ವಿಜೇಂದರ್ ಬಾಕ್ಸಿಂಗ್ ಆಟ ನೋಡಲು ಪ್ರಧಾನಿ ಮೋದಿಗೆ ಆಹ್ವಾನ

Posted By:
Subscribe to Oneindia Kannada

ನವದೆಹಲಿ, ಜೂನ್ 06: ವೃತ್ತಿಪರ ಬಾಕ್ಸಿಂಗ್​ನಲ್ಲಿ ಸತತ 6 ಗೆಲುವು ಸಾಧಿಸಿರುವ ಭಾರತದ ಹೆಮ್ಮೆಯ ಬಾಕ್ಸರ್ ವಿಜೇಂದರ್ ಸಿಂಗ್ ಅವರಿಗೆ ಮಾಜಿ ಯೂರೋಪಿಯನ್ ಚಾಂಪಿಯನ್ ಕೆರಿ ಹೋಪ್ ಸವಾಲು ಹಾಕಿದ್ದಾರೆ. ಜುಲೈ 16ರಂದು ನವದೆಹಲಿಯಲ್ಲಿ ಡಬ್ಲ್ಯೂಬಿಒ ಏಷ್ಯಾ ಪ್ರಶಸ್ತಿ ಗೆಲ್ಲಲು ಹೋರಾಟ ನಡೆಸಲಿದ್ದಾರೆ. ಈ ಪಂದ್ಯವನ್ನು ನೋಡಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಆಹ್ವಾನ ನೀಡಲಾಗಿದೆ.

30 ವರ್ಷ ವಯಸ್ಸಿನ ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್​ ಕಣಕ್ಕೆ ಇಳಿದಾಗಿನಿಂದ ಸೋಲು ಕಂಡಿಲ್ಲ. ವಿಜೇಂದರ್ ಅವರು ಎಲ್ಲಾ 6 ಪಂದ್ಯಗಳನ್ನು ನಾಕೌಟ್ ಮೂಲಕ ಗೆಲುವು ಸಾಧಿಸಿದ್ದಾರೆ. ವಿಜೇಂದರ್ ಗೆ ಹೋಲಿಸಿದರೆ ಹೋಪ್ ಅವರು 30 ಪಂದ್ಯಗಳನ್ನು ಆಡಿದ್ದು, 23 ಪಂದ್ಯಗಳಲ್ಲಿ ಜಯ ಗಳಿಸಿದ್ದಾರೆ. ಇದರಲ್ಲಿ 2 ನಾಕೌಟ್ ಗೆಲುವು ಸೇರಿದೆ.[ವಿಜೇಂದರ್ ಸಿಂಗ್ ಗೆ ಸತತ 5ನೇ ನಾಕೌಟ್ ಗೆಲುವು]

Vijender Singh to face ex-Euro champ Kerry Hope in WBO title bout

ವೆಲ್ಶ್ ಮೂಲದ ಹೋಪ್ ಅವರು ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿ ಡಬ್ಲ್ಯೂಬಿಸಿ ಮಿಡ್ಲ್ ವೇಯ್ಟ್ ಚಾಂಪಿಯನ್ ಆಗಿದ್ದವರು ಈಗ ವಿಜೇಂದರ್ ವಿರುದ್ಧ ಸೆಣೆಸಲು ಸೂಪರ್ ಡಿವಿಜನ್ ಗೇರಿದ್ದಾರೆ.

ಭಾರತದಲ್ಲಿ ವಿಜೇಂದರ್ ಸೂಪರ್​ಸ್ಟಾರ್ ಇರಬಹುದು. ನನಗೆ ಆತ ಬರೀ ಬಾಕ್ಸರ್, ನಾನು 12 ವರ್ಷಗಳಿಂದ ಪ್ರೊ ಬಾಕ್ಸಿಂಗ್ ನಲ್ಲಿದ್ದೇನೆ. ಅನುಭವದ ಮೂಲಕ ಪ್ರೇಕ್ಷಕರ ನೆಚ್ಚಿನ ಬಾಕ್ಸರ್ ನನ್ನು ಸೋಲಿಸುವ ಆತ್ಮವಿಶ್ವಾಸವಿದೆ ಎಂದಿದ್ದಾರೆ.

ತ್ಯಾಗರಾಜ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಬಾಕ್ಸಿಂಗ್ ಆಟ ನೋಡಲು 1,000 ರು ನಿಂದ 15,000 ರು ತನಕ ಟಿಕೆಟ್ ನಿಗದಿ ಪಡಿಸಲಾಗಿದೆ. (ಪಿಟಿಐ)

English summary
Former European champion Kerry Hope was on Monday unveiled as Indian boxing star Vijender Singh's opponent for the eagerly-anticipated WBO Asia title bout to be held on July 16 in the national capital.
Please Wait while comments are loading...