ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಚಿತ್ರಗಳಲ್ಲಿ : ವಾರೆ ವ್ಹಾ ! ವಾವ್ರಿಂಕಾ, ಸೂಪರ್ ಸೆರೆನಾ

By Mahesh

ಪ್ಯಾರೀಸ್, ಜೂ.08: ಫ್ರೆಂಚ್ ಓಪನ್ ಟೆನಿಸ್ ನ ಹೊಸ ತಾರೆಯಾಗಿ ಸ್ವಿಟ್ಜರ್ಲೆಂಡಿನ ಸ್ಟಾನ್ ವಾವ್ರಿಂಕ ಹೊರ ಹೊಮ್ಮಿದ್ದಾರೆ. ಆವೆಮಣ್ಣಿನ ಅಂಕಣದಲ್ಲಿ ಈ ಬಾರಿ ಅಚ್ಚರಿಯ ಫಲಿತಾಂಶಗಳು ಹೊರಹೊಮ್ಮಿದೆ. ಫೆಡರರ್, ನಡಾಲ್, ಜೋಕೊವಿಕ್, ಶೆರಪೋವಾ ಕನಸು ಭಗ್ನಗೊಂಡರೂ ಟೂರ್ನಿ ಅಭಿಮಾನಿಗಳ ಮನ ತಣಿಸಿತು.

ವಿಶ್ವದ ನಂಬರ್‌ ಒನ್‌ ಆಟಗಾರ ಸೆರ್ಬಿಯಾದ ನೊವಾಕ್‌ ಜೊಕೋವಿಕ್‌ ಅವರನ್ನು ಸ್ಟಾನ್‌ ವಾವ್ರಿಂಕ ಅವರು ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ ನಾಲ್ಕು ಸೆಟ್‌ಗಳ ಹೋರಾಟದಲ್ಲಿ ಮಣಿಸಿದರು. ಈ ಮೂಲಕ ಫ್ರೆಂಚ್‌ ಓಪನ್‌ ಟೆನಿಸ್‌ ಪುರುಷರ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು. [ಸಾಗರತಳದಲ್ಲಿ ಅದ್ಭುತ ಟೆನಿಸ್ ಕೋರ್ಟ್!]

30ರ ಹರೆಯದ ಸ್ವಿಸ್‌ನ ವಾವ್ರಿಂಕ ಅವರು 4-6, 6-4, 6-3, 6-4 ಸೆಟ್‌ಗಳಿಂದ ಜೊಕೋವಿಕ್‌ ಅವರನ್ನು ಸೋಲಿಸಿ ಕಳೆದ 25 ವರ್ಷಗಳಲ್ಲಿ ಫ್ರೆಂಚ್‌ ಓಪನ್‌ ಗೆದ್ದ ಅತೀ ಹಿರಿಯ ಆಟಗಾರ ಎನಿಸಿಕೊಂಡರು. [ಚಿತ್ರಗಳಲ್ಲಿ : 2014ರಲ್ಲಿ ಆವೆ ಮಣ್ಣಿನ ರಾಜನ ಸಂಭ್ರಮ]

ಇದು ವಾವ್ರಿಂಕ ಅವರ ಎರಡನೇ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿಯಾಗಿದೆ. ವಾವ್ರಿಂಕ 2014ರಲ್ಲಿ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಜಯಿಸಿದ್ದರು. ಫ್ರೆಂಚ್ ಓಪನ್ ಕ್ವಾರ್ಟರ್‌ಫೈನಲ್‌ನಲ್ಲಿ ರೋಜರ್‌ ಫೆಡರರ್‌ ಅವರನ್ನು ವಾವ್ರಿಂಕ ಸೋಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇನ್ನಷ್ಟು ಅಂಕಿ ಅಂಶ, ಗೆದ್ದವರ ಸಂಭ್ರಮಾಚರಣೆ ಚಿತ್ರಗಳು ಮುಂದಿವೆ...

ಫ್ರೆಂಚ್‌ ಓಪನ್‌ ಗೆದ್ದ ಅತೀ ಹಿರಿಯ ಆಟಗಾರ

ಫ್ರೆಂಚ್‌ ಓಪನ್‌ ಗೆದ್ದ ಅತೀ ಹಿರಿಯ ಆಟಗಾರ

30ರ ಹರೆಯದ ಸ್ವಿಸ್‌ನ ವಾವ್ರಿಂಕ ಅವರು 4-6, 6-4, 6-3, 6-4 ಸೆಟ್‌ಗಳಿಂದ ಜೊಕೋವಿಕ್‌ ಅವರನ್ನು ಸೋಲಿಸಿ ಕಳೆದ 25 ವರ್ಷಗಳಲ್ಲಿ ಫ್ರೆಂಚ್‌ ಓಪನ್‌ ಗೆದ್ದ ಅತೀ ಹಿರಿಯ ಆಟಗಾರ ಎನಿಸಿಕೊಂಡರು.

ಜೋಕೊವಿಕ್ ಗೆ ಆಘಾತ ತಂದ ವಾವ್ರಿಂಕ

ಜೋಕೊವಿಕ್ ಗೆ ಆಘಾತ ತಂದ ವಾವ್ರಿಂಕ

ಎಂಟನೇ ಶ್ರೇಯಾಂಕದ ವಾವ್ರಿಂಕ ತಾಳ್ಮೆಯಿಂದ ಆಡಿ ಮುಂದಿನ ಮೂರು ಸೆಟ್‌ ಗೆದ್ದು ಪ್ರಶಸ್ತಿ ಜಯಿಸಿ ಸಂಭ್ರಮಿಸಿದರು.

ಜೊಕೋವಿಕ್‌ ಕನಸು ಭಗ್ನ

ಜೊಕೋವಿಕ್‌ ಕನಸು ಭಗ್ನ

ಜೊಕೋವಿಕ್‌ ಅವರು ಎಲ್ಲ ನಾಲ್ಕು ಗ್ರ್ಯಾನ್‌ ಸ್ಲಾಮ್‌ ಗೆದ್ದ ಎಂಟನೇ ಆಟಗಾರ ಎಂದೆನಿಸಿಕೊಳ್ಳುವ ಅವಕಾಶದಿಂದ ವಂಚಿತರಾದರು. ಅವರು ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಮೂರನೇ ಬಾರಿ ಸೋಲನ್ನು ಕಂಡಿದ್ದಾರೆ.

2015ರಲ್ಲಿ ಜೋಕೋವಿಕ್ ಅದ್ಭುತ ಆಟ

2015ರಲ್ಲಿ ಜೋಕೋವಿಕ್ ಅದ್ಭುತ ಆಟ

2015ರಲ್ಲಿ ಆಡಿದ 44 ಪಂದ್ಯಗಳಲ್ಲಿ ಇದು ಜೊಕೋವಿಕ್‌ ಅವರ ಕೇವಲ ಮೂರನೇ ಸೋಲು ಆಗಿದೆ. ಅವರು ಸತತ 28 ಪಂದ್ಯಗಳಲ್ಲಿ ಜಯ ಸಾಧಿಸಿದ ದಾಖಲೆ ಕೂಡ ಮಾಡಿದ್ದರು.

ಫೆಡರರ್, ನಡಾಲ್ ಗೂ ಆಘಾತ

ಫೆಡರರ್, ನಡಾಲ್ ಗೂ ಆಘಾತ

ವಾವ್ರಿಂಕ ಕ್ವಾರ್ಟರ್‌ಫೈನಲ್‌ನಲ್ಲಿ ತಮ್ಮದೇ ದೇಶದ ರೋಜರ್‌ ಫೆಡರರ್‌ ಅವರನ್ನು ಕೆಡಹಿದ್ದರೆ ಜೊಕೋವಿಕ್‌ ಆವೆ ಅಂಗಣದ ರಾಜ ರಫೆಲ್‌ ನಡಾಲ್‌ ಅವರನ್ನು ಸೋಲಿಸಿದ್ದರು.

ಸಫರೋವಾ, ಬೆಥಾನಿಗೆ ಡಬಲ್ಸ್

ಸಫರೋವಾ, ಬೆಥಾನಿಗೆ ಡಬಲ್ಸ್

ಜೆಕ್ ರಿಪಬ್ಲಿಕ್ ನ ಲೂಸೀ ಸಫರೋವಾ ಹಾಗೂ ಅಮೆರಿಕದ ಬೆಥಾನಿ ಮ್ಯಾಟೆಕ್ ಸ್ಯಾಂಡ್ಸ್ ಜೋಡಿ ಫ್ರೆಂಚ್ ಓಪನ್‌ನ ಮಹಿಳೆಯರ ಡಬಲ್ಸ್ ಪ್ರಶಸ್ತಿ ಗೆದ್ದಿದ್ದಾರೆ.
ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್ ವಿರುದ್ಧ ಶರಣಾಗಿ ರನ್ನರ್ಸ್‌-ಅಪ್ ಪ್ರಶಸ್ತಿ ಪಡೆದುಕೊಂಡಿದ್ದ ಸಫರೋವಾ ಅವರು ಡಬಲ್ಸ್ ನಲ್ಲಿ ಕಪ್ ಎತ್ತಿದ್ದಾರೆ.

ಸಫರೋವಾ ಹಾಗೂ ಬೆಥಾನಿ ಅವರು ಕಾಸೆ ಡೆಲಾಕ್ವಾ ಹಾಗೂ ಯಾರೊಸ್ಲ್ಲೊವಾ ಶ್ವೆಡೊವಾರನ್ನು 3-6, 6-4, 6-2 ಸೆಟ್‌ಗಳಿಂದ ಮಣಿಸಿದರು.

ಟೆನಿಸ್ ಪಂದ್ಯ ನೋಡಲು ಬಂದ ರೊನಾಲ್ಡೋ

ಟೆನಿಸ್ ಪಂದ್ಯ ನೋಡಲು ಬಂದ ರೊನಾಲ್ಡೋ

ಫ್ರೆಂಚ್ ಓಪನ್ ಪುರುಷರ ಫೈನಲ್ ಪಂದ್ಯ ನೋಡಲು ಬಂದ ಬ್ರೆಜಿಲಿನ ಫುಟ್ಬಾಲ್ ತಾರೆ ರೊನಾಲ್ಡೋ

ಸೆರೆನಾಗೆ ಮೂರನೇ ಬಾರಿ ಫ್ರೆಂಚ್ ಓಪನ್ ಕಿರೀಟ

ಸೆರೆನಾಗೆ ಮೂರನೇ ಬಾರಿ ಫ್ರೆಂಚ್ ಓಪನ್ ಕಿರೀಟ

ಮೊತ್ತ ಮೊದಲ ಬಾರಿ ಗ್ರಾನ್‌ಸ್ಲಾಮ್ ಫೈನಲ್ ಆಡಿರುವ 28ರ ಹರೆಯದ ಸಫರೋವಾ ವಿರುದ್ಧ 33ರ ಹರೆಯದ ಸೆರೆನಾ ನೇರ ಸೆಟ್‌ಗಳಿಂದ ಗೆಲುವು ಸಾಧಿಸಿ ಮೂರನೇ ಬಾರಿ ಫ್ರೆಂಚ್ ಓಪನ್ ಹಾಗೂ 20ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡರು.

ಮಾರ್ಟಿನಾ ಜೊತೆ ಸೆರೆನಾ

ಮಾರ್ಟಿನಾ ಜೊತೆ ಸೆರೆನಾ

ಸ್ಟೆಫಿಗ್ರಾಫ್ ನಂತರ ಟೆನಿಸ್‌ನಲ್ಲಿ ಎರಡನೆ ಗರಿಷ್ಠ ಪ್ರಶಸ್ತಿಗಳನ್ನು ಜಯಿಸಿದ ಸಾಧನೆ ಮಾಡಿರುವ ಸೆರೆನಾ ಅವರು ಟೆನಿಸ್ ತಾರೆ ಮಾರ್ಟಿನಾ ನವತ್ರಿಲೋವಾ ಜೊತೆ ಫೋಸ್.

ಮಾರ್ಟಿನಾ ನವ್ರಾಟಿಲೊವಾ ನಂತರ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ ವಿಶ್ವದ 2ನೇ ಹಿರಿಯ ಆಟಗಾರ್ತಿಯಾಗಿ ಸೆರೆನಾ ಸಂಭ್ರಮಿಸಿದರು. 1990ರಲ್ಲಿ ನವ್ರಾಟಿಲೋವಾ 33ರ ಹರೆಯದಲ್ಲಿ ಪ್ರಶಸ್ತಿ ಜಯಿಸಿದ್ದರು.

Story first published: Wednesday, January 3, 2018, 10:14 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X