ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರದುರ್ಗದ ದಿಗ್ಗಜರ ನಾಮ ಸ್ಮರಣೆ

By Staff
|
Google Oneindia Kannada News

Ta Ra Subbaraya
ಬೆಂಗಳೂರು, ಫೆ. 4 : ಚಿತ್ರದುರ್ಗದಲ್ಲಿ ಮೂರು ದಿನಗಳ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗಿದೆ. ಐತಿಹಾಸಿಕವಾಗಿ ಚಿತ್ರದುರ್ಗವು ಪಾಳೇಗಾರರ ಸಾಮ್ರಾಜ್ಯ. ನಾಯಕ ಮನೆತನಕ್ಕೆ ಸೇರಿದ ಅನೇಕ ರಾಜರನ್ನು ದುರ್ಗ ಕಂಡಿದ್ದರೂ ಅವರಲ್ಲಿ ಎದ್ದು ಕಾಣುವ ಹೆಸರು ಗಂಡುಗಲಿ ರಾಜಾ ಮದಕರಿ ನಾಯಕ. ದುರ್ಗಮ ಬೆಟ್ಟದ ಸಾಲುಗಳಲ್ಲಿ ಆತ ಕಟ್ಟಿಸಿದ ರುದ್ರ ರಮಣೀಯ ಏಳು ಸುತ್ತಿನಕೋಟೆ ಇವತ್ತು ನಮ್ಮ ರಾಜ್ಯದ ಅಮೂಲ್ಯ ಆಸ್ತಿಗಳಲ್ಲೊಂದಾಗಿದೆ.

ಕಾಲಕಾಲಕ್ಕೆ ದುರ್ಗದ ಬದುಕು ಮತ್ತು ಚಿಂತನೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ ಮಹನೀಯರು ಮತ್ತು ಮಹಿಳೆಯರ ಪಟ್ಟಿ ದೊಡ್ಡದಿದೆ. ಅವರಲ್ಲಿ ಕೆಲವರ ನಾಮಸ್ಮರಣೆ ಮಾಡುವುದರ ಮೂಲಕ ಗೌರವ ಸಲ್ಲಿಸಲು ಇದು ಸಕಾಲ. ನಾನಾ ಕ್ಷೇತ್ರಗಳಲ್ಲಿ ದುಡಿದು ದುರ್ಗದ ಕಲ್ಲು, ಬೆಟ್ಟ, ಗುಡ್ಡ, ಬಿಸಿಲು, ಮಣ್ಣು, ನೀರು ಬಾರದ ನಲ್ಲಿಗಳ ನಡುವೆ ಜೀವನ ಸಾಗಿಸಿದ ಕೆಲವರ ನಾಮಸ್ಮರಣೆಯನ್ನು ಮಾಡುವ ಪ್ರಯತ್ನ ಇಲ್ಲಿದೆ.

ಒನಕೆ ಓಬವ್ವ, ರಾಜಾ ವೀರ ಮದಕರಿ ನಾಯಕ (ಐತಿಹಾಸಿಕ); ಹುಲ್ಲೂರು ಶ್ರೀನಿವಾಸ ಜೋಯಿಸ್, ಪ್ರೊ. ಬಿ. ರಾಜಶೇಖರಪ್ಪ, ಲಕ್ಷಣ ತೆಲಗಾವಿ (ಇತಿಹಾಸ); ತರಾಸು, ಟಿಎಸ್ ವೆಂಕಣ್ಣಯ್ಯ, ಬೆಳಗೆರೆ ಕೃಷ್ಣಶಾಸ್ತ್ರಿ, ಬಿಎಲ್ ವೇಣು (ಸಾಹಿತ್ಯ); ಕೆ. ಶಾಮರಾವ್, ಸಿದ್ದವನಹಳ್ಳಿ ಕೃಷ್ಣಶರ್ಮಾ, ಬಿವಿ ವೈಕುಂಠರಾಜು (ಪತ್ರಿಕೋದ್ಯಮ) ; ಹಂಸಗೀತೆಯ ಜಿವಿ ಅಯ್ಯರ್, ನಾಗರಹಾವಿನ ಪುಟ್ಟಣ್ಣ ಕಣಗಾಲ್ (ಚಲನಚಿತ್ರ); ಆಶುಕವಿ ಲಾವಣಿ ಮಂಜಣ್ಣ.

ಸಾಮಾಜಿಕ ರಾಜಕೀಯ ಕ್ಷೇತ್ರದಲ್ಲಿ, ಮುರುಘರಾಜೇಂದ್ರ ಮಠ, ಸಿರಿಗೆರೆ ಮಠ, ಸಿ. ಚನ್ನಕೇಶವಯ್ಯ, ಸಿದ್ದವನಹಳ್ಳಿ ನಿಜಲಿಂಗಪ್ಪ, ಜಗಳೂರು ಇಮಾಂ, ಟಿ. ಎಸ್. ಶಾಮರಾವ್; ದುರ್ಗದ ಪ್ರೇಕ್ಷಣೀಯ ಸ್ಥಳಗಳಲ್ಲಿ ಏಳು ಸುತ್ತಿನ ಕೋಟೆ ಕೊತ್ತಲಗಳು, ಜೋಗಿಮಟ್ಟಿ, ಚಂದ್ರವಳ್ಳಿ, ತಿಮ್ಮಣ್ಣನಾಯಕನ ಕೆರೆ, ಸಂತೆಹೊಂಡ, ಚಂದ್ರಮಾಸದ ಹೊಂಡ, ಇತಿಹಾಸ ವಸ್ತುಪ್ರದರ್ಶನಾಲಯ, ಒಂಟಿಕಾಲು ಬಸವಣ್ಣ, ಝಾಂಡಾ ಬತೇರಿ, ಉಚ್ಚಂಗಮ್ಮನ ದೇವಸ್ಥಾನ, ಕಾಮನ ಬಾವಿ ಮತ್ತು ಇತ್ತೀಚಿನ ಗಾಳಿಯಿಂದ ವಿದ್ಯುತ್ ಉತ್ಪಾದಿಸುವ ಯಂತ್ರಗಳ ಸಾಲು ನೋಟಗಳು.

ಚಿತ್ರದುರ್ಗದ ಜನಜೀವನಕ್ಕೆ ಅಮೂಲ್ಯ ಕೊಡುಗೆ ನೀಡಿದ ಹೆಸರಾಂತ ವ್ಯಕ್ತಿಗಳು, ಶ್ರೀಸಾಮಾನ್ಯ ವ್ಯಕ್ತಿಗಳ ಕಿರು ಪರಿಚಯವನ್ನು ಕಾಮೆಂಟ್ ವಿಭಾಗದಲ್ಲಿ ದಾಖಲಿಸುವುದಕ್ಕೆ ನಿಮಗೆ ಸ್ವಾಗತ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ವಚನ ಸಾಹಿತ್ಯದ ವಕ್ತಾರ ಎಲ್ ಬಸವರಾಜು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X