ತು. ಹಾಗಾಗಿ ಕಸಾಪ ತನ್ನ ಅಧಿಕೃತ ವೆಬ್ ತಾಣವನ್ನು ಪುನರ್ ರೂಪಿಸಿ www. kasapa.kar.nic.in ಎಂದು ಬದಲಾಯಿಸಿದೆ. ಇದರಲ್ಲಿ ಇತ್ತೀಚಿನ ವರದಿಗಳನ್ನು ಕಾಣಬಹುದು ಎಂದು ನಲ್ಲೂ ಪ್ರಸಾದ್ ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X