ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೂರ್ ಆಫ್ ನೀಲಗಿರೀಸ್, 10ನೇ ಸೈಕ್ಲಿಂಗಿಗೆ ನೋಂದಾಯಿಸಿಕೊಳ್ಳಿ

ಪ್ರಕೃತಿಯಲ್ಲಿ ಸೈಕಲ್ ಪ್ರವಾಸದ ಅನುಭವ ಒಂದು ದಶಕದ ನೀಲಗಿರೀಸ್ ಸೈಕ್ಲಿಂಗ್.ಟಿಎಫ್‌ಎನ್ 2017ರ ಕಾರ್ಯಕ್ರಮದಲ್ಲಿ 120೦ ಸೈಕ್ಲಿಸ್ಟ್ ಗಳಿಗೆ ಅವಕಾಶ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಸೈಕ್ಲಿಸ್ಟ್‌ಗಳ ಸಂಚಾರ.

By Mahesh

ಬೆಂಗಳೂರು, ಏಪ್ರಿಲ್ 28: ಪ್ರಕೃತಿಯಲ್ಲಿ ಸೈಕಲ್ ಪ್ರವಾಸದ ಅನುಭವ ! ನಿಜ, ಇದನ್ನು ಕಳೆದ ಒಂಭತ್ತು ವರ್ಷಗಳಲ್ಲಿ 900 ಮಂದಿ ಸೈಕ್ಲಿಸ್ಟ್‌ಗಳು ಹೊಂದಿದ್ದಾರೆ. ಡಿಸೆಂಬರ್ 2017 ರಲ್ಲಿ ಟೂರ್ ಆಫ್ ನೀಲಗಿರೀಸ್ (ಟಿಎಫ್‌ಎನ್) ಒಂದು ದಶಕ ಪೂರೈಸುತ್ತಿದೆ. ನೀಲಗಿರಿಯ ಬಿಷ್ಪರೆ ಮೀಸಲು ಪಶ್ಚಿಮಘಟ್ಟ ಪ್ರದೇಶದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕಿಲೋ ಮೀಟರ್ ಕ್ರಮಿಸಲು ವೇದಿಕೆ ಸಜ್ಜಾಗುತ್ತಿದೆ.

2017 ಮತ್ತೊಂದು ಅವಿಸ್ಮರಣೆಯಕ್ಕೆ ಸಹ ಕಾರಣವಾಗಲಿದ್ದು, ಸೈಕಲ್ ಕಂಡು ಹಿಡಿದು, 200 ವರ್ಷವಾಗಲಿದೆ. ಹತ್ತನೇ ಆವೃತ್ತಿಯ ರೈಡ್ ಎ ಸೈಕಲ್ ಪ್ರತಿಷ್ಠಾನ (ಆರ್‌ಎಸಿ-ಎಫ್) 2017ರ ಡಿಸೆಂಬರ್ 10 ರಿಂದ 17 ರವರೆಗೆ ನಿಗದಿಯಾಗಿದೆ. ಆಯ್ಕೆಯಾದ ಸವಾರರು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ 1000ಕ್ಕೂ ಹೆಚ್ಚು ಕಿಲೋ ಮೀಟರ್ ಸೈಕಲ್ ತುಳಿಯಲಿದ್ದಾರೆ.

ಬೆಂಗಳೂರಿನಿಂದ ಪ್ರಾರಂಭ ಆಗುವ ಸವಾರಿ- ಮೈಸೂರು, ಮಡಿಕೇರಿ, ಸುಲ್ತಾನ್ ಬತೇರಿ, ಉದಕಮಂಡಲಂ (ಊಟಿ) ಮೂಲಕ ಕ್ರಮಿಸಿ ಮತ್ತೆ ಮೈಸೂರಿಗೆ ಬಂದು ಕೊನೆಗೊಳ್ಳಲಿದೆ. ಟಿಎಫ್‌ಎನ್ 2017ರಲ್ಲಿ ಭಾಗವಹಿಸುವ ಸೈಕಲ್ ಸವಾರರು ಸಮತಟ್ಟಾದ ಪ್ರದೇಶ, ಗುಡ್ಡಗಾಡು, ಕಾಫಿ ಮತ್ತು ಚಹಾ ತೋಟದ ಹಾಗೂ ಮೂರು ವನ್ಯ ಜೀವಿ ಧಾಮಗಳಲ್ಲಿ ಸಂಚರಿಸುವರು.

ಸೈಕ್ಲಿಂಗಿಗೆ ನೋಂದಾಯಿಸಿಕೊಳ್ಳಿ

ಸೈಕ್ಲಿಂಗಿಗೆ ನೋಂದಾಯಿಸಿಕೊಳ್ಳಿ

ಟಿಎಫ್ ಎನ್-2017 ರ ಸೈಕ್ಲಿಂಗಿಗೆ ಆರ್‌ಎಸಿಎಫ್ ನೋಂದಣಿಯನ್ನು 2017ರ ಮೇ 1 ರಿಂದ ಆರಂಭಿಸಲಿದೆ. 10ನೇ ಆವೃತ್ತಿ ಟಿಎಫ್ ಎನ್ ಸೈಕ್ಲಿಂಗ್ ನಿರ್ವಾಣ ಮತ್ತು ಪ್ರಕೃತಿಯಲ್ಲಿ ಸೈಕಲ್ ಪ್ರವಾಸದ ಅನುಭವಕ್ಕೆ ಅರ್ಪಣೆಯಾಗಲಿದೆ. ನೀಲಗಿರೀಸ್ ಮತ್ತು ಆರ್‌ಎಸಿ-ಎಫ್ ಗರಿಷ್ಠ 120 ಸೈಕ್ಲಿಸ್ಟ್ ಗಳನ್ನು ಹೊಂದಲಿದೆ. ನೋಂದಾಯಿತ ಸೈಕ್ಲಿಸ್ಟ್ ಗಳ ಪ್ರೊಫೈಲ್, ಫಿಟ್ನೆಸ್ ಆಧಾರದ ಮೇಲೆ ಆಯ್ಕೆ ನಡೆಯಲಿದೆ.

ದೀಪಕ್ ಮಾಜಿಪಾಟೀಲ್

ದೀಪಕ್ ಮಾಜಿಪಾಟೀಲ್

ಕಳೆದ ಒಂಭತ್ತು ವರ್ಷ ಆರ್‌ಎಸಿ-ಎಫ್ ಸರಾಸರಿ 4 ರಿಂದ 5 ಹೆಚ್ಚು ನೋಂದಣಿ ಪಡೆಯುತ್ತಿವೆ. 2017 ರ ಟಿಎಫ್ ಎನ್ ಕುರಿತು ಮಾತನಾಡಿದ ದೀಪಕ್ ಮಾಜಿಪಾಟೀಲ್, ಸಹ ಸಂಸ್ಥಾಪಕ, ಆರ್‌ಎಸಿ-ಎಫ್- ಟೂರ್ ಆಫ್ ನೀಲಗಿರೀಸ್ ಸುದೀರ್ಘ ಇತಿಹಾಸ ಹೊಂದಿದೆ.

ಸೈಕ್ಲಿಸ್ಟ್‌ಗಳಿಗೆ ಸೈಕ್ಲಿಂಗ್ ನಿರ್ವಾಣದಲ್ಲಿ ಭಾಗವಹಿಸುವಂತೆ ಆಹ್ವಾನಿಸಲು ಸಂತೋಷವಾಗುತ್ತದೆ. ಹಿಂದಿನ ವರ್ಷಗಳಲ್ಲಿ ಜಗತ್ತಿನ ಇತರೆ ಭಾಗಗಳಿಂದಲೂ ಸ್ಪರ್ಧಿಗಳು ಬಂದಿದ್ದರು

ಸಾಹಸ ಮನೋಭಾವದಲ್ಲಿ ಸೈಕ್ಲಿಂಗ್

ಸಾಹಸ ಮನೋಭಾವದಲ್ಲಿ ಸೈಕ್ಲಿಂಗ್

ಸೈಕಲ್ ಕಂಡು ಹಿಡಿದು 200 ವರ್ಷ ಆಗುತ್ತಿರುವ ಸಂದರ್ಭದಲ್ಲಿ ಹತ್ತನೇ ಆವೃತ್ತಿ ಬಗ್ಗೆ ನಾವು ಹೆಚ್ಚು ಆಸಕ್ತಿ ಹೊಂದಿದ್ದೇವೆ.
ಸರಳ, ವಿನಮ್ರದೊಂದಿಗೆ ಆರಂಭವಾದ ಟಿಎಫ್‌ಎನ್ ಸಾಕಷ್ಟು ದೂರು ಕ್ರಮಿಸಿದೆ. ಭಾರತದ ಅತ್ಯಂತ ಜನಪ್ರಿಯ ಅತಿದೂರದ ಬೈಕ್ ಟೂರ್ ಎಂದೇ ಜಾಗತಿಕ ಸೈಕ್ಲಿಂಗ್ ಭೂಪಟದಲ್ಲಿ ಸ್ಥಾನ ಪಡೆದಿದೆ. ಸಾಹಸ ಮನೋಭಾವದಲ್ಲಿ ಸೈಕ್ಲಿಂಗ್ ಉತ್ತೇಜಿಸುತ್ತಿದೆ. ಅನೇಕ ವರ್ಷಗಳಿಂದ ಪ್ರತಿಷ್ಠಾನ ಟೂರ್ ಆಫ್ ನೀಲಗಿರೀಸ್, ನಮ್ಮ ಸೈಕಲ್, ಸೈಕಲ್ ರೀಸೈಕಲ್, ಸಹಾಯಕ ಚಟುವಟಿಕೆಗಳಲ್ಲಿ ತೊಡಗಿದೆ.

ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ

ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ

ರೈಡ್ ಎ ಸೈಕಲ್ ಪ್ರತಿಷ್ಠಾನ ಕುರಿತು (ಆರ್‌ಎಸಿ-ಎಫ್) : ಆರ್‌ಎಸಿ-ಎಫ್ ಲಾಭಗಳಿಸುವ ಉದ್ದೇಶ ಹೊಂದಿರುವ ಸಂಸ್ಥೆಯಲ್ಲ. ಸೈಕ್ಲಿಂಗ್ ಜನಪ್ರಿಯಗೊಳಿಸುವ ಆರಾಮವಾಗಿ ಸಾಮಾಜಿಕ ಬದಲಾವಣೆ, ಬಯಸುತ್ತಿರುವ ಸಂಸ್ಥೆ ರಾಷ್ಟ್ರದಲ್ಲಿ ಸೈಕಲ್ ಕ್ರಾಂತಿ ಪರಿಚಯಿಸುವ ಮೂಲಕ ದೈನಂದಿನ ಸಾಗಣೆ, ಸವಾರಿಗೆ, ಅದನ್ನು ಜನಪ್ರಿಯ ಮಾಡುವುದಾಗಿದೆ. ಆರ್‌ಎಸಿ-ಎಫ್ ಸೈಕಲ್ ಪ್ರೇಮಿಗಳು, ಸೈಕಲ್ ತಯಾರಕರು, ಸೈಕ್ಲಿಂಗ್ ಸಮುದಾಯ ಹಾಗೂ ಸರ್ಕಾರದ ಸಂಘಟನೆಗಳ ಜೊತೆಗೆ ಸಂಪರ್ಕ ಹೊಂದಿದೆ.ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ ಫೇಸ್ ಬುಕ್ ಪುಟ

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X