ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹರ್ಭಜನ್ ಸಿಂಗ್ ದಾಖಲೆ ಮುರಿದ ರವಿಚಂದ್ರನ್ ಅಶ್ವಿನ್

By Mahesh

ಕೊಲಂಬೋ, ಆಗಸ್ಟ್ 24: ಟೀಂ ಇಂಡಿಯಾ ಪಾಲಿಗೆ ಮ್ಯಾಚ್ ವಿನ್ನರ್ ಆಗಿ ಹೊರ ಹೊಮ್ಮಿರುವ ರವಿಚಂದ್ರನ್ ಅಶ್ವಿನ್ ಅವರು ಶ್ರೀಲಂಕಾ ಸರಣಿಯಲ್ಲಿ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿದ್ದಾರೆ. ಎರಡನೇ ಟೆಸ್ಟ್ ಪಂದ್ಯದ ಐದನೇ ದಿನದಂದು 5 ವಿಕೆಟ್ ಪಡೆದುಕೊಂಡ ಅಶ್ವಿನ್ ಅವರು ಹರ್ಭಜನ್ ಸಿಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಪಿ ಸಾರಾ ಓವಲ್ ಮೈದಾನದಲ್ಲಿ ಟೀಮ್ ಇಂಡಿಯಾದ ಆಫ್ ಸ್ಪಿನ್ನರ್ 28 ವರ್ಷ ವಯಸ್ಸಿನ ಆರ್ ಅಶ್ವಿನ್ ಅವರ ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ಅತಿಥೇಯ ಶ್ರೀಲಂಕಾದ ತಂಡ ಎರಡನೇ ಟೆಸ್ಟ್ ಪಂದ್ಯದ ಐದನೇ ದಿನ ಹೀನಾಯ ಸೋಲು ಕಂಡಿದೆ. ಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ 278 ರನ್ ಗಳ ಬೃಹತ್ ಜಯ ದಾಖಲಿಸಿದೆ.[ಶ್ರೀಲಂಕಾ ವಿರುದ್ಧ ಭಾರತಕ್ಕೆ ಜಯ, ರಾಹುಲ್ ಪಂದ್ಯಶ್ರೇಷ್ಠ]

ಮೂರು ಟೆಸ್ಟ್ ಸರಣಿಯಲ್ಲಿ ಎರಡನೇ ಬಾರಿಗೆ ಐದು ವಿಕೆಟ್ ಗಳಿಸುವ ಮೂಲಕ ಟೆಸ್ಟ್ ಸರಣಿಯೊಂದರಲ್ಲಿ ಎರಡನೇ ಪಂದ್ಯದಲ್ಲೇ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಹೊಂದಿದ್ದ ಹರ್ಭಜನ್ ಸಿಂಗ್ ಅವರನ್ನು ಹಿಂದಿಕ್ಕಿದ್ದಾರೆ. ಗಾಲೆ ಟೆಸ್ಟ್ ಪಂದ್ಯದಲ್ಲಿ ಹರ್ಭಜನ್ ಸಿಂಗ್ ಅವರು ಆಡುವ ಅವಕಾಶ ಪಡೆದರೂ ಕೇವಲ ಒಂದು ವಿಕೆಟ್ ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇನ್ನೊಂದೆಡೆ ಅಶ್ವಿನ್ ಅವರು ಪಂದ್ಯದಲ್ಲಿ 10 ವಿಕೆಟ್ ಉದುರಿಸಿದ್ದರು. ಅದರೂ ಭಾರತ 63ರನ್ ಗಳಿಂದ ಸೋಲು ಕಂಡಿತ್ತು.

R Ashwin breaks Harbhajan Singh's record in Sri Lanka

ಆರ್ ಆಶ್ವಿನ್ ಒಟ್ಟಾರೆ ಎರಡು ಪಂದ್ಯಗಳಿಂದ 16.35 ಸರಾಸರಿಯಂತೆ 16ವಿಕೆಟ್ ಪಡೆದುಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧ ಶ್ರೀಲಂಕಾದಲ್ಲೇ ಈ ಸಾಧನೆ ಮಾಡಿದ ಮೊದಲ ಸ್ಪಿನ್ನರ್ ಎನಿಸಿಕೊಂಡಿದ್ದಾರೆ. ಒಟ್ಟಾರೆ ಅಶ್ವಿನ್ ಅವರು 27 ಟೆಸ್ಟ್ ಪಂದ್ಯಗಳಿಂದ 141 ಟೆಸ್ಟ್ ವಿಕೆಟ್ ಪಡ್ದುಕೊಂಡಿದ್ದಾರೆ.

2008ರಲ್ಲಿ ಹರ್ಭಜನ್ ಸಿಂಗ್ ಅವರು 3 ಟೆಸ್ಟ್ ಪಂದ್ಯಗಳಿಂದ 16 ವಿಕೆಟ್ ಪಡೆದು ದಾಖಲೆ ಬರೆದಿದ್ದರು. ಅಶ್ವಿನ್ ಅವರು ಎರಡೇ ಪಂದ್ಯಗಳಲ್ಲಿ 17 ವಿಕೆಟ್ ಪಡೆದುಕೊಂಡಿದ್ದು, ಆಗಸ್ಟ್ 28ರಿಂದ ಆರಂಭವಾಗಲಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ.

22 ವರ್ಷಗಳ ನಂತರ ಟೆಸ್ಟ್ ಸರಣಿ ಗೆಲ್ಲುವ ಕನಸು ನನಸಾಗಲು ವಿರಾಟ್ ಕೊಹ್ಲಿಗೆ ಆಶ್ವಿನ್ ಸ್ಪಿನ್ ಜಾದೂ ನೆರವು ಅಗತ್ಯವಾಗಿ ಬೇಕಿದೆ. 1993ರಲ್ಲಿ ಮೊಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ಕಂಡ ಸರಣಿ ಗೆಲುವು ಮತ್ತೆ ಮರುಕಳಿಸುವುದೇ ಕಾದುನೋಡಬೇಕಿದೆ.

ಆಗಸ್ಟ್ 24, 2015ರ ಅನ್ವಯ ಶ್ರೀಲಂಕಾದಲ್ಲಿ ಟಾಪ್ 5 ಬೌಲಿಂಗ್ ಪ್ರದರ್ಶನ
1. ಆರ್ ಅಶ್ವಿನ್ : 17 ವಿಕೆಟ್ ಗಳು 2 ಟೆಸ್ಟ್ ಪಂದ್ಯ (2015)
2. ಹರ್ಭಜನ್ ಸಿಂಗ್ : 16 ವಿಕೆಟ್ ಗಳು 3 ಟೆಸ್ಟ್ ಪಂದ್ಯ (2008)
3. ಚೇತನ್ ಶರ್ಮ : 14 ವಿಕೆಟ್ ಗಳು 3 ಟೆಸ್ಟ್ ಪಂದ್ಯ (1985)
4. ಅನಿಲ್ ಕುಂಬ್ಳೆ : 13 ವಿಕೆಟ್ ಗಳು 3 ಟೆಸ್ಟ್ ಪಂದ್ಯ (1993)
5. ಮನೋಜ್ ಪ್ರಭಾಕರ್ : 12 ವಿಕೆಟ್ ಗಳು 3 ಟೆಸ್ಟ್ ಪಂದ್ಯ (1993)
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X