ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗರಹಾವು, ದುರ್ಗಾಸ್ತಮಾನಕ್ಕೆ ಭಾರೀ ಬೇಡಿಕೆ

By Staff
|
Google Oneindia Kannada News

* ಮಹೇಶ್ ಮಲ್ನಾಡ್

ಚಿತ್ರದುರ್ಗ, ಫೆ. 7 : ಪುಸ್ತಕ ಮಳಿಗೆಗಳಲ್ಲಿ ಬಹುದೊಡ್ಡ ಬೇಡಿಕೆ ಇದ್ದದ್ದು ತರಾ ಸುಬ್ಬರಾಯರ ಕೃತಿಗಳಿಗೆ. ರಕ್ತರಾತ್ರಿ, ಕಂಬನಿಯ ಕುಯಿಲು, ನಾಗರಹಾವು ಹಾಗೂ ದುರ್ಗಾಸ್ತಮಾನ ಕೃತಿಗಳನ್ನು ಎಲ್ಲರೂ ಕೇಳುವವರೇ. ಆದರೆ ಸ್ಟಾಕ್ ಇರದೇ ಜನರು ನಿರಾಶೆಯಿಂದ ಮುಂದಿನ ಸ್ಟಾಲ್ ನತ್ತ ಮುಖಮಾಡುತ್ತಿದ್ದರು. ಛೇ ಇನ್ನೊಂದಷ್ಟು ತರಾಸು ಅವರ ಪುಸ್ತಕಗಳನ್ನು ತರಬಹುದಿತ್ತಲ್ಲ ಎಂದು ಮಳಿಗೆಯವರು ಪೇಚಾಡುತ್ತಿದ್ದದ್ದು ಸಾಮಾನ್ಯ ದೃಶ್ಯವಾಗಿತ್ತು.

ನಾಲ್ಕು ದಿನಗಳಲ್ಲಿ ಒಟ್ಟು 11,000 ರು. ದುಡ್ಡು ಗಳಿಕೆ. ಕನ್ನಡ ಗ್ರೀಟಿಂಗ್ಸ್ ಗೆ ಬೇಡಿಕೆ ಇತ್ತು. ಸುಮಾರು 20-25 ಕನ್ನಡ ಟೀಶರ್ಟ್ ಗಳು ಮಾರಾಟವಾಗಿದೆ. ಜನ ಬೇಜಾನ್ ಬರುತ್ತಾರೆ. ಆದರೆ ಖರೀದಿಸುವವರು ಕಮ್ಮಿ, ಕುತೂಹಲದಿಂದ ಗ್ರೀಟಿಂಗ್ಸ್ , ಟಿಶರ್ಟ್ ನೋಡುತ್ತಾರೆ ಆದ್ರೆ ಅದರ ರೇಟ್ ಕೇಳಿ ಅಷ್ಟೊಂದು ದುಡ್ಡಾ ಎಂದು ಹೋದವರೇ ಹೆಚ್ಚು ಜನ.

ಇನ್ನೊಂದು ಕೆಟ್ಟ ಅನುಭವವಾಗಿದ್ದೆಂದರೆ ವಿಮರ್ಶಕರೊಬ್ಬರು ಸ್ಟಾಲ್ ಬಳಿ ಬಂದು "ಏನ್ರೀ ಬರೀ ಡಿವಿಜಿ ಕಗ್ಗಗಳೇ ಇವೆಯಲ್ಲ ಕುವೆಂಪುದು ಎಲ್ರಿ" ಅಂದ್ರು. ಅದಕ್ಕೆ ಕುವೆಂಪು ಸಾಲಿನ ಗ್ರೀಟಿಂಗ್ಸ್,ಟೀ ಶರ್ಟ್ ಅವರ ಮುಂದೆ ಹಿಡಿದಾಗ, ಎಲ್ಲರೊಳಗೊಂದಾಗು ಮಂಕುತಿಮ್ಮ ಎಂದು ಎಲ್ಲಾ ಟಿಶರ್ಟ್ ಮೇಲೆ ಘೋಷ ವಾಕ್ಯ ಇದ್ದದ್ದನ್ನು ನೋಡಿ, ಏನ್ರಿ ಹಿಂದೆ ಕುವೆಂಪು ಕವನ, ಮುಂದೆ ಮಂಕುತಿಮ್ಮ ಎಂದಿದೆ ಎಂದು ಮುಖ ಸಿಂಡರಿಸಿಕೊಂಡು ಹೋದರು.

ಇದಕ್ಕೆ ವ್ಯತಿರಿಕ್ತವಾಗಿ ಕಡಿದಾಳ್ ಶಾಮಣ್ಣ ಅವರು ತಮ್ಮ ಎಂದಿನ ಹಸಿರು ಪೇಟದೊಡನೆ ಸ್ಟಾಲ್ ಗೆ ಹಾಜರಾಗಿ, ಒಳ್ಳೆಯ ಕೆಲ್ಸ ಮಾಡುತ್ತಿದ್ದಿರಾ, ಹೀಗೆ ಮುಂದುವರೆಸಿ ಎಂದು ಹೇಳಿ ಸ್ವಲ್ಪ ಹೊತ್ತು ಕೂತು ಕನ್ನಡ ಗ್ರೀಟಿಂಗ್ಸ್ ಹಾಗೂ ಟಿಶರ್ಟ್ ಪ್ರಚಾರ ಮಾಡಿದರು. ಉಳಿದಂತೆ ಮುಂಜಾನೆ ವೇಳೆಯಲ್ಲಿ ಗಣ್ಯರು ಪುಸ್ತಕ ಮಳಿಗೆಯ ಬಳಿ ಬಂದು ವೀಕ್ಷಿಸಿ ಹೋಗುವುದು ದೈನಂದಿನ ಕೆಲಸವಾಗಿತ್ತು ಎನ್ನುತ್ತಾರೆ ಸಮಾಜ ಸೇವಕರ ಸಮಿತಿಯ ರಾಜ್ ಕುಮಾರ್ ಅವರು.

ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ಚಿತ್ರಗಳು

ಪೂರಕ ಓದಿಗೆ
ಮೈಸೂರು ಕೆಫೆ : ದುರ್ಗದ ಹೆಮ್ಮೆಯ ಸಂಕೇತ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X