ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ನಿವೃತ್ತಿ : ಯಾರು ಏನು ಟ್ವೀಟ್ ಮಾಡಿದ್ರು?

By Mahesh

ಬೆಂಗಳೂರು, ಡಿ.30: ಒಂದು ಕಡೆ ಟೀಕಾಕಾರರ ಬಾಯಿ ಮುಚ್ಚಿಸಲು ವಿರಾಟ್ ಕೊಹ್ಲಿ ಬ್ಯಾಟ್ ಬೀಸಿದರೆ, ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ಗ್ಲೌಸ್ ಕಳಚಿ ಪಕ್ಕಕ್ಕಿಟ್ಟು ವಿಶ್ರಾಂತಿ ಬಯಸಿದ್ದಾರೆ. 'ಟೆಸ್ಟ್ ಕ್ರಿಕೆಟ್ ನಿಂದ ಧೋನಿ ನಿವೃತ್ತಿ' ಎಂಬ ಸುದ್ದಿ ಹೊಸ ವರ್ಷಾಚರಣೆ ಸಂಭ್ರಮಕ್ಕೂ ಮುನ್ನ ಧೋನಿ ಅಭಿಮಾನಿಗಳಿಗೆ ಶಾಕ್ ತಂದಿದೆ. ಅದರೆ, ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಅನೇಕ ಕ್ರಿಕೆಟ್ ಪ್ರೇಮಿಗಳು ಧೋನಿ ಸರಿಯಾದ ನಿರ್ಣಯ ಕೈಗೊಂಡಿದ್ದಾರೆ ಶುಭವಿದಾಯ ಎಂದಿದ್ದಾರೆ.

ಸಿಡ್ನಿ ಟೆಸ್ಟ್(ಜ.6) ಪಂದ್ಯಕ್ಕೂ ಮುನ್ನವೇ ಧೋನಿ ನಿವೃತ್ತಿ ಘೋಷಿಸಿದ್ದೇಕೆ? ಎಂಬ ಪ್ರಶ್ನೆಯೂ ಎದ್ದಿದೆ. 33 ವರ್ಷದ ಕ್ರಿಕೆಟರ್ ಧೋನಿ ಅವರು ವಿದೇಶದಲ್ಲಿ ಟೆಸ್ಟ್ ನಾಯಕನಾಗಿ ಹೆಚ್ಚಿನ ಸಾಧನೆ ಮಾಡಿಲ್ಲ. 31 ಪಂದ್ಯಗಳಲ್ಲಿ 15 ಸೋತು, 6 ಗೆದ್ದು ಮಿಕ್ಕಿದ್ದು ಡ್ರಾ ಮಾಡಿಕೊಂಡಿದ್ದಾರೆ. [ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಧೋನಿ]

ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತವನ್ನು ಅತಿ ಹೆಚ್ಚು ಪಂದ್ಯಗಳಲ್ಲಿ(60) ಮುನ್ನಡೆಸಿದ ನಾಯಕ, ಅತಿ ಹೆಚ್ಚು ಪಂದ್ಯವಾಡಿದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಎಂಬ ದಾಖಲೆಗಳು ಧೋನಿ ಹೆಸರಿನಲ್ಲಿ ಕೆಲ ಕಾಲ ಉಳಿಯುವುದಂತೂ ನಿಜ.

ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ನಲ್ಲಿ ಆಡಿದ ಮೂರನೇ ಟೆಸ್ಟ್‌ ಪಂದ್ಯ ಧೋನಿ ಟೆಸ್ಟ್‌ ಬದುಕಿನ ಕೊನೆಯ ಪಂದ್ಯವಾಗಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ 11 ಮತ್ತು ದ್ವಿತೀಯ ಇನ್ನಿಂಗ್ಸ್‌ನಲ್ಲಿ 24 ರನ್‌ ಗಳಿಸಿದ್ದರು. ಸಿಡ್ನಿ ಟೆಸ್ಟ್ ಪಂದ್ಯವನ್ನು ವಿರಾಟ್ ಕೊಹ್ಲಿ ಮುನ್ನಡೆಸಲಿದ್ದಾರೆ. [ಟೀಂ ಇಂಡಿಯಾ ಟೆಸ್ಟ್ ನಾಯಕರ ಪಟ್ಟಿ]

ಅದೇನೇ ಇರಲಿ, ಸದ್ಯಕ್ಕೆ ಧೋನಿ ಮತ್ತೊಮ್ಮೆ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗುತ್ತಿದ್ದು, ಧೋನಿ ನಿರ್ಣಯದ ಪರ -ವಿರೋಧ ಚರ್ಚೆಯ ಬಗ್ಗೆ ಇರುವ ಟ್ವೀಟ್ ಗಳ ಸಂಗ್ರಹ ಇಲ್ಲಿದೆ ನೋಡಿ, ಓದಿ ಆನಂದಿಸಿ...

ವಿದೇಶದಲ್ಲಿ ಭಾರತ ಕಳಪೆ ಸಾಧನೆ ಮುಳುವಾಯಿತು

ವಿದೇಶದಲ್ಲಿ ಭಾರತ ಕಳಪೆ ಸಾಧನೆ ಮುಳುವಾಯಿತು

90 ಟೆಸ್ಟ್ ಪಂದ್ಯವಾಡಿರುವ ಧೋನಿ 60 ಪಂದ್ಯಗಳಲ್ಲಿ ನಾಯಕರಾಗಿದ್ದು ವಿಶೇಷ. ಧೋನಿ ನಾಯಕತ್ವದಲ್ಲಿ 27 ಗೆಲುವು ಬಂದಿದ್ದರೂ ಬಹುತೇಕ ಎಲ್ಲವೂ ಭಾರತದಲ್ಲಿ ಸಾಧಿಸಿದ್ದಾಗಿದೆ. ವಿದೇಶದಲ್ಲಿ 31 ಪಂದ್ಯಗಳ ಪೈಕಿ 15 ಪಂದ್ಯ ಅವರ ಕ್ಯಾಪ್ಟನ್ಸಿಯಲ್ಲಿ ಭಾರತ ಸೋತಿದೆ.

ಧೋನಿ ನಿವೃತ್ತಿ ಘೋಷಣೆ ನಿರೀಕ್ಷಿತವಾಗಿತ್ತು

ಧೋನಿ ನಿವೃತ್ತಿ ಘೋಷಣೆ ನಿರೀಕ್ಷಿತವಾಗಿತ್ತು ಎಂದು ಕ್ರಿಕೆಟ್ ತಜ್ಞ ಪತ್ರಕರ್ತ ಅಯಾಜ್ ಮೆನನ್ ಅಭಿಪ್ರಾಯಪಟ್ಟಿದ್ದಾರೆ. ಧೋನಿ ನಾಯಕತ್ವದಲ್ಲಿ ನಂ.1 ಸ್ಥಾನ ಪಡೆದ ಟೀಂ ಇಂಡಿಯಾ ನಂತರ ಕುಸಿತ ಕಂಡಿದ್ದು ಏಕೆ ಎಂಬುದನ್ನು ವಿಮರ್ಶಿಸಬೇಕು.

ಧೋನಿ ರಿಟೈರ್ : ವೀರ್ ದಾಸ್ ಪ್ರತಿಕ್ರಿಯೆ

ಧೋನಿ ಬಗ್ಗೆ ಟ್ವಿಟ್ಟರ್ ನಲ್ಲಿ ಏನೇ ಕಾಮಿಡಿ ಮಾಡಿ, ಧೋನಿ ನಿಜಕ್ಕೂ ಗ್ರೇಟ್

ಧೋನಿ ಟೆಸ್ಟ್ ಪಂದ್ಯ ಆಡಿದ್ನಾ?

ಎಲ್ಲವನ್ನು 20-20 ಮಾದರಿಯಲ್ಲೇ ಆಡಿದ ಧೋನಿ ಟೆಸ್ಟ್ ಆಡಿದ ನೆನಪೇ ಇಲ್ಲ ಎಂದು ಜೀ ಸಮೂಹದ ಹರಿಣಿ ಟ್ವೀಟ್ ಮಾಡಿದ್ದಾರೆ.

ನೆಚ್ಚಿನ ನಾಯಕನ ಬಗ್ಗೆ ಸುರೇಶ್ ರೈನಾ ಟ್ವೀಟ್

ನೆಚ್ಚಿನ ನಾಯಕನ ಬಗ್ಗೆ ಸುರೇಶ್ ರೈನಾ ಟ್ವೀಟ್ ಮಾಡಿದ್ದು ಹೀಗೆ

ನಟ ರಾಹುಲ್ ಬೋಸ್ ಗೆ ಹೇಳಿದ್ದು ಹೀಗೆ

ನಾನು ಮೊದಲೇ ಹೇಳಿದ್ದೆ, ಈಗಲೂ ಅದನ್ನೇ ಹೇಳುತ್ತೇನೆ. ಟೆಸ್ಟ್ ಕ್ರಿಕೆಟ್ ಗೆ ನಾಯಕರಾಗಿ ಧೋನಿ ಸರಿಯಾದ ಆಯ್ಕೆಯಲ್ಲ, ಏಕದಿನ ಟಿ20 ಪಂದ್ಯಕ್ಕೆ ಧೋನಿಯೇ ಬೆಸ್ಟ್

ಹಳ್ಳಿಯ ಹೀರೋ ಟೆಸ್ಟ್ ತಂಡ ಮುನ್ನಡೆಸಿದ

ಹಳ್ಳಿಯ ಹೀರೋ ಟೆಸ್ಟ್ ತಂಡ ಮುನ್ನಡೆಸಿದ ಕಥೆ ನಿಜಕ್ಕೂ ಎಲ್ಲರಿಗೂ ಸ್ಪೂರ್ತಿದಾಯಕ. ಧೋನಿ ಅವರ ನಿರ್ಧಾರಕ್ಕೆ ನಾವು ಬೆಲೆ ಕೊಡಬೇಕು. ಏಕೆ ನಿರ್ಧಾರ ಕೈಗೊಂಡರು ಎಂಬುದರ ಬಗ್ಗೆ ಹೆಚ್ಚಿನ ಚರ್ಚೆ ಅನಗತ್ಯ ಎಂದು ಕಾಮೆಂಟೆಟರ್ ಹರ್ಷ್ ಭೋಂಗ್ಲೆ ಹೇಳಿದ್ದಾರೆ.

2014ರಲ್ಲೇ ನಿವೃತ್ತಿಯಾಗಲು ಧೋನಿ ನಿರ್ಧಾರ

2014ರಲ್ಲೇ ನಿವೃತ್ತಿಯಾಗಲು ಧೋನಿ ನಿರ್ಧಾರ ಹೀಗಾಗಿ ವರ್ಷ ಕೊನೆಗೊಳ್ಳುವ ಮುನ್ನ ಧೋನಿಯಿಂದ ನಿವೃತ್ತಿ ಘೋಷಣೆ

ಮುಂದಿನ ಟಾರ್ಗೆಟ್ ವಿಶ್ವಕಪ್ 2015: ಸಚಿನ್

ಧೋನಿ ನಿಮ್ಮ ಮುಂದಿನ ಟಾರ್ಗೆಟ್ ವಿಶ್ವಕಪ್ 2015: ಸಚಿನ್ ಟ್ವೀಟ್

ನನಗಂತೂ ನಿರ್ಧಾರ ಖುಷಿಕೊಟ್ಟಿದೆ

ನನಗಂತೂ ನಿರ್ಧಾರ ಖುಷಿಕೊಟ್ಟಿದೆ ಹಲವು ಕ್ರಿಕೆಟರ್ ಗಳ ಕನಸು ನಾಶ ಮಾಡಿದ್ದ ಧೋನಿ

ಅಸಲಿ ಪಂದ್ಯ ಫೆ.15ಕ್ಕೆ ಇದೆ

ಅಸಲಿ ಪಂದ್ಯ ಫೆ.15ಕ್ಕೆ ಇದೆ. ಅದಕ್ಕೆ ಧೋನಿ ತಯಾರಿ ನಡೆಸಬೇಕಿದೆ

ಧೋನಿ ಬಗ್ಗೆ ವೇಗಿ ವಿನಯ್ ಕುಮಾರ್

ಧೋನಿ ಬಗ್ಗೆ ವೇಗಿ ವಿನಯ್ ಕುಮಾರ್ ಟ್ವೀಟ್ ಮಾಡಿದ್ದು ಹೀಗೆ

ಗುಡ್ ಲಕ್ ಧೋನಿ ಎಂದ ಅನಿಲ್ ಕುಂಬ್ಳೆ

ಗುಡ್ ಲಕ್ ಧೋನಿ ಎಂದ ಮಾಜಿ ಟೆಸ್ಟ್ ನಾಯಕ ಅನಿಲ್ ಕುಂಬ್ಳೆ

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X