ಬೆಂಗಳೂರು, ಜ.21: ಐಸಿಸಿ ವಿಶ್ವಕಪ್ 2015 ಆರಂಭಕ್ಕೂ ಮೊದಲು ಈ ಹಿಂದಿನ ವಿಶ್ವಕಪ್ ನ ಅಂಕಿ ಅಂಶಗಳನ್ನು ಕೆದಕಿ ಶತಕ ವೀರರ ಪಟ್ಟಿ ತಯಾರಿಸಿದರೆ ಮೊದಲಿಗೆ ಕಾಣಿಸುವ ಹೆಸರು ಕಪಿಲ್ ದೇವ್. ಮೊಟ್ಟ ಮೊದಲು ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪರ ಶತಕ ಬಾರಿಸಿದ್ದು ಕಪಿಲ್, ಅತಿ ಹೆಚ್ಚು ಶತಕ ಬಾರಿಸಿದ್ದು ಸಚಿನ್ ತೆಂಡೂಲ್ಕರ್.
ಸಚಿನ್ ಅವರು ವಿಶ್ವಕಪ್ ಟೂರ್ನಿಗಳಲ್ಲಿ 6 ಶತಕ ದಾಖಲಿಸಿದ್ದು, ಅದು ಭಾರತ ಅಷ್ಟೇ ಅಲ್ಲ ವಿಶ್ವದಾಖಲೆಯಾಗಿದೆ. ಮಾಜಿ ನಾಯಕ ಸೌರವ್ ಗಂಗೂಲಿ 4 ಶತಕ ಬಾರಿಸಿದ್ದಾರೆ. [ಟೀಂ ಇಂಡಿಯಾ ಬಗ್ಗೆ ಪೂರ್ಣ ಗೈಡ್]
ಕಪಿಲ್ ಸಾಧನೆ: ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ನಲ್ಲಿ ಕಪಿಲ್ ದೇವ್ ಶತಕ ಬಾರಿಸಿದ್ದಷ್ಟೇ ಅಲ್ಲ, ಭರ್ಜರಿ ಶತಕ ಬಾರಿಸುವವರಿಗೆ ಸ್ಪೂರ್ತಿ ತಂದರು. ಜಿಂಬಾಬ್ವೆ ವಿರುದ್ಧ 1983ರಲ್ಲಿ ಬಾರಿಸಿದ 175 ನಾಟೌಟ್ ವಿಶ್ವಕಪ್ ನ ಅದ್ಭುತ ಪ್ರದರ್ಶನಗಳಲ್ಲಿ ಒಂದೆನಿಸಿದೆ. ಅದೇ ಟೂರ್ನಿಯಲ್ಲಿ ಲಾರ್ಡ್ಸ್ ನಲ್ಲಿ ವೆಸ್ಟ್ ಇಂಡೀಸ್ ಸೋಲಿಸಿ ಕಪಿಲ್ ಡೆವಿಲ್ಸ್ ತಂಡ ಮೊದಲ ಬಾರಿಗೆ ವಿಶ್ವ ಕಪ್ ಎತ್ತಿದ್ದು ಈಗ ಇತಿಹಾಸ. [ವಿಶ್ವಕಪ್ 2015:14 ತಂಡಗಳ ವಿವರ]
ಇದಕ್ಕೂ ಮುನ್ನ ಮೊದಲೆರಡು ವಿಶ್ವಕಪ್ 1975, 1979 ಟೂರ್ನಿಯಲ್ಲಿ ಟೀಂ ಇಂಡಿಯಾ ಆಟಗಾರರು ಶತಕ ಗಳಿಸಲು ವಿಫಲರಾಗಿದ್ದರು. 1999(ಇಂಗ್ಲೆಂಡ್) ಹಾಗೂ 2011(ಭಾರತ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ) ಟೂರ್ನಿಗಳಲ್ಲಿ ತಲಾ 5 ಶತಕಗಳನ್ನು ಭಾರತದ ಆಟಗಾರರು ಗಳಿಸಿದ್ದರು. []
ಇದುವರೆವಿಗೂ 20 ಬಾರಿ ಭಾರತೀಯ ಕ್ರಿಕೆಟರ್ ಗಳು 100ರನ್ ಗಡಿ ದಾಟಿದ್ದಾರೆ. ವಿಶ್ವಕಪ್ ಶತಕವೀರರ ಪಟ್ಟಿ ಇಂತಿದೆ:
1. 175* - ಕಪಿಲ್ ದೇವ್ (Vs ಜಿಂಬಾಬ್ವೆ, 1983)
2. 103* - ಸುನಿಲ್ ಗವಾಸ್ಕರ್ (Vs ನ್ಯೂಜಿಲೆಂಡ್, 1987)
3. 127*- ಸಚಿನ್ ತೆಂಡೂಲ್ಕರ್ (Vs ಕೀನ್ಯಾ, 1996)
4. 137- ಸಚಿನ್ ತೆಂಡೂಲ್ಕರ್ (Vs ಶ್ರೀಲಂಕಾ, 1996)
5. 106- ವಿನೋದ್ ಕಾಂಬ್ಳಿ (Vs ಜಿಂಬಾಬ್ವೆ, 1996)
6. 104*- ರಾಹುಲ್ ದ್ರಾವಿಡ್ (Vs ಕೀನ್ಯಾ, 1999)
7. 140*- ತೆಂಡೂಲ್ಕರ್ (Vs ಕೀನ್ಯಾ, 1999)
8. 183- ಸೌರವ್ ಗಂಗೂಲಿ (Vs ಶ್ರೀಲಂಕಾ, 1999)
9. 145- ರಾಹುಲ್ ದ್ರಾವಿಡ್ (Vs ಶ್ರೀಲಂಕಾ, 1999)
10. 100*- ಅಜಯ್ ಜಡೇಜ (Vs ಆಸ್ಟ್ರೇಲಿಯಾ, 1999)
11. 152- ತೆಂಡೂಲ್ಕರ್ (vs ನಮೀಬಿಯಾ, 2003)
12. 112* - ಗಂಗೂಲಿ (Vs ನಮೀಬಿಯಾ, 2003)
13. 107*- ಗಂಗೂಲಿ (Vs ಕೀನ್ಯಾ, 2003)
14. 111*- ಗಂಗೂಲಿ (Vs ಕೀನ್ಯಾ, 2003)
15. 114- ವೀರೆಂದರ್ ಸೆಹ್ವಾಗ್ (Vs ಬರ್ಮುಡಾ, 2007)
16. 175- ಸೆಹ್ವಾಗ್ (Vs ಬಾಂಗ್ಲಾದೇಶ, 2011)
17. 100* ವಿರಾಟ್ ಕೊಹ್ಲಿ (Vs ಬಾಂಗ್ಲಾದೇಶ, 2011)
18. 120- ತೆಂಡೂಲ್ಕರ್ (Vs ಇಂಗ್ಲೆಂಡ್, 2011)
19. 111- ತೆಂಡೂಲ್ಕರ್ (Vs ದಕ್ಷಿಣ ಆಫ್ರಿಕಾ, 2011)
20. 113- ಯುವರಾಜ್ ಸಿಂಗ್ (Vs ವೆಸ್ಟ್ ಇಂಡೀಸ್, 2011)
ವಿಶ್ವಕಪ್ ನಲ್ಲಿ ಹೆಚ್ಚು ಶತಕ ಗಳಿಸಿದ ಭಾರತೀಯರು
* 6- ಸಚಿನ್ ತೆಂಡೂಲ್ಕರ್
* 4- ಸೌರವ್ ಗಂಗೂಲಿ
* 2- ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್
* 1- ಕಪಿಲ್, ಗವಾಸ್ಕರ್, ಕಾಂಬ್ಳಿ, ಅಜಯ್ ಜಡೇಜ, ಕೊಹ್ಲಿ, ಯುವರಾಜ್