ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ : ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ

By Mahesh

ಅಡಿಲೇಡ್, ಫೆ.15: ಕ್ರಿಕೆಟ್ ಲೋಕದ ಬದ್ಧವೈರಿಗಳ ಕಾದಾಟಕ್ಕೆ ಓವಲ್ ಕ್ರೀಡಾಂಗಣ ಸಾಕ್ಷಿಯಾಯಿತು.ಟೀಂ ಇಂಡಿಯಾ ಐಸಿಸಿ ವಿಶ್ವಕಪ್ ಟೂರ್ನಿ 2015ರ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಿತು. ವಿಶ್ವಕಪ್ ನಲ್ಲಿ ಆರನೇ ಬಾರಿ ಭಾರತವನ್ನು ಸದೆಬಡಿಯಲು ಪಾಕಿಸ್ತಾನ ಪಣ ತೊಟ್ಟಿದ್ದು ಫಲ ನೀಡಲಿಲ್ಲ.

ಟಾಸ್ ಗೆದ್ದ ಟೀಂ ಇಂಡಿಯಾ ಎಂಎಸ್ ಧೋನಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ಫಲ ನೀಡಿತು. ಬೃಹತ್ ಮೊತ್ತ ದಾಖಲಿಸಿದ ಭಾರತ, ಪಾಕ್ ವಿರುದ್ಧ ಮತ್ತೊಮ್ಮೆ ತನ್ನ ಜಯದ ನಾಗಾಲೋಟ ಮುಂದುವರೆಸಿದೆ.

1992 ರಿಂದ ಇಲ್ಲಿ ತನಕದ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ಹಾಗೂ ಪಾಕಿಸ್ತಾನ 5 ಬಾರಿ ಪರಸ್ಪರ ಸಂಧಿಸಿದ್ದು, ಐದು ಬಾರಿ ಪಾಕಿಸ್ತಾನ ಸೋಲಿನ ಕಹಿ ಅನುಭವಿಸಿದೆ. ಆಸ್ಟ್ರೇಲಿಯಾದ ಸಿಡ್ನಿ, ಭಾರತದ ಬೆಂಗಳೂರು, ಇಂಗ್ಲೆಂಡಿನ ಮ್ಯಾಂಚೆಸ್ಟರ್, ದಕ್ಷಿಣ ಆಫ್ರಿಕಾದ ಸೆಂಚೂರಿಯನ್ ಹಾಗೂ 2011ರ ಸೆಮಿಫೈನಲ್ ಹಂತದಲ್ಲಿ ಪಾಕಿಸ್ತಾನವನ್ನು ಸೋಲಿಸಿರುವ ಭಾರತ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿದೆ.

Virat Kohli

ಮೂರು ಬಾರಿ ಸಚಿನ್ ತೆಂಡೂಲ್ಕರ್ ಪಂದ್ಯ ಶ್ರೇಷ್ಠ ಎನಿಸಿದ್ದರೆ, ನವಜ್ಯೋತ್ ಸಿಧು ಹಾಗೂ ವೆಂಕಟೇಶ್ ಪ್ರಸಾದ್ ಒಮ್ಮೆ ಪಂದ್ಯ ಪುರುಷೋತ್ತಮರಾಗಿದ್ದರು. [ಸಚಿನ್ ಕಂಡ ಕನಸು ಈಡೇರಿಸಿದ ಕೊಹ್ಲಿ]

ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ</a> | <a class=ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ" title="ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ" />ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ

ಪಾಕಿಸ್ತಾನ ರನ್ ಚೇಸ್:
*
ವಿಶ್ವಕಪ್ ಟೂರ್ನಿಗಳಲ್ಲಿ ಆರನೇ ಬಾರಿಗೆ ಪಾಕ್ ವಿರುದ್ಧ ಜಯ ದಾಖಲಿಸಿದ ಭಾರತ.
* ಮಹಮ್ಮದ್ ಶಮಿ 9-1-36-4 ಉತ್ತಮ ಬೌಲಿಂಗ್.
* ಪಾಕಿಸ್ತಾನ ತಂಡ 47 ಓವರ್ ಗಳಲ್ಲಿ 224ಸ್ಕೋರಿಗೆ ಆಲೌಟ್. ಪಾಕ್ ವಿರುದ್ಧ ಭಾರತಕ್ಕೆ 76 ರನ್ ಗಳ ಜಯ.
* 76 ರನ್ ಗಳಿಸಿ ನಾಯಕ ಮಿಸ್ಬಾ ಉಲ್ ಹಕ್ ಔಟ್, ಶಮಿಗೆ ನಾಲ್ಕನೇ ವಿಕೆಟ್.

Virat Kohli

*
45 ಓವರ್ಸ್ ನಂತರ ಮಿಸ್ಬಾ 76, ಸೊಹೈಲ್ ಖಾನ್ 4, 220/8.
* 43 ಓವರ್ಸ್ ಅಂತ್ಯಕ್ಕೆ ಭಾರತ 245/2, ಪಾಕಿಸ್ತಾನ 203/8.
* 42 ಓವರ್ಸ್ 201/7 ಸ್ಕೋರ್. ಯಾಸೀರ್ ಶಾ ವಿಕೆಟ್ ಪತನ.
MIsbah

* 40 ಓವರ್ ಅಂತ್ಯಕ್ಕೆ ಪಾಕಿಸ್ತಾನ 194/7, ಭಾರತ ಇದೇ ಹೊತ್ತಲ್ಲಿ 217/2.
* ಪಾಕಿಸ್ತಾನ ನಾಯಕ ಮಿಸ್ಬಾ ಉಲ್ ಹಕ್ 50ರನ್ (4 ಬೌಂಡರಿ, 1 ಸಿಕ್ಸರ್).
*
35 ಓವರ್ಸ್ 154/7 ಸ್ಕೋರ್ ಮಾಡಿರುವ ಪಾಕಿಸ್ತಾನಕ್ಕೆ ನಾಯಕ ಮಿಸ್ಬಾ ಆಸರೆ.

* ಉಮೇಶ್ ಯಾದವ್ ರಂತೆ ಮಹಮ್ಮದ್ ಶಮಿ ಕೂಡಾ ಒಂದೇ ಓವರ್ ನಲ್ಲಿ 2 ವಿಕೆಟ್ (ವಹಾಬ್,ಅಫ್ರಿದಿ) ಕಿತ್ತಿದ್ದಾರೆ.
*
ಪ್ರಾಯಶಃ ಭಾರತದ ವಿರುದ್ಧ ವಿಶ್ವಕಪ್ ನಲ್ಲಿ ಕೊನೆ ಪಂದ್ಯವಾಡುತ್ತಿರುವ ಬೂಮ್ ಬೂಮ್ ಅಫ್ರಿದಿ 23ರನ್ ಗಳಿಸಿ ಔಟ್.
*
31 ಓವರ್ಸ್ ನಲ್ಲಿ ಪಾಕಿಸ್ತಾನ 134/5. 114 ಎಸೆತಗಳಲ್ಲಿ 167 ರನ್ ಬೇಕು.
* ಟೀಂ ಇಂಡಿಯಾ ನೀಲಿ ಜರ್ಸಿ ಹಿಡಿದು ಪೋಸ್ ಕೊಟ್ಟಿರುವ ಟೆನಿಸ್ ದಿಗ್ಗಜ ರೋಜರ್ ಫೆಡರರ್.

* ಪಾಕಿಸ್ತಾನ 25 ಓವರ್ಸ್ 105/5 ಪರದಾಡುತ್ತಿದೆ.
* ಜಡೇಜ ಬೌಲಿಂಗ್ ನಲ್ಲಿ ಮತ್ತೊಂದು ವಿಕೆಟ್ ಉಮರ್ ಅಕ್ಮಲ್ ಪೆವಿಲಿಯನ್ ಗೆ
* ವೇಗಿ ಉಮೇಶ್ ಯಾದವ್ ಗೆ ಒಂದೇ ಓವರ್ ನಲ್ಲಿ 2 ವಿಕೆಟ್
*
ಶೆಹ್ಜಾದ್ 47 ರನ್(72ಎ, 5 ಬೌಂಡರಿ) ಗಳಿಸಿ ಔಟ್. ನಂತರ ಬಂದ ಶೋಯಬ್ ಮಕ್ಸೂದ್ ಮೊದಲ ಎಸೆತವೇ ಔಟ್.
*
ಮಹಮ್ಮದ್ ಶೆಹ್ಜಾದ್ ಉತ್ತಮ ಆಟ, 23 ಓವರ್ಸ್ 101/2.
* ಹಾರಿಸ್ ಸೋಹೈಲ್ ವಿಕೆಟ್ ಕಿತ್ತ ಆರ್ ಆಶ್ವಿನ್. 36 ರನ್ ಗಳಿಸಿ ಸೊಹೈಲ್ ಔಟ್
* 5 ಓವರ್ ಗಳಲ್ಲಿ 29/1, ಹಾರಿಸ್ ಸೊಹೈಲ್ ಉತ್ತಮ ಆಟ.
* 4 ಓವರ್ಸ್ ನಂತರ ಸ್ಕೋರ್ 14/1, ಶಮಿಗೆ ಮೊದಲ ವಿಕೆಟ್
* ಶೆಹ್ಜಾದ್ ಹಾಗೂ ಯೂನಸ್ ಖಾನ್ ಆರಂಭಿಕ ಆಟಗಾರರು
ಭಾರತದ ಇನ್ನಿಂಗ್ಸ್:

* ವಿಶ್ವಕಪ್ ನಲ್ಲಿ ಭಾರತ ವಿರುದ್ಧ ಮೊದಲ ಜಯ ದಾಖಲಿಸಲು ಪಾಕಿಸ್ತಾನಕ್ಕೆ 301 ರನ್ ಟಾರ್ಗೆಟ್.
* 50ನೇ ಓವರ್ ನ ಮೊದಲ ಎಸೆತದಲ್ಲಿ ಧೋನಿ, ಎರಡನೇ ಎಸೆತದಲ್ಲಿ ರಹಾನೆ ಔಟ್
* 49 ಓವರ್ಸ್ ಅಂತ್ಯಕ್ಕೆ 296/5. ರವೀಂದ್ರ ಜಡೇಜ ಔಟ್
* ಕೇವಲ 56 ಎಸೆತ ಎದುರಿಸಿ 5 ಬೌಂಡರಿ, 3 ಸಿಕ್ಸರ್ ಇದ್ದ 74 ರನ್ ಗಳಿಸಿ ಸುರೇಶ್ ರೈನಾ ಔಟ್
* 44.1 ಓವರ್ಸ್ ನಲ್ಲಿ ಸ್ಕೋರ್ 263/2 ಆಗಿದ್ದಾಗ ರೈನಾ- ಕೊಹ್ಗ್ಲಿ ನಡುವೆ 87 ಎಸೆತಗಳಲ್ಲಿ 100 ರನ್ ಜೊತೆಯಾಟ.
Suresh Raina

* ವಿಶ್ವಕಪ್ 2015 ಟೂರ್ನಿಯ ಪ್ರಥಮ ಶತಕ ಬಾರಿಸಿದ ವಿರಾಟ್ ಕೊಹ್ಲಿ, 119 ಎಸೆತಗಳಲ್ಲಿ 100 ರನ್ ಗಳಿಕೆ.
* 40 ಓವರ್ಸ್ ಅಂತ್ಯಕ್ಕೆ 217/2. ಕೊಹ್ಲಿ 94, ರೈನಾ 30.

* 37 ಓವರ್ ಅಂತ್ಯಕ್ಕೆ 200/2 ರನ್ ರೇಟ್ 5.49, ರೈನಾ 20, ಕೊಹ್ಲಿ 86.
* 83 ರನ್ ಗಳಿಸಿರುವ ವಿರಾಟ್ ಕೊಹ್ಲಿ, ಸುರೇಶ್ ರೈನಾ 18 ರನ್ ಗಳಿಸಿ ಆಡುತ್ತಿದ್ದಾರೆ.
* 35 ಓವರ್ಸ್ 192/2, ಪ್ರೊಜೆಕ್ಷನ್ ಸ್ಕೋರ್ 312 ಹೊಡೆಯಬಹುದು.
* ಶಿಖರ್ ಧವನ್ ಪೆವಿಲಿಯನ್ ಗೆ ತೆರಳುವಾಗ ಅಭಿಮಾನಿಗಳಿಂದ ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದರು.

* 73 ರನ್ (75ಎ, 7x4, 1x6) ಗಳಿಸಿದ್ದ ಶಿಖರ್ ಧವನ್ ಅನಗತ್ಯವಾಗಿ ರನೌಟ್
* 30 ಓವರ್ ಗಳಲ್ಲಿ ಟೀಂ ಇಂಡಿಯಾ 165/1, ಧವನ್ 73, ಕೊಹ್ಲಿ 72
* 23 ಓವರ್ಸ್ 122/1, ಧವನ್ 55, ಕೊಹ್ಲಿ 52
* 20.2 ಓವರ್ ಗಳಲ್ಲಿ ನೂರು ರನ್ ದಾಟಿತು.
* 20 ಓವರ್ ಗಳಲ್ಲಿ ಟೀಂ ಇಂಡಿಯಾ ಸ್ಕೋರ್ 98/1, ಶಿಖರ್ ಧವನ್ 47, ಕೊಹ್ಲಿ 34
* 15 ಓವರ್ ಗಳಲ್ಲಿ 71/1, ಧವನ್ 33, ಕೊಹ್ಲಿ 21
* ಮೊದಲ 10 ಓವರ್ ಗಳಲ್ಲಿ ಟೀಂ ಇಂಡಿಯಾ 42/1, ಕ್ರೀಸ್ ನಲ್ಲಿ ಧವನ್ 21 , ಕೊಹ್ಲಿ 2
India vs Pakistan Adelaide

* 15 ರನ್ ಗಳಿಸಿ ರೋಹಿತ್ ಶರ್ಮ ಔಟ್.
* ಸೊಹೇಲ್ ಖಾನ್ ಎಸೆತದಲ್ಲಿ ಭಾರಿ ಹೊಡೆತಕ್ಕೆ ಯತ್ನಿಸಿ ಮಿಸ್ಬಾ ಉಲ್ ಹಕ್ ಗೆ ಕ್ಯಾಚಿತ್ತ ರೋಹಿತ್
* 5 ಓವರ್ ಗಳಲ್ಲಿ 21/0.6.3 ಓವರ್ ಆಗಿದ್ದಾಗ ಪಂದ್ಯದ ಮೊದಲ ಸಿಕ್ಸ್ ಬಾರಿಸಿದ ಶಿಖರ್ ಧವನ್
* 4 ಓವರ್ ಗಳಲ್ಲಿ 17/0, 4.1 ಆಗಿದ್ದಾಗ ಇರ್ಫಾನ್ ಎಸೆತ ಬೌಂಡರಿಗಟ್ಟಿದ ರೋಹಿತ್.
* 3.4 ಓವರ್ ಆಗಿದ್ದಾಗ ಪಂದ್ಯದ ಮೊದಲ ಬೌಂಡರಿ ಬಾರಿಸಿದ ಶಿಖರ್ ಧವನ್.
* ಎರಡನೇ ಓವರ್ : ಸೊಹೈಲ್ ಖಾನ್ ಎಸೆತ ಓವರ್ ಅಂತ್ಯಕ್ಕೆ ..ಭಾರತ 5/0,
* ಮೊದಲ ಓವರ್: ಮಹಮ್ಮದ್ ಇರ್ಫಾನ್ ಎಸೆತ, ಟೀಂ ಇಂಡಿಯಾ 2/0, ರೋಹಿತ್ 1, ಶಿಖರ್ ಧವನ್ 1,
* ಟಾಸ್ ಗೆದ್ದ ಟೀಂ ಇಂಡಿಯಾ ಎಂಎಸ್ ಧೋನಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಭಾರತ: ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ಅಜಿಂಕ್ಯ ರಹಾನೆ, ಶಿಖರ್ ಧವನ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ರೋಹಿತ್ ಶರ್ಮ, ರವೀಂದ್ರ ಜಡೇಜ, ಆರ್ ಅಶ್ವಿನ್, ಮಹಮ್ಮದ್ ಶಮಿ, ಉಮೇಶ್ ಯಾದವ್, ಮೋಹಿತ್ ಶರ್ಮ. [ಟೀಂ ಇಂಡಿಯಾ ಬಗ್ಗೆ ಪೂರ್ಣ ಗೈಡ್]


ಪಾಕಿಸ್ತಾನ:ಯೂನಿಸ್ ಖಾನ್, ಅಹ್ಮದ್ ಶೆಹಜಾದ್, ಹಾರಿಸ್ ಸೊಹೈಲ್, ಮಿಸ್ಬಾ ಉಲ್ ಹಕ್ (ನಾಯಕ), ಉಮರ್ ಅಕ್ಮಲ್(ವಿಕೆಟ್ ಕೀಪರ್), ಶೊಯೀಬ್ ಮಕ್ಸೂದ್, ಶಹೀದ್ ಅಫ್ರಿದಿ, ವಹಬ್ ರಿಯಾಜ್, ಯಾಸಿರ್ ಶಾ, ಸೊಹೈಲ್ ಖಾನ್, ಮಹಮ್ಮದ್ ಇರ್ಫಾನ್.

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X