ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ವಿರುದ್ಧ ಸರಣಿಗೆ ಕೊಹ್ಲಿ ಕ್ಯಾಪ್ಟನ್, ಧೋನಿ ಇಲ್ಲ

By Mahesh

ಹೈದರಾಬಾದ್, ಅ.21: ವೆಸ್ಟ್ ಇಂಡೀಸ್ ವಿರುದ್ಧ ಶತಕ ಬಾರಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಲಕ್ ತಿರುಗಿದೆ. ವಿಂಡೀಸ್ ಪ್ರವಾಸ ಮೊಟಕುಗೊಂಡ ಬೆನ್ನಲ್ಲೇ ಶ್ರೀಲಂಕಾ ವಿರುದ್ಧ ಸರಣಿಯನ್ನು ಬಿಸಿಸಿಐ ಗೊತ್ತು ಮಾಡಿದೆ. ಪ್ರವಾಸಿ ಲಂಕನ್ನರ ವಿರುದ್ಧ ಆಡಲಿರುವ ಟೀಂ ಇಂಡಿಯಾಕ್ಕೆ ವಿರಾಟ್ ಕೊಹ್ಲಿ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಶ್ರೀಲಂಕಾ ವಿರುದ್ಧ ಪ್ರವಾಸಕ್ಕೆ ಬಿಸಿಸಿಐ ಆಯ್ಕೆ ಸಮಿತಿ ಮಂಗಳವಾರ ಭಾರತ ತಂಡವನ್ನು ಆಯ್ಕೆ ಮಾಡಿದೆ. ನಾಯಕ ಎಂಎಸ್ ಧೋನಿ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಸ್ಥಾನವನ್ನು ವಿಕೆಟ್ ಕೀಪರ್ ಆಗಿ ವೃದ್ಧಿಮಾನ್ ಸಹಾ ತುಂಬಲಿದ್ದಾರೆ. ವೇಗಿ ಭುವನೇಶ್ವರ್ ಕುಮಾರ್ ಕೂಡಾ ವಿಶ್ರಾಂತಿ ಬಯಸಿದ್ದು ಅವರ ಜಾಗದಲ್ಲಿ ವರುಣ್ ಅರೋನ್ ತಂಡಕ್ಕೆ ಮರಳಿದ್ದಾರೆ.

Virat Kohli named India captain for Sri Lanka ODIs; MS Dhoni rested

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ, ಟಿ20 ಹಾಗೂ ಟೆಸ್ಟ್ ಪಂದ್ಯಗಳು ರದ್ದುಗೊಂಡ ಹಿನ್ನೆಲೆಯಲ್ಲಿ ಶ್ರೀಲಂಕಾ ತಂಡಕ್ಕೆ ಬಿಸಿಸಿಐ ಆಹ್ವಾನ ನೀಡಿದೆ. ವಿಂಡೀಸ್ ವಿರುದ್ಧ ಪಂದ್ಯಗಳನ್ನಾಡದ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಅವರು ತಂಡಕ್ಕೆ ಮರಳಿದ್ದಾರೆ. ವಿಂಡೀಸ್ ವಿರುದ್ಧ ಒಂದೂ ಪಂದ್ಯ ಆಡದ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ತಂಡದಿಂದ ಕೈಬಿಡಲಾಗಿದೆ. [ಯುದ್ಧಕ್ಕೆ ಮೊದಲೇ ಶಸ್ತ್ರತ್ಯಾಗ, ವಿಂಡೀಸ್ ಮನೆಗೆ]

ಧೋನಿಗ್ಯಾಕೆ ವಿಶ್ರಾಂತಿ?: ಸತತ ಕ್ರಿಕೆಟ್ ನಿಂದ ಬಳಲುತ್ತಿರುವುದರಿಂದ ವೈಯಕ್ತಿಕ ಕಾರಣಗಳಿಂದ ಶ್ರೀಲಂಕಾ ಸರಣಿಯಿಂದ ಹೊರಗುಳಿಯಲು ಧೋನಿ ಅವರು ಬಯಸಿದ್ದಾರೆ ಇದಕ್ಕೆ ಬಿಸಿಸಿಐ ಅನುಮತಿ ನೀಡಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಸಂದೀಪ್ ಪಾಟೀಲ್ ಹೇಳಿದ್ದಾರೆ. ಧೋನಿ ಅವರು ಸದ್ಯ ಚೆನ್ನೈಯಿನ್ ಫುಟ್ಬಾಲ್ ಕ್ಲಬ್ ಮಾಲೀಕರಾಗಿದ್ದು, ಫುಟ್ಬಾಲ್ ಲೀಗ್ ನಲ್ಲಿ ಸಕತ್ ಬ್ಯುಸಿಯಾಗಿದ್ದಾರೆ. [ಯುವಿ, ವೀರು ವಿಶ್ವಕಪ್ ಗೆ ಅನುಮಾನ]

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ, ಟಿ20 ಹಾಗೂ ಟೆಸ್ಟ್ ಪಂದ್ಯಗಳು ರದ್ದುಗೊಂಡ ಹಿನ್ನೆಲೆಯಲ್ಲಿ ಶ್ರೀಲಂಕಾ ತಂಡಕ್ಕೆ ಬಿಸಿಸಿಐ ಆಹ್ವಾನ ನೀಡಿದೆ. ವಿಂಡೀಸ್ ವಿರುದ್ಧ ಪಂದ್ಯಗಳನ್ನಾಡದ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಅವರು ತಂಡಕ್ಕೆ ಮರಳಿದ್ದಾರೆ. ವಿಂಡೀಸ್ ವಿರುದ್ಧ ಒಂದೂ ಪಂದ್ಯ ಆಡದ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ತಂಡದಿಂದ ಕೈಬಿಡಲಾಗಿದೆ. [ಗಂಗೂಲಿ ಜೊತೆ ಧೋನಿ ಚೆಂಡಾಟ]

ಮೂರು ಏಕದಿನ ಪಂದ್ಯಗಳಿಗೆ ಭಾರತ ತಂಡ: ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಅಜಿಂಕ್ಯ ರಹಾನೆ, ಸುರೇಶ್ ರೈನಾ, ಅಂಬಟಿ ರಾಯುಡು, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜ, ಮಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮ, ಅಮಿತ್ ಮಿಶ್ರಾ, ಮುರಳಿ ವಿಜಯ್, ವರುಣ್ ಅರೋನ್, ಅಕ್ಷರ್ ಪಟೇಲ್

ಅಭ್ಯಾಸ ಪಂದ್ಯಕ್ಕೆ ಇಂಡಿಯಾ ಎ ತಂಡ : (ಅಕ್ಟೋಬರ್ 30ರಂದು ಬ್ರೆಬೋರ್ನ್ ಸ್ಟೇಡಿಯಂ, ಮುಂಬೈ)
ಮನೋಜ್ ತಿವಾರಿ(ನಾಯಕ, ಉನ್ಮುಕ್ತ್ ಚಂದ್, ಮನನ್ ವೋರಾ, ಕರುಣ್ ನಾಯರ್, ರೋಹಿತ್ ಶರ್ಮ, ಕೇದಾರ್ ಜಾಧವ್, ಸಂಜು ಸ್ಯಾಮ್ಸನ್, ಪರ್ವೇಜ್ ರಸೂಲ್, ಕರಣ್ ಶರ್ಮ, ಸ್ಟುವರ್ಟ್ ಬಿನ್ನಿ, ಧವಳ್ ಕುಲಕರ್ಣಿ, ಜಸ್ಪ್ರೀತ್ ಬರುವಾ, ಮನೀಶ್ ಪಾಂಡೆ, ಕುಲದೀಪ್ ಯಾದವ್.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X