ಬ್ಯಾಂಕಾಕ್, ಜೂನ್ 2: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್, ಇಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿ ಫೈನಲ್ ಸುತ್ತಿಗೆ ಕಾಲಿಟ್ಟಿದ್ದಾರೆ.
ಶುಕ್ರವಾರ ನಡೆದ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು, ಜಪಾನ್ ನ ಹಕುರೋ ಸುಝುಕಿ ಅವರನ್ನು 21-15, 20-22 ಹಾಗೂ 21-11 ಗೇಮ್ ಗಳಿಂದ ಮಣಿಸಿ, ಸೆಮಿ ಫೈನಲ್ ಪ್ರವೇಶಿಸಿದರು.[ಫ್ರೆಂಚ್ ಓಪನ್: ಲಿಯಾಂಡರ್ ಜೋಡಿಗೆ ಸೋಲು]
ಪಂದ್ಯದ ಆರಂಭದಿಂದಲೂ ಚುರುಕಿನ ಪ್ರದರ್ಶನ ನೀಡಿದ ಸೈನಾ ನೆಹ್ವಾಲ್, ಕೆಲವಾರು ತಪ್ಪುಗಳನ್ನೆಸೆದರೂ ಅಂತಿಮವಾಗಿ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾದರು.
ಮೊದಲ ಗೇಮ್ ನಲ್ಲಿಎದುರಾಳಿಯಿಂದ ತೀವ್ರ ಪೈಪೋಟಿ ಎದುರಿಸಿದ ಹೊರತಾಗಿಯೂ ಆ ಗೇಮ್ ಅನ್ನು 21-15ರ ಅಂತರದಲ್ಲಿ ಗೆದ್ದ ಸೈನಾಗೆ ಜಪಾನ್ ನ ಆಟಗಾರ್ತಿ , ದ್ವಿತೀಯ ಗೇಮ್ ನಲ್ಲಿ ಮಣ್ಣು ಮುಕ್ಕಿಸಿದರು.
ಆದರೆ, ಮೂರನೇ ಸುತ್ತಿನಲ್ಲಿ ಮತ್ತೆ ಪುಟಿದೆದ್ದ ಸೈನಾ, ತಮ್ಮ ಎಂದಿನ ಕರಾರುವಾಕ್ ಹೊಡೆತಗಳ ಮೂಲಕ ಜಪಾನ್ ಆಟಗಾರ್ತಿಯ ಆಟವನ್ನು ಮಣಿಸುವಲ್ಲಿ ಯಶಸ್ವಿಯಾದರು.