ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಶೈನಿಂಗ್ 'ಸಿಂಧು' ಇಂಡಿಯನ್ ಓಪನ್ ಫೈನಲ್

ಅಂದಹಾಗೆ, ಕರೊಲಿನಾ ವಿರುದ್ಧ ಸಿಂಧು ಜಯಿಸಿದ್ದು ಇದು ಎರಡನೇ ಬಾರಿ. ಸಿಂಧು ಅವರ ಈವರೆಗಿನ ವೃತ್ತಿಜೀವನದಲ್ಲಿ ಅವರು ಕರೊಲಿನಾ ಅವರನ್ನು ಮೂರು ಬಾರಿ ಎದುರುಗೊಂಡಿದ್ದಾರೆ.

ಭಾನುವಾರವಷ್ಟೇ ಮುಕ್ತಾಯವಾದ ಇಂಡಿಯಾ ಓಪನ್ 2017 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಜಯಿಸಿದ ಪಿ.ವಿ. ಸಿಂಧು ಅವರ ಆಕರ್ಷಕ ಫೋಟೋಗಳು ಇಲ್ಲಿವೆ.

ಭಾನುವಾರ ನಡೆದ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಪಿ.ವಿ. ಸಿಂಧು ಅವರು, ಸ್ಪೇನ್ ನ ಆಟಗಾರ್ತಿ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಆಗಿರುವ ಕರೊಲಿನಾ ಮರಿನ್ ಅವರನ್ನು 21-19, 21-16 ನೇರ ಗೇಮ್ ಗಳಿಂದ ಸೋಲಿಸಿ ಪ್ರಶಸ್ತಿಗೆ ಭಾಜನರಾದರು.

ಒಲಿಂಪಿಕ್ಸ್ ನಲ್ಲಿ ಫೈನಲ್ ನಲ್ಲೂ ಕರೋಲಿನಾ ಮರಿನ್ ಅವರೇ ಸಿಂಧು ಅವರನ್ನು ಸೋಲಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆ ಪಂದ್ಯದಲ್ಲಿ ಫೈನಲ್ ನಲ್ಲಿ ಸೋತರೂ, ಸಿಂಧು ಅವರು ಕೋಟಿಗಟ್ಟಲೆ ನಾನಾ ಮೂಲಗಳಿಂದ ಹಣ ಗಳಿಸಿದರು. ಇದೀಗ, ಆಂಧ್ರ ಪ್ರದೇಶ ಸರ್ಕಾರ ಅವರಿಗೆ ಐಎಎಸ್ ಗ್ರೇಡ್ 1 ಶ್ರೇಣಿಯ ಹುದ್ದೆ ನೀಡಲು ಸಜ್ಜಾಗಿದೆ.

ಆದರೆ, ಒಲಿಂಪಿಕ್ಸ್ ನಲ್ಲಿ ಬಂಗಾರ ಗೆದ್ದ ಕರೊಲಿನಾ ಮರಿನ್ ಗೆ ಆ ದೇಶದಲ್ಲಿ ಸಿಕ್ಕಿದ್ದು ಕಡಿಮೆ ಬಹುಮಾನ. ಸಿಂಧು ಪಡೆದ ಹಣದಲ್ಲಿ ಶೇ. 10ರಿಂದ 15ರಷ್ಟನ್ನು ಮಾತ್ರ ಮರಿನ್ ಗಳಿಸಿದ್ದಾರೆ. ಇದನ್ನು ಜನವರಿ ತಿಂಗಳಲ್ಲಿ ಭಾರತಕ್ಕೆ ಬಂದಿದ್ದ ಕರೋಲಿನಾ ಅವರೇ ಹೇಳಿದ್ದರು. ಅದೇನೇ ಇರಲಿ, ಭಾನುವಾರ ನಡೆದ ಇಂಡಿಯಾ ಓಪನ್ 2017ರಲ್ಲಿ ಸಿಂಧು ಅವರ ಪ್ರಶಸ್ತಿ ಸುತ್ತಿನ ಪಂದ್ಯದ ಕೆಲವು ಫೋಟೋಗಳು ಇಲ್ಲಿ ನಿಮಗಾಗಿ.

ಪೋಡಿಯಂನಲ್ಲಿ ಸ್ಮೈಲಿಂಗ್

ಪೋಡಿಯಂನಲ್ಲಿ ಸ್ಮೈಲಿಂಗ್

ಫೈನಲ್ ಪಂದ್ಯ ಗೆದ್ದ ನಂತರ ಪೋಡಿಯಂನಲ್ಲಿ ಸಿಂಧು ಹಾಗೂ ಕರೊಲಿನಾ ಅವರಿಗೆ ಪದಕ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅವರು ಛಾಯಾಗ್ರಾಹಕರಿಗೆ ನೀಡಿದ ಪೋಸು ಇದು.

ಸಿಂಧು ವೀರೋಚಿತ

ಸಿಂಧು ವೀರೋಚಿತ

ಭಾನುವಾರ ನಡೆದ ಪಂದ್ಯದಲ್ಲಿ ಹುಲಿಗಳ ಕಾದಾಟವಂತೆ ಬಿಂಬಿತವಾದ ಮೊದಲ ಗೇಮ್ ನಲ್ಲಿ ಕರೋಲಿನ್ ಅವರ ವೀರೋಚಿತ ಹೋರಾಟವನ್ನು ಮೀರಿಸಿದ ಆಟ ಪ್ರದರ್ಶಿಸಿ ಸಿಂಧು, ಮೊದಲ ಗೇಮ್ ಅನ್ನು ಕೇವಲ 2 ಅಂಕಗಳ ಅಂತರದಲ್ಲಿ ಗೆದ್ದಕೊಂಡರು.

ಪಾರಮ್ಯ ಮೆರೆದು ಗೆಲವು

ಪಾರಮ್ಯ ಮೆರೆದು ಗೆಲವು

ಎರಡನೇ ಗೇಮ್ ನ ಆರಂಭದಲ್ಲೂ ಇದೇ ರೀತಿಯ ಪೈಪೋಟಿ ಮುಂದುವರಿಯಿತಾದರೂ ಕರೊಲಿನಾ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದ ಸಿಂಧು ದ್ವಿತೀಯ ಸೆಟ್ ನಲ್ಲೂ ಪಾರಮ್ಯ ಮೆರೆದು ಈ ಗೇಮ್ ಗೆಲ್ಲುವುದರೊಂದಿಗೆ ಪಂದ್ಯದಲ್ಲೂ ಜಯಶಾಲಿಯಾದರು.

ಅಗ್ರ ಆಟಗಾರ್ತಿ ಮಣಿಸುವಲ್ಲಿ ಯಶಸ್ವಿ

ಅಗ್ರ ಆಟಗಾರ್ತಿ ಮಣಿಸುವಲ್ಲಿ ಯಶಸ್ವಿ

ಇದೇ ಟೂರ್ನಿಯ ಸೆಮಿಫೈನಲ್ ಸುತ್ತಿನಲ್ಲಿ ಸೈನಾ ನೆಹ್ವಾಲ್ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದ ಸಿಂಧು, ಫೈನಲ್ ಪಂದ್ಯದಲ್ಲಿ ವಿಶ್ವದ ಆಟಗಾರ್ತಿಯಲ್ಲೊರಾದ ಮರಿನ್ ಅವರನ್ನು ಮಣಿಸುವಲ್ಲಿಯೂ ಯಶಸ್ವಿಯಾದರು.

ಒಲಿಂಪಿಕ್ಸ್ ನಲ್ಲಿ ಮಾತ್ರ ಸೋಲು

ಒಲಿಂಪಿಕ್ಸ್ ನಲ್ಲಿ ಮಾತ್ರ ಸೋಲು

ಅಂದಹಾಗೆ, ಕರೊಲಿನಾ ವಿರುದ್ಧ ಸಿಂಧು ಜಯಿಸಿದ್ದು ಇದು ಎರಡನೇ ಬಾರಿ. ಸಿಂಧು ಅವರ ಈವರೆಗಿನ ವೃತ್ತಿಜೀವನದಲ್ಲಿ ಅವರು ಕರೊಲಿನಾ ಅವರನ್ನು ಮೂರು ಬಾರಿ ಎದುರುಗೊಂಡಿದ್ದಾರೆ. ಅವುಗಳಲ್ಲಿ ಎರಡು ಬಾರಿ ಸಿಂಧು ಗೆದ್ದಿದ್ದರೆ, ಕರೋಲಿನಾ ಒಂದು ಬಾರಿ (ಒಲಿಂಪಿಕ್ಸ್) ಜಯ ಸಾಧಿಸಿದ್ದಾರೆ.

Story first published: Wednesday, January 3, 2018, 10:14 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X