ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

WWE ದಿವಾ ಆಗಲು ಹೊರಟ ಕವಿತಾಗೆ ಆರಂಭಿಕ ಆಘಾತ!

By ರಾಜ

ನ್ಯೂಯಾರ್ಕ್, ಜುಲೈ 17: ಭಾರತದ ಮಾಜಿ ಪವರ್ ಲಿಫ್ಟರ್ ಕವಿತಾ ದೇವಿ ಅವರು ರೆಸ್ಲಿಂಗ್ ಅಂಗಳಕ್ಕೆ ಅಧಿಕೃತವಾಗಿ ಧುಮುಕಿದ್ದಾರೆ. ದಕ್ಷಿಣ ಏಷ್ಯಾ ಗೇಮ್ಸ್‌ ನಲ್ಲಿ ಭಾರತದ ಪರ ಚಿನ್ನ ಗೆದ್ದಿರುವ ಮಾಜಿ ವೇಟ್‌ ಲಿಫ್ಟರ್‌ ಕವಿತಾ ದೇವಿ ಅವರು ಈಗ WWE ದಿವಾ ಆಗಲು ಮುಂದಾಗಿದ್ದಾರೆ. ಆದರೆ, ಮೊದಲ ಪಂದ್ಯದಲ್ಲೇ ಕವಿತಾ ಸೋಲು ಕಂಡಿದ್ದು ಮುಂದಿನ ಹಾದಿ ಏನು ಎಂಬ ಪ್ರಶ್ನೆ ಎದುರಾಗಿದೆ.

ಈ ಭಾರತೀಯ ರೆಸ್ಲರ್ WWE ಗೆ ಹೊಸ ಮಹಾರಾಜ!ಈ ಭಾರತೀಯ ರೆಸ್ಲರ್ WWE ಗೆ ಹೊಸ ಮಹಾರಾಜ!

WWEಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳಾ ಪಟು ಎನಿಸಿಕೊಂಡಿರುವ 'ಮೇ ಯಂಗ್‌ ಕ್ಲಾಸಿಕ್‌' ಪಂದ್ಯಾವಳಿಯಲ್ಲಿ ಕವಿತಾ ಅವರು ಮೊದಲ ನಾಕೌಟ್ ಪಂದ್ಯದಲ್ಲೇ ನ್ಯೂಜಿಲೆಂಡ್ ನ ಡಕೋಟಾ ಕಾಯಿ ವಿರುದ್ಧ ಸೋತು ನಿರ್ಗಮಿಸಿದ್ದಾರೆ.

ಹರಿಯಾಣ ಮೂಲದ ಕವಿತಾ ದೇವಿ ಅವರು WWE ಮಾಜಿ ವಿಶ್ವ ಚಾಂಪಿಯನ್‌, ಭಾರತ ಮೂಲದ 'ದಿ ಗ್ರೇಟ್‌ ಖಲಿ' ಅವರ ಅಕಾಡೆಮಿಯಲ್ಲಿ ಅಮೆರಿಕನ್ ಶೈಲಿಯ ರೆಸ್ಲಿಂಗ್ ತರಬೇತಿಪಡೆದುಕೊಳ್ಳುತ್ತಿದ್ದಾರೆ. ಕಳೆದ ಏಪ್ರಿಲ್‌ ತಿಂಗಳನಲ್ಲಿ ದುಬೈನಲ್ಲಿ ನಡೆದಿದ್ದ WWE ದುಬೈ ಟ್ರೈಔಟ್‌ನಲ್ಲಿ ಸ್ಪರ್ಧಿಸಿದ್ದ ಕವಿತಾದೇವಿ ಎಲ್ಲರ ಗಮನ ಸೆಳೆದಿದ್ದರು.

ಜಿಂದರ್ ಮಹಲ್

ಜಿಂದರ್ ಮಹಲ್

ಭಾರತ ಮೂಲದ ಜಿಂದರ್ ಮಹಲ್ ಅವರು WWE ಚಾಂಪಿಯನ್ ಹಾಗೂ ಸಂಜಯ್ ದತ್ ಅವರು ಎಕ್ಸ್ ಡಿವಿಷನ್ ಚಾಂಪಿಯನ್ ಎನಿಸಿಕೊಂಡ ಬಳಿಕ ಭಾರತೀಯರಲ್ಲಿ ಅಮೆರಿಕನ್ ರೆಸ್ಲಿಂಗ್ ಹುಚ್ಚು ಇನ್ನಷ್ಟು ಹೆಚ್ಚಾಗಿದೆ. ದಿ ಗ್ರೇಟ್ ಖಲಿ ಅವರ ಕೇಂದ್ರದಲ್ಲಿ ತರಬೇತಿ ಪಡೆದಿರುವ ಮಾಜಿ ವೇಟ್ ಲಿಫ್ಟರ್ ಕವಿತಾ ದೇವಿ ಅವರು ರೆಸ್ಲಿಂಗ್ ಅಖಾಡಕ್ಕೆ ಇಳಿದಿದ್ದರು.

ವೇಗ ಹಾಗೂ ಶಕ್ತಿಯ ಕಾಳಗ

ಭಾರತದ ಕವಿತಾ ಹಾಗೂ ನ್ಯೂಜಿಲೆಂಡ್ ನ ಡಕೋಟಾ ಕಾಯಿ ವಿರುದ್ದದ ನಾಕೌಟ್ ಪಂದ್ಯದಲ್ಲಿ ವೇಗ ಹಾಗೂ ಶಕ್ತಿಯ ಪ್ರದರ್ಶನವಾಯಿತು.

ಎರಡನೇ ಚಾನ್ಸ್

ಎರಡನೇ ಚಾನ್ಸ್

ಮೇ ಯಂಗ್ ಟೂರ್ನಮೆಂಟ್ ನ ನಾಕೌಟ್ ಸ್ಪರ್ಧೆಯಿಂದ ಔಟಾದ ತಕ್ಷಣ WWE ಜರ್ನಿ ಮುಕ್ತಾಯವಾಯಿತು ಎಂದು ಕವಿತಾ ಬೇಸರಗೊಳ್ಳಬೇಕಿಲ್ಲ. ಹೊಸಬರಿಗೆ ಎರಡನೇ ಅವಕಾಶ ನೀಡುವ ಪರಿಪಾಠ ಬೆಳೆದುಕೊಂಡು ಬಂದಿದ್ದು, ಬಿಗ್ ರೆಸ್ಲಿಂಗ್ ಲೀಗ್ ನಲ್ಲಿ ಕವಿತಾಗೆ ಮತ್ತೆ ಅವಕಾಶ ಸಿಗುವ ಸಾಧ್ಯತೆಯಿದೆ. ಈ ಹಿಂದೆ ಜಿಂದರ್ ಮಹಲ್ ಗೂ ಈ ರೀತಿ ಅವಕಾಶ ನೀಡಲಾಗಿತ್ತು.

ಓಪನ್ ಚಾಲೆಂಜ್ ಗೆದ್ದಿದ್ದ ಕವಿತಾ

ಒಮ್ಮೆ ಬಿಬಿ ಬುಲ್ ಬುಲ್ ಹೆಸರಿನ ಮಹಿಳಾ ರೆಸ್ಲರ್ ರೊಬ್ಬರು ಕುಸ್ತಿ ಅಂಗಳದಲ್ಲಿ ಓಪನ್ ಚಾಲೆಂಜ್ ಹಾಕುತ್ತಾರೆ. ಪಂದ್ಯ ನೋಡಲು ಬಂದ ಕವಿತಾ ಅವರು ರಿಂಗ್ ನೊಳಗೆ ನುಗ್ಗಿದ ಕವಿತಾ ಅವರು ಎರಡನೇ ಪ್ರಯತ್ನದಲ್ಲಿ ಬುಲ್ ಬುಲ್ ರನ್ನು ಕೆಳಗುರುಳಿಸಿದ್ದರು. ಹೀಗೆ ಕುಸ್ತಿಯಲ್ಲಿ ಆಸಕ್ತಿ ಬೆಳೆಸಿಕೊಂಡ ಕವಿತಾರನ್ನು ಕುಸ್ತಿಪಟು ಮಾಡುವಲ್ಲಿ ಖಲಿ(ದಲಿಪ್ ಸಿಂಗ್ ರಾಣಾ) ಅವರು ಯಶಸ್ವಿಯಾಗಿದ್ದಾರೆ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X