ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಲೆಜೆಂಡ್ ಮೆಸ್ಸಿ ಈಗ ಟಾಟಾ ಮೋಟರ್ಸ್ ರಾಯಭಾರಿ

By Mahesh

ಬೆಂಗಳೂರು,ನ.02: ಭಾರತದ ಬೃಹತ್ ವಾಣಿಜ್ಯ ವಾಹನ ಉತ್ಪಾದಕ ಟಾಟಾ ಮೋಟಾರ್ಸ್, ನಿರಂತರ ಮಾರುಕಟ್ಟೆ ಉತ್ತೇಜನ ಆಂದೋಲನದ ಒಂದು ವರ್ಷದ ಬಳಿಕ ಮತ್ತೊಂದು ಬೃಹತ್ ಹೆಜ್ಜೆ ಇಟ್ಟಿದೆ. ಸತತ 4 ಸಲ ವಿಶ್ವದ ಅತ್ಯುತ್ತಮ ಫುಟ್ಬಾಲ್ ಆಟಗಾರ ಎಂಬ ಖ್ಯಾತಿ ಗಳಿಸಿರುವ ಫುಟ್ಬಾಲ್ ಜಗತ್ತಿನ ದಿಗ್ಗಜ ಲಿಯೊನೆಲ್ ಮೆಸ್ಸಿ ಜೊತೆ ಟಾಟಾ ಮೋಟಾರ್ಸ್ ಕೈಜೋಡಿಸಿದೆ.

ಜೆಸ್ಟ್, ಬೋಲ್ಟ್ ಮತ್ತು ಜೆನೆಕ್ಸ್ ನ್ಯಾನೊ ಮೊದಲಾದ ಹೊಸ ತಲೆಮಾರಿನ ಉತ್ಪನ್ನಗಳನ್ನು ಅದ್ದೂರಿಯಾಗಿ ಪ್ರಚಾರ ಮಾಡಿರುವ ಟಾಟಾ ಮೋಟಾರ್ಸ್, ಇದೀಗ ತನ್ನ ಹೊರಿಜನ್ ನೆಕ್ಸ್ಟ್ ಬಲವರ್ಧನೆ ಕಾರ್ಯಕ್ರಮದಡಿಯಲ್ಲಿ ಮತ್ತೊಂದು ದಿಟ್ಟ ಹೆಜ್ಜೆ ಮುಂದಿಟ್ಟಿದೆ.

ಒಂದು ದೀರ್ಘಾವಧಿ ಸಹಭಾಗಿತ್ವದಲ್ಲಿ ಮೆಸ್ಸಿ ರಾಯಭಾರಿಯಾಗಿ ಟಾಟಾ ಮೋಟಾರ್ಸ್ ಪ್ರಯಾಣಿಕ ವಾಹನಗಳನ್ನು ಉತ್ತೇಜಿಸಲಿದ್ದಾರೆ. ಇದರ ಆರಂಭವಾಗಿ ಟಾಟಾ ಮೋಟಾರ್ಸ್ #madeofgreat ಅಭಿಯಾನ ಅರಂಭಿಸಿದೆ. ಈ ಅಭಿಯಾನದಡಿಯಲ್ಲಿ ಕಂಪನಿ ಅನನ್ಯವಾದ ನಿಯಮಿತ ಜರ್ಸಿಗಳನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸಲಿದೆ.

ಪ್ರಯಾಣಿಕ ವಾಹನ ವಿಭಾಗದ ಅಧ್ಯಕ್ಷ ಮಾಯಾಂಕ್ ಪರೀಕ್, ಲಿಯೊನೆಲ್ ಮೆಸ್ಸಿಯನ್ನು ನಮ್ಮ ಜೊತೆ ಹೊಂದಲು ಅತ್ಯಂತ ಸಂತಸವಾಗುತ್ತಿದೆ. ಇವರು ಅತ್ಯಂತ ಪ್ರತಿಭಾನ್ವಿತರಾಗಿದ್ದು, ಇಂದಿನ ಯುವಜನತೆಯ ಐಕಾನ್. ಫುಟ್ಬಾಲ್ ನಲ್ಲಿ ಅವರನ್ನು ನೋಡುವುದು ಒಂದು ರೀತಿ ಜಾದೂ.

Tata Motors ropes in Messi as global brand ambassador


ಕ್ರೀಡಾಂಗಣದಲ್ಲಿ ಅವರ ನಡತೆ ಸ್ಪೂರ್ತಿದಾಯಕ. ಅವರು ಗೆಲುವಿನ ಕುದುರೆ, ನಂಬಿಕೆಗೆ ಅರ್ಹ, ಸರಳ ಮತ್ತು ಸ್ವಯಂ ನಂಬಿಕೆಯಿಂದ ಮುನ್ನಡೆಯುತ್ತಿದ್ದಾರೆ. ನಮ್ಮ ಆಂದೋಲನ ಮೂಲಧ್ಯೇಯ ನಮ್ಮನ್ನು ಮುನ್ನಡೆಸಿ ಅತ್ಯುತ್ತಮರನ್ನಾಗಿಸುವುದು ಯಾವುದು ಎಂಬುದು. ಟಾಟಾ ಮೋಟಾರ್ಸ್ ಅತ್ಯುತ್ತಮ ವಿನ್ಯಾಸ, ತಂತ್ರಜ್ಞಾನ ಮತ್ತು ನಂಬಿಕೆಯಿಂದ ಮುನ್ನಡೆಯುತ್ತಿದೆ. ಪ್ರಬಲ ಆಂದೋಲನದ ಮೂಲಕ ನಾವು ಪ್ರಯಾಣಿಕ ವಾಹನದ ದಕ್ಷತೆಯನ್ನು ಜನರಿಗೆ ತಲುಪಿಸುತ್ತೇವೆ ಎಂದರು.

ಲಿಯೊನೆಲ್ ಮೆಸ್ಸಿ : ನಮಸ್ತೆ ಇಂಡಿಯಾ. ನಾನು ಭಾರತೀಯ ಬ್ರ್ಯಾಂಡ್ ಜೊತೆಗಿನ ಮೊದಲ ಸಲದ ಸಹಭಾಗಿತ್ವಕ್ಕಾಗಿ ಅತ್ಯಂತ ಸಂತಸಗೊಂಡಿದ್ದೇನೆ. ಟಾಟಾ ಮೋಟಾರ್ಸ್‍ನ ಕುಟುಂಬದ ಭಾಗವಾಗಿರುತ್ತಿರುವುದಕ್ಕೆ ಅತ್ಯಂತ ರೋಮಾಂಚನವಾಗುತ್ತಿದೆ. ನಾನು ಭಾರತದ ಕುರಿತು ಸದಾ ಆಸಕ್ತಿ ತಳೆದಿರುವೆ. ಇಲ್ಲಿನ ಅದ್ಬುತಗಳ ಕುರಿತು ಸಾಕಷ್ಟು ಕೇಳಿರುವೆ. ಒಮ್ಮೆ ನಾನು ಅರ್ಜೆಂಟೀನಾ ತಂಡದೊಂದಿಗೆ ಭಾರತದಲ್ಲಿದ್ದೆ. ಈಗ ಮತ್ತೊಮ್ಮೆ ಭೇಟಿ. ಟಾಟಾ ಮೋಟಾರ್ಸ್ ನಿಜವಾಗಿ ಭಾರತದ ಪ್ರತಿನಿಧಿ. ಅತ್ಯಂತ ಬೆಳವಣಿಗೆ ಸಾಧಿಸಿದ ಬ್ರ್ಯಾಂಡ್ ಎಂದರು.

ಟಾಟಾ ಮೊಟಾರ್ಸ್ : ವಿಶ್ವದ ಪ್ರತಿಷ್ಠಿತ ವಾಹನ ಸಂಸ್ಥೆಗಳ ಸಾಲಿನಲ್ಲಿ ಸ್ಥಾನ ಪಡೆದಿದೆ. 2014-15ರಲ್ಲಿ ಸಂಸ್ಥೆಯ ಒಟ್ಟು ಆದಾಯ 2, 62,796 ಕೋಟಿ ರೂ.(42.04 ಶತಕೋಟಿ ಡಾಲರ್). ಅಂಗ ಸಂಸ್ಥೆಗಳು, ಸಹವರ್ತಿಗಳ ಮೂಲಕ ಟಾಟಾ ಮೋಟಾರ್ಸ್ ಇಂಗ್ಲೆಂಡ್, ದಕ್ಷಿಣ ಕೋರಿಯಾ, ಥೈಲ್ಯಾಂಡ್ ಮತ್ತು ಸ್ಪೇನ್ ಗಳಲ್ಲಿ ಅಸ್ತಿತ್ವ ಹೊಂದಿದೆ.

ಜಾಗ್ವಾರ್ ಲ್ಯಾಂಡ್ ರೋವರ್ ಖರೀದಿಯೊಂದಿಗೆ ಉದ್ಯಮದ ವ್ಯಾಪ್ತಿ ಹೆಚ್ಚಿಸಿಕೊಂಡಿದೆ. ಫಿಯೆಟ್ ಇಂಡಿಯಾ ಜತೆ ಸಹಭಾಗಿತ್ವ ಹೊಂದಿದೆ. 8 ದಶಲಕ್ಷ ಟಾಟಾ ವಾಹನಗಳು ದೇಶದ ರಸ್ತೆಯಲ್ಲಿವೆ. ವಾಣಿಜ್ಯ ವಾಹನಗಳಲ್ಲಿ ಸಂಸ್ಥೆ ದೇಶೀಯ ಮಾರುಕಟ್ಟೆಯಲ್ಲಿ ಅಗ್ರ ಸ್ಥಾನ ಪಡೆದಿದೆ. ಪ್ರಯಾಣಿಕ ವಾಹನಗಳಲ್ಲಿ ಪ್ರತಿಷ್ಠಿತ 3 ಸಂಸ್ಥೆಗಳ ಸಾಲಿನಲ್ಲಿ ಸ್ಥಾನ ಹೊಂದಿದೆ. ವಿಶ್ವದ 4ನೇ ಬೃಹತ್ ಟ್ರಕ್ ಉತ್ಪಾದಕ ಹಾಗೂ ದ್ವಿತೀಯ ಬೃಹತ್ ಬಸ್ ಉತ್ಪಾದಕ ಸಂಸ್ಥೆ ಕೂಡ ಹೌದು. ಟಾಟಾ ಕಾರು, ಬಸ್ಸು, ಟ್ರಕ್ ಗಳು ಯೂರೋಪ್, ಆಫ್ರಿಕ, ಏಷ್ಯಾ, ಅಮೆರಿಕಗಳಲ್ಲಿ ಮಾರಾಟವಾಗುತ್ತಿವೆ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X