ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಯುದ್ಧಕ್ಕೂ ಮುನ್ನ ಪಾಕ್ ಕ್ರಿಕೆಟರ್ಸ್ ಗೆ ನೋಟಿಸ್

By Mahesh

ಸಿಡ್ನಿ, ಫೆ.13: ಭಾರತ ವಿರುದ್ಧದ ವಿಶ್ವಕಪ್ ಸಮರಕ್ಕೂ ಮುನ್ನ ಪಾಕಿಸ್ತಾನದ ಎಂಟು ಆಟಗಾರರು ನೋಟಿಸ್ ಪಡೆದುಕೊಂಡಿದ್ದಾರೆ. ಪಂದ್ಯದ ವೇಳೆ ಅನುಚಿತವಾಗಿ ವರ್ತಿಸಿದರೆ ಟೂರ್ನಿಯಿಂದಲೇ ಗೇಟ್ ಪಾಸ್ ಆಗುವ ಭೀತಿ ಎದುರಿಸುತ್ತಿದ್ದಾರೆ.

ಐಸಿಸಿ ನಿಯಮಗಳನ್ನು ಉಲ್ಲಂಘಿಸಿರುವ ಶಹೀದ್ ಅಫ್ರಿದಿ ಸೇರಿದಂತೆ ಎಂಟು ಜನ ಆಟಗಾರರಿಗೆ ಮತ್ತೊಮ್ಮೆ ನಿಯಮ ಮೀರಿ ನಡೆಯದಂತೆ ಎಚ್ಚರಿಕೆ ನೀಡಿ ನೋಟಿಸ್ ನೀಡಲಾಗಿದೆ ಎಂದು ಎಎಫ್ ಪಿ ವರದಿ ಮಾಡಿದೆ.

ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ</a> | <a class=ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ" title="ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ" />ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ

ಮಾಜಿ ನಾಯಕ ಶಹೀದ್ ಆಫ್ರಿದಿ ಹಾಗೂ ಆರಂಭಿಕ ಆಟಗಾರ ಅಹ್ಮದ್ ಶೆಹಜಾದ್ ಅವರಿಗೆ ಸುಮಾರು 300 ಆಸ್ಟ್ರೇಲಿಯನ್ ಡಾಲರ್ (ಯುಎಸ್ ಡಿ 230) ತಂಡ ವಿಧಿಸಲಾಗಿದೆ. ಅಫ್ರಿದಿ, ಅಹ್ಮದ್ ಸೇರಿದಂತೆ ಎಂಟು ಆಟಗಾರರು ಸಿಡ್ನಿಯಲ್ಲಿರುವ ತಮ್ಮ ಹೋಟೆಲಿಗೆ ತಡವಾಗಿ ಆಗಮಿಸಿದ್ದರು ಎಂದು ತಿಳಿದು ಬಂದಿದೆ. [ಎಬಿಡಿ ತ್ವರಿತ ಶತಕ ದಾಖಲೆ ಮುರಿಯುತ್ತೇನೆ: ಅಫ್ರಿದಿ]

World Cup: 8 Pakistan players fined ahead of India clash

ಪಾಕಿಸ್ತಾನದ ಮ್ಯಾನೇಜರ್ ನವೀದ್ ಚೀಮಾ ಮಾಜಿ ಯೋಧರಾಗಿದ್ದು, ತಂಡಕ್ಕೆ ಶಿಸ್ತಿನ ನಿಯಮಗಳನ್ನು ವಿಧಿಸಿದ್ದಾರೆ. ಅದರೂ ಎಂಟು ಆಟಗಾರರು ನಿಗದಿತ ಸಮಯಕ್ಕಿಂತ 45 ನಿಮಿಷ ತಡವಾಗಿ ಆಟಗಾರರು ಹೋಟೆಲ್ ತಲುಪಿದ್ದಾರೆ.ಕ್ರಿಕೆಟ್ ಸಮರಕ್ಕೆ ಮುನ್ನ ನೈಟ್ ಔಟ್ ಗೆ ನಿರ್ಬಂಧ ಹೇರಲಾಗಿದ್ದರೂ ಪಾಕ್ ಆಟಗಾರರು ನಿಯಮ ಮೀರಿ ವರ್ತಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. [ಪಾಕಿಸ್ತಾನ ಕ್ರಿಕೆಟರ್ ಗೆ 'ಭೂತ ಕಾಟ']

ಫೆ.14ರಂದು ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ ಪಂದ್ಯಾವಳಿಗಳು ನಡೆಯಲಿದ್ದು, ಫೆ.15ರಂದು ಬದ್ಧವೈರಿಗಳಾದ ಭಾರತವನ್ನು ಪಾಕಿಸ್ತಾನ ತಂಡ ಅಡಿಲೇಡ್ ನಲ್ಲಿ ಎದುರಿಸಲಿದೆ.[ಟೀಂ ಇಂಡಿಯಾ ಪಂದ್ಯಗಳ ವೇಳಾಪಟ್ಟಿ]

ಈ ಹಿಂದೆ ಕೂಡಾ ಪಾಕಿಸ್ತಾನ ಆಟಗಾರರು ಇದೇ ರೀತಿ ದುರ್ವತನೆಯಿಂದ ದಂಡ ಕಟ್ಟಿದ್ದಲ್ಲದೆ ಪಂದ್ಯದಿಂದ ನಿಷೇಧ ಶಿಕ್ಷೆಯನ್ನು ಅನುಭವಿಸಿದ್ದರು. ಸಲ್ಮಾನ್ ಬಟ್, ಮಹಮ್ಮದ್ ಆಸಿಫ್ ಹಾಗೂ ಮೊಹಮ್ಮದ್ ಆಮೀರ್ ಕಥೆ ಎಲ್ಲರಿಗೂ ಗೊತ್ತೇ ಇದೆ.

2010ರಲ್ಲಿ ಇಂಗ್ಲೆಂಡ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಈ ಮೂವರು ಆರೋಪಿಗಳಾದರು. ನಂತರ ಐದು ವರ್ಷ ನಿಷೇಧ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಇವರನ್ನು ಬಳಸಿಕೊಂಡ ಏಜೆಂಟ್ ಮಜರ್ ಮಜೀದ್ ಕೂಡಾ ಯುಕೆ ಜೈಲಿನಲ್ಲಿದ್ದಾರೆ. (ಎಎಫ್ ಪಿ)

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X