ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಇತಿಹಾಸ ನಿರ್ಮಿಸಿದ ಸೆರೆನಾ ಅತ್ಯಂತ ಹಿರಿಯ ವಿಂಬಲ್ಡನ್ ಕ್ವೀನ್

By Mahesh

ಲಂಡನ್, ಜು.12: ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಶನಿವಾರ ನಡೆದ ವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಅಂತಿಮ ಹಣಾಹಣಿಯಲ್ಲಿ ಸುಲಭ ಜಯ ಸಾಧಿಸಿದ್ದು ಕ್ರೀಡಾಭಿಮಾನಿಗಳಿಗೆ ಗೊತ್ತೇ ಇರುತ್ತದೆ. ಸೆರೆನಾ ಸಾಧನೆಯ ಮೆಲುಕು ನೋಟ ಇಲ್ಲಿದೆ.

33ರ ಹರೆಯದ ಅಮೆರಿಕದ ಸೆರೆನಾ ವಿಲಿಯಮ್ಸ್ ಅವರು ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಸ್ಪೇನಿನ ಗಾರ್ಬೈನ್ ಮುಗುರುಜಾ ವಿರುದ್ಧ 6-4, 6-4 ನೇರ ಸೆಟ್‌ಗಳಿಂದ 1 ಗಂಟೆ ಮತ್ತು 23 ನಿಮಿಷಗಳಲ್ಲಿ ಜಯಿಸಿದರು. ಈ ಗೆಲುವಿನೊಂದಿಗೆ ಆರನೇ ಬಾರಿಗೆ ವಿಂಬಲ್ಡನ್ ಕಿರೀಟ ಧರಿಸಿದರು. ಇದು ಸೆರೆನಾ ಅವರ 21ನೇ ಗ್ರಾನ್ ಸ್ಲಾಮ್ ಪ್ರಶಸ್ತಿಯಾಗಿದೆ. 2015ರಲ್ಲಿ ಸೆರೆನಾ ಮೂರನೇ ಗ್ರಾನ್‌ಸ್ಲಾಮ್ ಗೆದ್ದುಕೊಂಡಿದ್ದಾರೆ. [ಸಾನಿಯಾ ಮಿರ್ಜಾ- ಹಿಂಗಿಸ್ ಗೆ ವಿಂಬಲ್ಡನ್ ಗರಿ]

History girl Serena oldest woman to win Wimbledon singles

ಹಿರಿಯ ಆಟಗಾರ್ತಿ: 33 ವರ್ಷ 289ದಿನಗಳ ವಯೋಮಾನ ಹೊಂದಿರುವ ಸೆರೆನಾ ಅವರು ವಿಂಬಲ್ಡನ್ ಗೆದ್ದ ಅತ್ಯಂತ ಹಿರಿಅಯ್ ಆಟಗಾರ್ತಿ ಎನಿಸಿದರು. ಈ ಮೂಲಕ ಟೆನಿಸ್ ತಾರೆ ಮಾರ್ಟಿನಾ ನವತ್ರಿಲೋವಾ ಅವರ ದಾಖಲೆ ಮುರಿದರು. ವಿಂಬಲ್ಡನ್ ಸೇರಿದಂತೆ ಉಳಿದ ಗ್ರಾನ್ ಸ್ಲಾಮ್ ಗಳನ್ನು ಕೂಡಾ ಈ ವಯಸ್ಸಲ್ಲಿ ಗೆದ್ದ ದಾಖಲೆ ಬೇರೆ ಯಾವ ಆಟಗಾರ್ತಿಯ ಹೆಸರಲ್ಲೂ ಇಲ್ಲ.
ಪ್ರಮುಖ ನಾಲ್ಕು ಗ್ರಾನ್ ಸ್ಲಾಮ್ ಗಳನ್ನು ಗೆದ್ದಿರುವ ಸೆರೆನಾ 2002-03ರ ಸಾಧನೆಯನ್ನು ಈ ಬಾರಿ ಪುನಾರಾವರ್ತನೆ ಮಾಡಿದ್ದಾರೆ. ಮುಂದಿನ ತಿಂಗಳು 34ನೇ ಹರೆಯಕ್ಕೆ ಕಾಲಿಡುತ್ತಿದ್ದಾರೆ. ಯುಎಸ್ ಓಪನ್‌ನಲ್ಲಿ ಮತ್ತೆ ಪ್ರಶಸ್ತಿಯ ಬೇಟೆ ಮುಂದುವರೆಸಲಿದ್ದಾರೆ. ಯುಎಸ್ ಓಪನ್ ಗೆದ್ದರೆ 1988ರಲ್ಲಿ ಸ್ಟೆಫಿ ಗ್ರಾಫ್ ಮಾಡಿದ್ದ ಎಲ್ಲಾ ಗ್ರಾನ್ ಸ್ಲಾಮ್ ಗೆದ್ದ ದಾಖಲೆ ಸಮಗೊಳಿಸಬಹುದು.

ಗ್ರಾಫ್ ನಂತರ ಒಂದೇ ವರ್ಷದಲ್ಲಿ ವಿಂಬಲ್ಡನ್, ಆಸ್ಟ್ರೇಲಿಯನ್ ಓಪನ್ ಹಾಗೂ ಫ್ರೆಂಚ್ ಓಪನ್ ಗೆದ್ದ ಸಾಧನೆ ಸೆರೆನಾ ಪಾಲಾಗಿದೆ. ಸತತವಾಗಿ 28 ಗ್ರಾನ್ ಸ್ಲಾಮ್ ಪಂದ್ಯ ಜಯಸಿದ್ದಾರೆ. 2015ರಲ್ಲಿ 39-1 ದಾಖಲೆ ಗೆಲುವಿನ ಓಟ ಕಂಡಿದ್ದಾರೆ.

Story first published: Wednesday, January 3, 2018, 10:14 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X