20ರ ತರುಣಿ ಜತೆ ಬೋಲ್ಟ್ 30ನೇ ಬರ್ತ್ ಡೇ ಆಚರಣೆ

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೋ ಆಗಸ್ಟ್, 23: ಸತತ ಮೂರು ಬಾರಿ ಒಲಿಂಪಿಕ್ಸ್ ಚಿನ್ನ ಗೆದ್ದು ವಿಶಿಷ್ಟ ಸಾಧನೆ ಮಾಡಿರುವ 'ಜಮೈಕಾದ ಚಿರತೆ' ಉಸೇನ್ ಬೋಲ್ಟ್ ಇದೀಗ ಹೊಸ ವಿವಾದಕ್ಕೀಡಾಗಿದ್ದಾರೆ. ಮೈದಾನದಲ್ಲಿ ಚಿರತೆಯಂತೆ ಓಡಿ ಚಿನ್ನದ ಪದಕಗಳನ್ನು ಜಯಿಸಿದ ಈ ಚಿರತೆ ಈಗ ತನ್ನ ಹಾಸಿಗೆ ಪುರಾಣದ ಮೂಲಕ ಸುದ್ದಿಯಾಗಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ರಿಯೋ ಒಲಿಂಪಿಕ್ಸ್ ಗೆ ಭಾನುವಾರ ಅದ್ಧೂರಿ ತೆರೆ ಬಿದ್ದಿತ್ತು, ಅದೇ ದಿನ ಉಸೇನ್ ಬೋಲ್ಟ್ ತಮ್ಮ 30ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. [ಉಸೇನ್ ಬೋಲ್ಟ್ ಕೊರಳಿಗೆ ಮೂರನೇ ಚಿನ್ನ, ಜಮೈಕಾದ ಓಟ ಚೆನ್ನ]

Usain Bolt 'caught in bed with Brazilian student' in Rio

ಹುಟ್ಟುಹಬ್ಬ ದಿನದಂದು ಎಲ್ಲರು ಸಾಮಾನ್ಯವಾಗಿ ಕೇಕ್ ಕತ್ತರಿಸಿ ಆಚರಿಸಿಕೊಂಡರೆ, ಬೋಲ್ಟ್ ಮಾತ್ರ ತಮ್ಮ ಬರ್ತ್ ಡೇಯನ್ನು 20 ವರ್ಷದ ಬ್ರೆಜಿಲ್ ನ ಜೇಡಿ ಡ್ಯೂರ್ಟೆ ಎನ್ನುವ ವಿದ್ಯಾರ್ಥಿನಿ ಜೊತೆ ಹಾಸಿಗೆ ಹಂಚಿಕೊಂಡು ಹುಟ್ಟುಹಬ್ಬ ಸೆಲಿಬ್ರೇಟ್ ಮಾಡಿಕೊಂಡಿದ್ದಾರೆ.[ರಿಯೋ ಒಲಿಂಪಿಕ್ ಮಹಾಕೂಟಕ್ಕೆ ವರ್ಣರಂಜಿತ ವಿದಾಯ]

ಆ ಸೆಲಿಬ್ರೇಟ್ ಮಾಡಿರುವ ಹಸಿಬಿಸಿ ಫೋಟೋಗಳನ್ನು ಸ್ವತಃ ಜೇಡಿ ಡ್ಯೂರ್ಟೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾಳೆ. ಇದೀಗ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಮೂಲಕ ದೀರ್ಘಕಾಲದ ಗೆಳತಿ ಕಸೆ ಬೆನೆಟ್ ಗೆ ಬೋಲ್ಟ್ ವಂಚಿಸಿದ್ದಾರೆಯೇ ಉತ್ತರ ಬೋಲ್ಟ್ ಗೆ ಮಾತ್ರ ಗೊತ್ತು.


ಬೋಲ್ಟ್ ಜತೆ ಮಲಗಿದ್ದರ ಬಗ್ಗೆ ಟ್ವೀಟ್ ಮಾಡಿರುವ ಜೇಡಿ, ನಿನ್ನೆ ರಾತ್ರಿ ಬೋಲ್ಟ್ ಜತೆ ಹಾಸಿಗೆ ಹಂಚಿಕೊಂಡಿದ್ದು 'ನಾರ್ಮಲ್' ಆಗಿತ್ತು ಎಂದಿದ್ದಾರೆ.
English summary
Usain Bolt has been photographed in bed with a Brazilian student in Rio amid rumours he would be marrying his girlfriend Kasi Bennett after the Olympics.
Please Wait while comments are loading...