ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಮೆಲ್ಬೋರ್ನ್ ನಲ್ಲಿ ಇತಿಹಾಸ ನಿರ್ಮಿಸಿದ ಧೋನಿ ಪಡೆ

ಮೆಲ್ಬೋರ್ನ್, ಫೆ.22: ಮೆಲ್ಬೋರ್ನ್ ಅಂಗಳದಲ್ಲಿ ಧೋನಿ ಪಡೆ ಇತಿಹಾಸ ನಿರ್ಮಾಣ ಮಾಡಿದೆ. ಹಿಂದಿನ ವಿಶ್ವಕಪ್ ಗಳಲ್ಲಿ ಸಾಧ್ಯವಾಗದ್ದನ್ನು ಮಾಡಿ ತೋರಿಸಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ 130 ರನ್ ಗಳ ಜಯ ಗಳಿಸಿದ್ದು ಹೊಸ ಇತಿಹಾಸ ಬರೆದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನ ನಂತರ ಭಾರತ ಬಿ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಹೊರಹೊಮ್ಮಿದೆ. ಭಾರತದ ಗೆಲುವಿಗೆ ಟ್ವಿಟ್ಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

cricket 1

ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆಮಾಡಿಕೊಂಡು ಶಿಖರ್ ಧವನ್ ಶತಕ ಮತ್ತು ರಹಾನೆ ಅರ್ಧಶತಕದ ನೆರವಿನಿಂದ 307 ರನ್ ಗಳ ಮೊತ್ತ ಕಲೆಹಾಕಿತ್ತು. ಇದನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ಯಾವ ಹಂತದಲ್ಲೂ ಭಾರತಕ್ಕೆ ಸವಾಲಾಗಿ ಪರಿಣಮಿಸಲಿಲ್ಲ. ಭಾರತದ ಬೌಲರ್ ಗಳು ಆಫ್ರಿಕನ್ನರನ್ನು ಕಟ್ಟಿಹಾಕಲು ಯಶಸ್ವಿಯಾದರು.

ಆರ್. ಅಶ್ವಿನ್ ಮತ್ತು ಮೋಹಿತ್ ಶರ್ಮಾ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದರು. ಶಮಿ ವೇಗ ಮತ್ತು ಅಶ್ವಿನ್ ಸ್ಪಿನ್ ಗೆ ಮಂಕಾದ ದಕ್ಷಿಣ ಆಫ್ರಿಕಾ 177 ರನ್ ಗಳಿಸಿ ಆಲೌಟ್ ಆಯಿತು.

cricket

ಆಮ್ಲಾ ಬಿಟ್ಟ ಕ್ಯಾಚ್!
ಶಿಖರ್ ಧವನ್ 53 ರನ್ ಗಳಿಸಿದ್ದಾಗ ಹಶಿಮ್ ಆಮ್ಲಾ ಕೈ ಚೆಲ್ಲಿದ ಕ್ಯಾಚ್ ಆಫ್ರಿಕಾಕ್ಕೆ ದುಬಾರಿಯಾಗಿ ಪರಿಣಮಿಸಿತು. ನಂತರ ಧವನ್ 137 ರನ್ ಗಳಿಸಿ ಆಮ್ಲಾ ಅವರಿಗೆ ಕ್ಯಾಚಿತ್ತರು.

ಡೆವಿಲಿಯರ್ಸ್ ಡಬಲ್ ರನೌಟ್
ಆರಂಭಿಕ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಎಬಿ ಡೆವಿಲಿಯರ್ಸ್ ಅವರ ಮಿಂಚಿನ ಫಿಲ್ಡಿಂಗ್ ಗೆ ಬಲಿಯಾದರು. ಎರಡು ರನೌಟ್ ಮಾಡಿದ ಡೆವಿಲಿಯರ್ಸ್ ಭಾರತದ ರನ್ ವೇಗಕ್ಕೆ ಕಡಿವಾಣ ಹಾಕಿದರು.ದಕ್ಷಿಣ ಆಫ್ರಿಕಾ ಪರ ಸ್ಟೇಯ್ನ್ 2 ವಿಕೆಟ್, ಮಾರ್ಕೆಲ್, ಇಮ್ರಾನ್ ತಾಹಿರ್ ಮತ್ತು ಪಾರ್ನೆಲ್ ತಲಾ ಒಂದು ವಿಕೆಟ್ ಕಬಳಿಸಿದರು.

ಸ್ಕೋರ್ ವಿವರ
ಭಾರತ: 7 ವಿಕೆಟ್ ಗೆ 307 (ಶಿಖರ್ ಧವನ್ 137, ವಿರಾಟ್ ಕೊಹ್ಲಿ 46, ರಹಾನೆ 79, ರೈನಾ- 6, ಧೋನಿ 18, ಸ್ಟೆಯ್ನ್ 55ಕ್ಕೆ1, ಮೊರ್ಕೆಲ್ 59ಕ್ಕೆ2, ತಾಹಿರ್ 48ಕ್ಕೆ1, ಪರ್ನೆಲ್ 85ಕ್ಕೆ1)
ದಕ್ಷಿಣ ಆಫ್ರಿಕಾ: 40.2 ಓವರ್ ಗಳಲ್ಲಿ 177 ರನ್ ಗೆ ಆಲೌಟ್ (ಹಶೀಂ ಆಮ್ಲ 22, ಕಾಕ್ 6, ಪ್ಲೆಸಿಸ್ 55, ಡಿವಿಲಿಯರ್ಸ್ 30, ಮಿಲ್ಲರ್ 22, ಡುಮಿನಿ 6, ಪರ್ನೆಲ್ 17*, ಶಮಿ 30ಕ್ಕೆ2, ಮೋಹಿತ್ ಶರ್ಮ 31ಕ್ಕೆ2, ಜಡೇಜಾ 37ಕ್ಕೆ1, ಆರ್ ಅಶ್ವಿನ್ 41ಕ್ಕೆ3)

* ಕೊನೆಯ ವಿಕೆಟ್ ಕಬಳಿಸುವ ಮೂಲಕ ರವೀಂದ್ರ ಜಡೇಜಾ ಆಫ್ರಿಕಾದ ಇನಿಂಗ್ಸ್ ಗೆ ತರೆ ಎಳೆದರು.

* ಅಶ್ವಿನ್ ಮ್ಯಾಜಿಕ್ ಗೆ ಬಲಿಯಾಗಿ ಫೆವಿಲಿಯನ್ ಸೇರಿಕೊಂಡ ಮಾರ್ಕೆಕ್, ದಕ್ಷಿಣ ಆಫ್ರಿಕಾ 161 ಕ್ಕೆ 9

* ಮೊದಲ ಎಸೆತದಲ್ಲೇ ಎಲ್ ಬಿ ಬಲೆಗೆಬಿದ್ದ ಫಿಲಾಂಡರ್

* ಸ್ಫೋಟಕ ಬ್ಯಾಟ್ಸಮನ್ ಡೇವಿಡ್ ಮಿಲ್ಲರ್ ರನೌಟ್

* 30 ಓವರ್ಸ್ ನಂತರ ದಕ್ಷಿಣ ಆಫ್ರಿಕಾ 142 ಕ್ಕೆ 4

* ಅರ್ಧಶತಕ ಸಾಧನೆ ಮಾಡಿ ಮೋಹಿತ್ ಶರ್ಮಾಗೆ ವಿಕೆಟ್ ಒಪ್ಪಿಸಿದ ಡುಪ್ಲೆಸಿಸ್

* ಮೋಹಿತ್ ಶರ್ಮಾ ಮಿಂಚಿನ ಕ್ಷೇತ್ರರಕ್ಷಣೆಗೆ ಬಲಿಯಾಗಿ ಫೆವಿಲಿಯನ್ ಸೇರಿದ ಡೆವಿಲಿಯರ್ಸ್

* 20 ಓವರ್ಸ್ ನಂತರ ದಕ್ಷಿಣ ಆಫ್ರಿಕಾ 92 ಕ್ಕೆ 2

* ಮೋಹಿತ್ ಶರ್ಮಾಗೆ ವಿಕೆಟ ನೀಡಿದ ಹಶೀಮ್ ಆಮ್ಲಾ

* 10 ಓವರ್ಸ್ ನಂತರ ದಕ್ಷಿಣ ಆಫ್ರಿಕಾ 41 ಕ್ಕೆ 2

*7 ರನ್ ಗಳಿಸಿ ಶಮಿಗೆ ವಿಕೆಟ್ ಒಪ್ಪಿಸಿದ ಡಿ ಕಾಕ್

* ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ

* 50 ಓವರ್ ಮುಕ್ತಾಯಕ್ಕೆ 7 ವಿಕೆಟ್ ಕಳೆದುಕೊಂಡು 307 ರನ್ ಗಳಿಸಿದ ಭಾರತ

* ವಿಶ್ವಕಪ್: ಸ್ಫೋಟಕ 79 ರನ್ ಗಳಿಸಿ ಸ್ಟೇಯ್ನ್ ಗೆ ವಿಕೆಟ್ ಒಪ್ಪಿಸಿದ ರಹಾನೆ

* 6 ರನ್ ಗಳಿಸಿ ಸುರೇಶ್ ರೈನಾ ಔಟ್, ಭಾರತ 269ಕ್ಕೆ 4

* 137 ರನ್ ಗಳಿಸಿ ಪರ್ನೆಲ್ ಗೆ ವಿಕೆಟ್ ಒಪ್ಪಿಸಿದ ಶಿಖರ್ ಧವನ್

* 43 ಓವರ್ಸ್ ಭಾರತ 259 ಕ್ಕೆ 2 , ಧವನ್ 137, ರಹಾನೆ 69

* ಅರ್ಧಶತಕ ಸಂಭ್ರಮದಲ್ಲಿ ಮಿಂದೆದ್ದ ಅಂಜಿಕ್ಯ ರಹಾನೆ

* ದಕ್ಷಿಣ ಆಫ್ರಿಕಾ ವಿರುದ್ಧ 122 ಚೆಂಡುಗಳಲ್ಲಿ ಶತಕ ಸಿಡಿಸಿದ ಶಿಖರ್ ಧವನ್

* 32 ಓವರ್ಸ್ ನಂತರ ಭಾರತ 157 ಕ್ಕೆ 2, ಶಿಖರ್ ಧವನ್ 95, ರಹಾನೆ 11

* 46 ರನ್ ಗಳಿಸಿ ಇಮ್ರಾನ್ ತಹೀರ್ ಗೆ ವಿಕೆಟ್ ಒಪ್ಪಿಸಿದ ಕೊಹ್ಲಿ

* 25 ಓವರ್ಸ್ ನಂತರ ಭಾರತ 127 ಕ್ಕೆ 1, ಶಿಖರ್ ಧವನ್ 87, ವಿರಾಟ್ ಕೊಹ್ಲಿ 37

* ಒಂದನೇ ವಿಕೆಟ್ ಗೆ 100 ರನ್ ಜತೆಯಾಟ ನೀಡಿದ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ

* ಬೌಂಡರಿ ಮೂಲಕ ಅರ್ಧಶತಕ ಗಳಿಸಿದ ಶಿಖರ್ ಧವನ್, ಭಾರತ 77 ಕ್ಕೆ 1

* 15 ಓವರ್ಸ್ ನಂತರ ಭಾರತ 61 ಕ್ಕೆ 1, ಶಿಖರ್ ಧವನ್ 40, ವಿರಾಟ್ ಕೊಹ್ಲಿ21

* 10 ಓವರ್ಸ್ ನಂತರ ಭಾರತ 38 ಕ್ಕೆ 1, ಶಿಖರ್ ಧವನ್ 28, ವಿರಾಟ್ ಕೊಹ್ಲಿ 10

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X