ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಾಸ್ಟರ್ ಬ್ಲಾಸ್ಟರ್ ತಂಡದಲ್ಲಿ ಸಚಿನ್, ಕೊಹ್ಲಿ, ಸೆಹ್ವಾಗ್

By Mahesh

ದುಬೈ, ಫೆ.2: ಐಸಿಸಿ ವಿಶ್ವಕಪ್ 2015ಗೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲಿ ಏಕದಿನ ಕ್ರಿಕೆಟ್ ನ ಮೊಟ್ಟ ಮೊದಲ ಮಾಸ್ಟರ್ ಬ್ಲಾಸ್ಟರ್ ವೆಸ್ಟ್ ಇಂಡೀಸ್ ನ ದೈತ್ಯ ಕ್ರಿಕೆಟರ್ ವಿವಿಯನ್ ರಿಚರ್ಡ್ಸ್ ಅವರು ತಮ್ಮ ನೆಚ್ಚಿನ ಆಟಗಾರರನ್ನು ಹೆಸರಿಸಿದ್ದಾರೆ. ಸಾರ್ವಕಾಲಿಕ ಟಾಪ್10 ಏಕದಿನ ಕ್ರಿಕೆಟ್ ದಿಗ್ಗಜರ ಪೈಕಿ ಸಚಿನ್, ಸೆಹ್ವಾಗ್, ಕೊಹ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಏಕದಿನ ಕ್ರಿಕೆಟ್ ನ ದಿಗ್ಗಜ ಎಂದು ಸಚಿನ್ ತೆಂಡೂಲ್ಕರ್ ಅವರನ್ನು ರಿಚರ್ಡ್ಸ್ ಹೊಗಳಿದ್ದಾರೆ. ಸಚಿನ್ ಇಲ್ಲದ ಸಾರ್ವಕಾಲಿಕ ತಂಡ ಊಹಿಸಲೂ ಸಾಧ್ಯವಿಲ್ಲ. ನನ್ನ ನೆಚ್ಚಿನ ಆಟಗಾರ, ಆತನ ಆಟ ನೋಡುವುದೇ ಹಬ್ಬ ಎಂದಿದ್ದಾರೆ. ಬ್ರಿಯಾನ್ ಲಾರಾರನ್ನು ಕೂಡಾ ಹೊಗಳಿರುವ ರಿಚರ್ಡ್ಸ್ ಲಾರಾ ಅವರಿಗೆ ಸಚಿನ್ ನಂತರದ ಸ್ಥಾನ ನೀಡುತ್ತೇನೆ ಎಂದಿದ್ದಾರೆ. [ಐಸಿಸಿ ವಿಶ್ವಕಪ್ ಅಪ್ಲಿಕೇಷನ್ ಇಳಿಸಿಕೊಳ್ಳೋದು ಹೇಗೆ?]

Sachin, Sehwag, Kohli in Richards' top-10 ODI batsmen of all time

ರಿಚರ್ಡ್ಸ್ ಆಯ್ಕೆಯ ತಂಡದಲ್ಲಿ ಮೈಕಲ್ ಹಸ್ಸಿ, ಎಬಿ ಡಿವಿಲೆಯರ್ಸ್ ಅಲ್ಲದೆ ವಿರಾಟ್ ಕೊಹ್ಲಿ ಕೂಡಾ ಸ್ಥಾನ ಗಳಿಸಿದ್ದಾರೆ. ವೀರೆಂದರ್ ಸೆಹ್ವಾಗ್ ಹಾಗೂ ವಿರಾಟ್ ಕೊಹ್ಲಿ ಯಾವುದೇ ಬೌಲರ್ ಎಸೆತವನ್ನು ಲೀಲಾಜಾಲವಾಗಿ ಬೌಂಡರಿ ಆಚೆಗೆ ಅಟ್ಟಬಲ್ಲ ಸಮರ್ಥವುಳ್ಳವರಾಗಿದ್ದಾರೆ.

ಏಕದಿನ ಕ್ರಿಕೆಟ್ ನಲ್ಲಿ ಕೊಹ್ಲಿ ತೋರಿಸುವ ಪರಾಕ್ರಮ ಟೆಸ್ಟ್ ನಲ್ಲೂ ಮುಂದುವರೆಸಿದರೆ ಒಳ್ಳೆಯದು ಎಂದಿದ್ದಾರೆ. [ಐಸಿಸಿ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ದಾಖಲೆಗಳು]

Virat Kohli

ವಿವಿಯನ್ ರಿಚರ್ಡ್ಸ್ ಆಯ್ಕೆಯ ಟಾಪ್ 10 ಬ್ಯಾಟ್ಸ್ ಮನ್
1. ಸಚಿನ್ ತೆಂಡೂಲ್ಕರ್ (ಭಾರತ)
2. ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)
3. ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್)
4. ಕ್ಲೈವ್ ಲಾಯ್ಡ್ (ವೆಸ್ಟ್ ಇಂಡೀಸ್)
5. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)
6. ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ)
7. ವಿರೇಂದರ್ ಸೆಹ್ವಾಗ್ (ಭಾರತ)
8. ಮೈಕಲ್ ಹಸ್ಸಿ (ಆಸ್ಟ್ರೇಲಿಯಾ)
9. ಎಬಿ ಡಿ ವಿಲೆಯರ್ಸ್ (ದಕ್ಷಿಣ ಆಫ್ರಿಕಾ)
10. ವಿರಾಟ್ ಕೊಹ್ಲಿ ( ಭಾರತ)

ಒನ್ ಇಂಡಿಯಾ

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X