ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಆಸ್ಟ್ರೇಲಿಯಾದಲ್ಲಿ ಮೊದಲ ಜಯ ದಾಖಲಿಸಿದ ಧೋನಿ ಟೀಂ

By Mahesh

ಅಡಿಲೇಡ್, ಫೆ.10: ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಟೀಂ ಇಂಡಿಯಾ ಮಂಗಳವಾರ ಅಫ್ಘಾನಿಸ್ತಾನ ತಂಡದೆದುರು ತಿಣುಕಾಡುತ್ತಿದೆ. ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಗೆಲುವಿಗಾಗಿ ನಡೆಸಿದ ಹುಡುಕಾಟ ಕೊನೆಗೂ ಮಂಗಳವಾರ ಅಂತ್ಯಕಂಡಿದೆ.. ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ 153 ರನ್ ಜಯ ದಾಖಲಿಸಿದೆ.

ಫೆ.15ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸಲಿರುವ ಟೀಂ ಇಂಡಿಯಾಕ್ಕೆ ಇದು ಎರಡನೇ ಅಭ್ಯಾಸ ಪಂದ್ಯವಾಗಿದೆ. ಟಾಸ್ ಗೆದ್ದ ಧೋನಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು.

ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ
| ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ

ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿತು. ರೈನಾ ಹಾಗೂ ರೋಹಿತ್ ಶರ್ಮ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಜೊತೆಯಾಟ ಕಾಯ್ದುಕೊಂಡರು. 122 ಎಸೆತಗಳಲ್ಲಿ 150 ರನ್ ಚೆಚ್ಚಿದ ರೋಹಿತ್ ಶರ್ಮ ಔಟ್ ಆಗಿದ್ದಾರೆ. 50 ಓವರ್ ಗಳಲ್ಲಿ 364/5 ಸ್ಕೋರ್ ಮಾಡಿದೆ. ಸ್ಕೋರ್ ಕಾರ್ಡ್ ಐಸಿಸಿ ಪುಟದಲ್ಲಿ

Rohit Sharma


ಎಂಎಸ್ ಧೋನಿ ಮತ್ತೊಮ್ಮೆ ವಿಫಲರಾಗಿ ಕೇವಲ 10 ರನ್ ಗಳಿಸಿ ಔಟಾದರು. ರೋಹಿತ್ ಶರ್ಮ 12 ಬೌಂಡರಿ, 4 ಸಿಕ್ಸರ್ ಸಿಡಿಸಿ ಪ್ರೇಕ್ಷಕರನ್ನು ರಂಜಿಸಿದರು.

ಭಾರತ 364/5, 50 ಓವರ್ಸ್
ಅಫ್ಘಾನಿಸ್ತಾನ ತಂಡ 50 ಓವರ್ಸ್ 211/8 ಸ್ಕೋರ್
* ರೋಹಿತ್ ಶರ್ಮ 150 (122 ಎ, 12x4, 7x6)
* ಸುರೇಶ್ ರೈನಾ 75 (71 ಎ, 5x4, 3x6),
* ರಹಾನೆ 88*(61b, 12x4, 2x6)
* ಹಮೀದ್ ಹಸನ್, ದಾವತ್ ಜದ್ರಾನ್, ಮಹಮ್ಮದ್ ನಬಿ, ಶಾಪೂರ್ ಜದ್ರಾನ್ ತಲಾ 1 ವಿಕೆಟ್

ಟೀಂ ಇಂಡಿಯಾದ 365 ರನ್ ಟಾರ್ಗೆಟ್ ಗೆ ಉತ್ತರವಾಗಿ ಅಫ್ಘಾನಿಸ್ತಾನ ತಂಡ 50 ಓವರ್ಸ್ 211/8 ಸ್ಕೋರ್ ಮಾಡಿತು. ಅಶ್ವಿನ್ 10 ಓವರ್ ಗಳಲ್ಲಿ 37 ರನ್ನಿಗೆ 1 ವಿಕೆಟ್ ಕಿತ್ತು ಮತ್ತೆ ಲಯಕ್ಕೆ ಮರಳಿರುವುದಾಗಿ ಘೋಷಿಸಿದರು. ಅಫ್ಘಾನ್ ಪರ ನವ್ರೋಜ್ ಮಂಗಲ್ 60, ಉಸ್ಮಾನ್ ಘನಿ 44 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು.

ಫೆ.8ರಂದು ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 106 ರನ್ ಗಳ ಅಂತರದ ಹೀನಾಯ ಸೋಲು ಅನುಭವಿಸಿದ ಧೋನಿ ತಂಡಕ್ಕೆ ಆಫ್ಘಾನಿಸ್ತಾನ ವಿರುದ್ಧ ಆಡಲು ಎಲ್ಲಾ 15 ಆಟಗಾರರು ಫಿಟ್ ಇದ್ದಾರೆ ಎಂದಿದ್ದರು. [ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಹೀನಾಯ ಸೋಲು]

ವಿಶ್ವಕಪ್ ಟೂರ್ನಿಗೂ ಮುನ್ನ 14 ಅಭ್ಯಾಸ ಪಂದ್ಯಗಳು ನಡೆಯಲಿವೆ. ಅದರೆ, ಯಾವ ಅಭ್ಯಾಸ ಪಂದ್ಯಕ್ಕೂ ಅಂತಾರಾಷ್ಟ್ರೀಯ ಏಕದಿನ ಪಂದ್ಯದ ಮಾನ್ಯತೆ ಇರುವುದಿಲ್ಲ. ಅಭ್ಯಾಸ ಪಂದ್ಯಗಳಲ್ಲಿ 11 ಆಟಗಾರರ ಬದಲಿಗೆ 15 ಆಟಗಾರರನ್ನು ಕಣಕ್ಕಿಳಿಸಬಹುದಾಗಿದೆ.

Ajikya Rahane


ಭಾರತ: ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್) ಅಜಿಂಕ್ಯ ರಹಾನೆ, ಶಿಖರ್ ಧವನ್,ವಿರಾಟ್ ಕೊಹ್ಲಿ, ಸುರೇಶ್ ರೈನಾ,ರೋಹಿತ್ ಶರ್ಮ,ಅಂಬಟಿ ರಾಯುಡು ಆರ್ ಅಶ್ವಿನ್, ಅಕ್ಷರ್ ಪಟೇಲ್, ರವೀಂದ್ರ ಜಡೇಜ,ಸ್ಟುವರ್ಟ್ ಬಿನ್ನಿ, ಭುವನೇಶ್ವರ್ ಕುಮಾರ್, ಮಹಮ್ಮದ್ ಶಮಿ, ಉಮೇಶ್ ಯಾದವ್, ಮೋಹಿತ್ ಶರ್ಮ [ಟೀಂ ಇಂಡಿಯಾ ಬಗ್ಗೆ ಪೂರ್ಣ ಗೈಡ್]

ಅಫ್ಘಾನಿಸ್ತಾನ: ಮೊಹಮ್ಮದ್ ನಬಿ(ನಾಯಕ), ನವ್ರೋಜ್ ಮಂಗಲ್, ಅಸ್ಘರ್ ಸ್ಟಾನಿಕ್ಜಾಜಿ, ಸಮಿಯುಲ್ಲಾ ಶೆನ್ವಾರಿ, ಅಫ್ಸಾರ್ ಜಾಜಾಯಿ(ವಿಕೆಟ್ ಕೀಪರ್), ನಾಜಿಬುಲ್ಲಾ ಜಾರ್ದ್ರಾನ್, ನಾಸೀರ್ ಜಮಾಲ್, ಮಿರ್ವಾಯಿಸ್ ಅಶ್ರಾಫ್, ಗುಲ್ಬದಿನ್ ನಯಿಬ್, ಹಮೀದ್ ಹಸನ್, ಶಪೂರ್ ಜದ್ರಾನ್, ದವ್ಲತ್ ಜದ್ರಾನ್, ಆಫ್ತಾಬ್ ಅಲಂ, ಜಾವೇದ್ ಅಹ್ಮದಿ, ಉಸ್ಮನ್ ಘನಿ

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X