ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕ:ಕುಸಿದ ಸಿಂಧು,ಮೇಲಕ್ಕೇರಿದ ಶ್ರೀಕಾಂತ್

ಬೆಂಗಳೂರು, ಜೂನ್ 22 : ವಿಶ್ವ ಬಿಡಬ್ಲ್ಯೂಎಫ್ ಶ್ರೇಯಾಂಕ ಪಟ್ಟಿ ಗುರುವಾರ ಪ್ರಕಟವಾಗಿವಾಗಿದೆ. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪಿವಿ ಸಿಂಧು 3ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇನ್ನು ಇಂಡೋನೇಷ್ಯಾ ಓಪನ್ ಸೂಪರ್ ಸೀರಿಸ್ ಪ್ರಶಸ್ತಿ ವಿಜೇತ ಭಾರತದ ಶಟ್ಲರ್ ಕಿಡಾಂಬಿ ಶ್ರೀಕಾಂತ್ ವಿಶ್ವ ಬಿಡಬ್ಲ್ಯೂಎಫ್ ಶ್ರೇಯಾಂಕದಲ್ಲಿ 11 ಸ್ಥಾನ ಮೇಲಕ್ಕೆ ಜಿಗಿದಿದ್ದಾರೆ.

ಆಸ್ಟ್ರೇಲಿಯಾ ಓಪನ್: ಶ್ರೀಕಾಂತ್, ಪ್ರಣೀತ್, ಸಿಂಧು, ಸೈನಾ ಕ್ವಾರ್ಟರ್ ಫೈನಲ್ ಗೆಆಸ್ಟ್ರೇಲಿಯಾ ಓಪನ್: ಶ್ರೀಕಾಂತ್, ಪ್ರಣೀತ್, ಸಿಂಧು, ಸೈನಾ ಕ್ವಾರ್ಟರ್ ಫೈನಲ್ ಗೆ

Srikanth jumps 11 spots, Sindhu drops to 4th in latest BWF rankings

51,603 ಅಂಕಗಳದೊಂದಿಗೆ ಶ್ರೀಕಾಂತ್ ವಿಶ್ವ ಶ್ರೇಯಾಂಕದಲ್ಲಿ 11ನೇ ಸ್ಥಾನ ಅಲಂಕರಿಸಿದ್ದಾರೆ. ಇಂಡೋನೇಷ್ಯಾ ಓಪನ್ ಸೂಪರ್ ಸೀರಿಸ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ಬಾರತ ಪ್ರಣಯ್ 4 ಸ್ಥಾನ ಮೇಲಕ್ಕೆ ಜಿಗಿದು 21ನೇ ಶ್ರೇಯಾಂಕದಲ್ಲಿದ್ದಾರೆ.

ಅಜಯ್ ಜಯರಾಂ ಮತ್ತು ಬಿ. ಸಾಯಿ ಪ್ರಣೀತ್ 2 ಸ್ಥಾನ ಕುಸಿತ ಕಂಡಿದ್ದು ಕ್ರಮವಾಗಿ 15 ಹಾಗೂ 16ನೇ ಸ್ಥಾನದಲ್ಲಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್ ಕ್ರಮವಾಗಿ 4 ಹಾಗೂ 16ನೇ ಸ್ಥಾನ ಪಡೆದಿದ್ದಾರೆ.

ಮಹಿಳಾ ಡಬಲ್ಸ್‌ ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್ ಸಿಕ್ಕಿ ರೆಡ್ಡಿ ಜೋಡಿ 2 ಸ್ಥಾನ ಮೇಲಕ್ಕೆ ಜಿಗಿದಿದ್ದು, 26ನೇ ಸ್ಥಾನದಲ್ಲಿದ್ದಾರೆ, ಮಿಶ್ರ ಡಬಲ್ಸ್‌ ನಲ್ಲಿ ಸಿಕ್ಕಿ ರೆಡ್ಡಿ ಮತ್ತು ಪ್ರಣವ್ ಜೆರ್ರಿ ಚೋಪ್ರಾ ಜೋಡಿ 16ನೇ ಸ್ಥಾನ ಅಲಂಕರಿಸಿದ್ದಾರೆ.

Story first published: Wednesday, January 3, 2018, 10:14 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X