ಬೋಲ್ಟ್ ರನ್ನು ಸೋಲಿಸಿದ ಏಕೈಕ ಕ್ರಿಕೆಟರ್ ಯುವಿ!

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 06: ಜಗದೇಕ ವೇಗದ ಓಟಗಾರ ಜಮೈಕಾದ ಉಸೇನ್ ಬೋಲ್ಟ್ ಅವರು ತಮ್ಮ ವೃತ್ತಿ ಬದುಕಿಗೆ ಅಂತ್ಯ ಹಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಶ್ವದೆಲ್ಲೆಡೆಯಿಂದ ಅಭಿಮಾನಗಳಿಂದ ಶುಭ ಹಾರೈಕೆ ಸಿಕ್ಕಿದೆ. ಕ್ರಿಕೆಟರ್ ಯುವರಾಜ್ ಸಿಂಗ್ ಅವರು ಬೋಲ್ಟ್ ರನ್ನು ಸೋಲಿಸಿದ ಏಕೈಕ ಕ್ರಿಕೆಟರ್ ಎಂದು ಹೇಳಿಕೊಂಡಿದ್ದಾರೆ.

ವಿಶ್ವ ಮಟ್ಟದಲ್ಲಿ 11 ಬಾರಿ ಚಿನ್ನದ ಪದಕ ಗೆದ್ದಿರುವ, 100 ಮೀಟರ್ ವಿಶ್ವದಾಖಲೆ ಹೊಂದಿರುವ ಬೋಲ್ಟ್ ಅವರು ಲಂಡನ್ ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ ಶಿಪ್ ಮತ್ತೆ ಟ್ರ್ಯಾಕಿಗೆ ಇಳಿಯುತ್ತಿಲ್ಲ.

Yuvraj Singh Defeated Usain Bolt, The Fastest Human

2014ರಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕ್ರಿಕೆಟ್ ಪ್ರದರ್ಶನ ಪಂದ್ಯಕ್ಕೂ ಮುನ್ನ ಉಸೇನ್ ಬೋಲ್ಟ್ ಜೊತೆಗೆ ಓಡಿದ್ದ ಯುವರಾಜ್ ಸಿಂಗ್ ಅವರು ಗೆಲುವು ಸಾಧಿಸಿದ್ದರು.ಈ ಹಳೆಯ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು, ಇನ್ಸ್ಟಾ ಗ್ರಾಮ್ ನಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ವಿಶ್ವ ಕಂಡ ಅಸಾಮಾನ್ಯ ಅಥ್ಲೀಟ್ ಗೆ ಗೌರವಪೂರ್ವಕ ವಿದಾಯ ಹೇಳಲು ಎಲ್ಲರೂ ಕಾದಿದ್ದಾರೆ. ಕೊನೆ ಓಟದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರೂ ಬೋಲ್ಟ್ ಅವರ ಬಗ್ಗೆ ಎಲ್ಲರೂ ಅಭಿಮಾನದಿಂದ ಟ್ವೀಟ್ ಮಾಡಿದ್ದಾರೆ. ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡ ಬೋಲ್ಟ್ ಗೆ ತಮ್ಮದೇ ಆದ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡಾ ಟ್ವೀಟ್ ಮಾಡಿ ತಮ್ಮ ಶುಭ ಹಾರೈಕೆ ಸಲ್ಲಿಸಿದ್ದಾರೆ.

Whiteley Smashes Six Sixes In An Over | Oneindia Kannada

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Usain Bolt, Jamaican sprinter and the fastest human in the world, will soon end his illustrious career. The winner of eight Olympic and 11 world gold medals is currently defending his 100-metre title in his final appearance at the World Championships in London. As the Olympian gets ready to bid farewell, a tribute came from cricketer Yuvraj Singh on Instagram.
Please Wait while comments are loading...