ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮತ್ತೆ ಅಮೆಚೂರ್ ಬಾಕ್ಸಿಂಗ್‌ ಅಖಾಡಕ್ಕೆ ಮರಳಿದ ಸರಿತಾ, ಪಿಂಕಿ

ನವದೆಹಲಿ, ಮೇ 29 : ಆರು ತಿಂಗಳುಗಳ ಹಿಂದೆ ವೃತ್ತಿಪರ ಬಾಕ್ಸಿಂಗ್‌ಗೆ ಸೇರಿದ್ದ ಭಾರತದ ಮಹಿಳಾ ಬಾಕ್ಸಿಂಗ್ ಪಟುಗಳಾದ ಎಲ್‌ ಸರಿತಾದೇವಿ ಮತ್ತು ಪಿಂಕಿ ಜಾಂಗ್ರಾ ಅವರು ಮತ್ತೆ ಅಮೆಚೂರ್ ಬಾಕ್ಸಿಂಗ್‌ ಕಣಕ್ಕೆ ಮರಳಿದ್ದಾರೆ.

ಅವರು ಭಾನುವಾರ ಭಾರತ ಅಮೆಚೂರ್ ಬಾಕ್ಸಿಂಗ್ ಫೆಡರೇಷನ್ ನ (ಎಐಬಿಎ) ಕ್ಷಮೆ ಕೋರಿ ರಾಷ್ಟ್ರೀಯ ಶಿಬಿರಕ್ಕೆ ಮರಳಿದ್ದಾರೆ. ಮಾಜಿ ವಿಶ್ವ ಚಾಂಪಿಯನ್ ಸರಿತಾದೇವಿ ಮತ್ತು ರಾಷ್ಟ್ರೀಯ ಚಾಂಪಿಯನ್ ಪಿಂಕಿ ಅವರು ಈ ಹಿಂದೆ ಇಂಡಿಯನ್ ಬಾಕ್ಸಿಂಗ್ ಕೌನ್ಸಿಲ್ (ಐಬಿಸಿ) ಜತೆಗೆ ಒಪ್ಪಂದ ಮಾಡಿಕೊಂಡಿದ್ದರು.

Sarita Devi, Pinki Jangra return to amateur fold after brief pro boxing stint

'ಪಿಂಕಿ ಅವರು ಸೋಮವಾರ ಶಿಬಿರವನ್ನು ಸೇರಿಕೊಳ್ಳುವವ ಸಾಧ್ಯತೆ ಇದ್ದು ಸರಿತಾ ಕೆಲವೇ ದಿನಗಳಲ್ಲಿ ಶಿಬಿರಕ್ಕೆ ಮರಳಲಿದ್ದಾರೆ. ಪಿಂಕಿ ಅವರು ಅನುಮತಿ ಪಡೆಯದೇ ಶಿಬಿರವನ್ನು ಬಿಟ್ಟುಹೋಗಿದ್ದರು.

ಇದೀಗ ಎಐಬಿಎಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟು ಮರಳುತ್ತಿದ್ದಾರೆ. ಇಬ್ಬರೂ ಅಧ್ಯಕ್ಷ ಅಜಯ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದ್ದರು' ಎಂದು ಸಂಸ್ಥೆಯ ಪದಾಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

31 ವರ್ಷದ ಸರಿತಾದೇವಿ ಅವರು ಹೋದ ಜನವರಿ 29ರಂದು ವೃತ್ತಿಪರ ಬಾಕ್ಸಿಂಗ್ ಪಂದ್ಯದಲ್ಲಿ ಆಡಿದ್ದರು. ಅದರ ನಂತರ ಅವರು ಮತ್ತೆ ರಿಂಗ್‌ಗೆ ಇಳಿದಿಲ್ಲ. ತಮ್ಮ ತಾಯಿಯ ಚಿಕಿತ್ಸೆಗಾಗಿ ಮುಂಬೈನಲ್ಲಿಯೇ ಉಳಿದುಕೊಂಡಿದ್ದರು.

Sarita Devi, Pinki Jangra return to amateur fold after brief pro boxing stint

'ಸರಿತಾ ಅವರ ತಾಯಿಯ ಆರೋಗ್ಯ ಸರಿಯಿಲ್ಲ. ಅವರ ಆರೈಕೆಗಾಗಿ ಸರಿತಾ ಅವರು ಕೆಲವು ದಿನಗಳ ನಂತರ ಶಿಬಿರ ಸೇರುವುದಾಗಿ ಅನುಮತಿ ಪಡೆದಿದ್ದಾರೆ. ಮುಂಬರುವ ನವೆಂಬರ್‌ನಲ್ಲಿ ವಿಯೆಟ್ನಾಮ್ ನಲ್ಲಿ ಏಷ್ಯನ್ ಚಾಂಪಿಯನ್‌ ಷಿಪ್ ನಡೆಯಲಿದೆ.

ಇಬ್ಬರೂ ಬಾಕ್ಸರ್ ಗಳು ಅಮೆಚೂರ್ ಬಾಕ್ಸಿಂಗ್‌ ಗೆ ಮರಳಿರುವುದನ್ನು ಐಬಿಸಿ ಅಧ್ಯಕ್ಷ ಬ್ರಿಗೇಡಿಯರ್(ನಿವೃತ್ತ) ಪಿ.ಕೆ. ಮುರಳೀಧರನ್ ರಾಜಾ ಖಚಿತಪಡಿಸಿದ್ದಾರೆ. 27 ವರ್ಷದ ಪಿಂಕಿ ಅವರು ರಾಷ್ಟ್ರೀಯ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕ ಜಯಿಸಿದ್ದರು.

'ವೃತ್ತಿಪರ ಬಾಕ್ಸಿಂಗ್‌ನಲ್ಲಿ ಆಡಿ ದೈಹಿಕ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಸುಧಾರಿಸಿಕೊಳ್ಳುವ ಇಚ್ಛೆಯಿತ್ತು. ಅದನ್ನು ಮಾಡಿದೆ. ಆರು ತಿಂಗಳ ಹಿಂದೆ ಪ್ರೊ ಬಾಕ್ಸಿಂಗ್‌ನಲ್ಲಿ ಪದಾರ್ಪಣೆ ಮಾಡಿದ್ದೆ.

ಅದರ ನಂತರ ಬೇರೆ ಪಂದ್ಯಗಳಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ಆದ್ದರಿಂದ ಮತ್ತೆ ಅಮೆಚೂರ್ ಬಾಕ್ಸಿಂಗ್‌ಗೆ ಮರಳುವ ನಿರ್ಧಾರ ಮಾಡಿದೆ. ಎಐಬಿಎ ಕೂಡ ಅವಕಾಶ ನೀಡಿತು' ಎಂದು ಪಿಂಕಿ ಪ್ರತಿಕ್ರಿಯಿಸಿದ್ದಾರೆ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X