ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

Deadman ಅಂಡರ್ ಟೇಕರ್ ನಿವೃತ್ತಿ ಬಗ್ಗೆ WWE ಮೌನವೇಕೆ?

ಕುತೂಹಲ, ನಿಗೂಢ, ಭಯ, ಅಚ್ಚರಿಗೆ ಕಾರಣವಾಗಿದ್ದ ದಿ ಅಂಡರ್ ಟೇಕರ್ ನ wwe ವೃತ್ತಿ ಬದುಕು ಅಂತ್ಯ ಕಂಡಿದೆ. ಆದರೆ, ವಾರ ಕಳೆದರೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸದೆ WWE ಕುತೂಹಲ ಮೂಡಿಸಿದೆ.

By ರಾಜ

WWE ದಿಗ್ಗಜ ರೆಸ್ಲರ್ ಅಂಡರ್ ಟೇಕರ್ ನಿವೃತ್ತಿ ಘೋಷಿಸಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲು ಅಭಿಮಾನಿಗಳಿಗೆ ಇನ್ನೂ ಆಗುತ್ತಿಲ್ಲ. ಸರಿ ಸುಮಾರು 26 ವರ್ಷಗಳ ಕಾಲ ವಿಶ್ವದೆಲ್ಲೆಡೆ ಅಭಿಮಾನಿಗಳನ್ನು ಪಡೆದ ಅಂಡರ್ ಟೇಕರ್ ಅವರ ನಿವೃತ್ತಿ ಬಗ್ಗೆ WWE ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.

ಹಾಗಾದರೆ, ಮತ್ತೆ ಅಂಡರ್ ಟೇಕರ್ ಅವರು ರೀ ಎಂಟ್ರಿ ಕೊಡುತ್ತಾರಾ ಎಂಬ ಕುತೂಹಲದ ಪ್ರಶ್ನೆ ಎದ್ದಿದೆ. ಆದರೆ, 6.1 ಅಡಿ ಎತ್ತರದ ದೈತ್ಯ ಕುಸ್ತಿಪಟುವವಿಗೆ ಈಗ 52 ವರ್ಷವಾಗಿದೆ. ಹೀಗಾಗಿ ಮತ್ತೆ ಕುಸ್ತಿ ಅಂಗಳಕ್ಕೆ ಇಳಿಯುವುದು ಕಷ್ಟ ಎನ್ನಲಾಗಿದೆ.

ಅಂಡರ್ ಟೇಕರ್ ಬೆನ್ನಹುರಿ ಸರ್ಜರಿಗೆ ಒಳಗಾಗಲಿದ್ದು, ಇನ್ನೆಂದು ಕುಸ್ತಿ ಅಖಾಡಕ್ಕೆ ಇಳಿಯಲು ಸಾಧ್ಯವಿಲ್ಲ ಎಂಬ ಸುದ್ದಿಯಿದೆ. ಏನಾದರೂ ಇಂಥ ಲೆಜೆಂಡ್ ರೆಸ್ಲರ್ ಗೆ ಸರಿಯಾದ ಸೆಂಡ್ ಆಫ್ ಸಿಗಲಿಲ್ಲ ಎಂಬ ಕೊರಗು ಅಭಿಮಾನಿಗಳಲ್ಲಿದೆ

WWE will not officially address The Undertaker’s retirement

ಟೆಕ್ಸಾಸ್ ಮೂಲದ ಮಾರ್ಕ್ ವಿಲಿಯಂ ಕ್ಯಾಲವೆ ಹೆವಿವೈಟ್ ಚಾಂಪಿಯನ್ ಶಿಪ್ ಗೆ ಎಂಟ್ರಿ ಕೊಟ್ಟು ಡೆಡ್ ಮ್ಯಾನ್ ಆಗಿ ಎಷ್ಟೋ ಸಲ ಈತ ಮನುಷ್ಯನೋ ಭೂತವೋ ಎಂಬ ಭೀತಿ ಹುಟ್ಟಿಸಿ, ಹ್ಯಾಟ್, ಕೋಟು, ಹೇರ್ ಸ್ಟೈಲ್ ಮೂಲಕ ಎಲ್ಲರನ್ನು ಗಮನ ಸೆಳೆದ ವರ್ಣ ರಂಜಿತ ಕುಸ್ತಿಪಟುವಿಗೆ ಸಹ ಆಟಗಾರರು ಕೂಡಾ ಗೌರವ ಸಲ್ಲಿಸಿದ್ದಾರೆ.

ಏಪ್ರಿಲ್ 2ರಂದು ನಡೆದ ಕುಸ್ತಿ ಪಂದ್ಯದಲ್ಲಿ ಅಂಡರ್ ಟೇಕರ್ ಅವರನ್ನು ಸೋಲಿಸಿದ ಬಳಿಕ ರೊಮನ್ ರೈನ್ಸ್ ಕಣ್ಣೀರಿಟ್ಟಿದ್ದರು. ಅಂಡರ್ ಟೇಕರ್ ಎಂಟ್ರಿ ಹೇಗೆ ವಿಭಿನ್ನವಾಗಿರುತ್ತಿತ್ತೋ, ಎಕ್ಸಿಟ್ ಕೂಡಾ ನೀರವ ಮೌನವಾಗಿತ್ತು.



ಆದರೆ, ಎಂಟ್ರಿ ಸಮಯದ ಚರ್ಚ್ ಗಂಟೆ ಸದ್ದು ಕೇಳಿಸುತ್ತಿರಲಿಲ್ಲ ಅಷ್ಟೆ. ಒಟ್ಟಾರೆ, ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಅಂಡರ್ ಟೇಕರ್ ಸೋಲಿಲ್ಲದ ಸರದಾರರಾಗಿ ಅಭಿಮಾನಿಗಳ ಮನದಾಳದಲ್ಲಿ ಉಳಿದಿದ್ದಾರೆ.

ದಿ ಅಂಡರ್ ಟೇಕರ್ ಮುಂದಿನ ಹೆಜ್ಜೆ ಎಲ್ಲಿ ಏನು? ಗೊತ್ತಾದಾಗ ಅಪ್ಡೇಟ್ ಮಾಡುತ್ತೇವೆ. ಅಲ್ಲಿ ತನಕ deadman R.I.P

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X