ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2015: ಈ ಯುವ ಸ್ಟಾರ್ ಗಳ ಮೇಲೆ ಕಣ್ಣಿರಿಸಿ

By Mahesh

ಏಕದಿನ ಕ್ರಿಕೆಟ್ ಗಳಲ್ಲಿ ವಿಶ್ವಕಪ್ ಟೂರ್ನಿ ಅತ್ಯಾಕರ್ಷಕ ಹಾಗೂ ಜನಪ್ರಿಯ ಟೂರ್ನಿ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರತಿಭಾವಂತವರಿಗೆ ದಾಖಲೆಗಳನ್ನು ಮುರಿಯುವ ವೇದಿಕೆಯೂ ಆಗಿದೆ.

ಈ ಬಾರಿಯ ಐಸಿಸಿ ವಿಶ್ವಕಪ್ 2015ನಲ್ಲೂ ಹೆಚ್ಚಿನ ಪ್ರಮಾಣದ ದಾಖಲೆ ಮುರಿಯುವುದನ್ನು ಕಾಣುವ ತವಕ ಅಭಿಮಾನಿಗಳಲ್ಲೂ ಇದೆ. ಮೊಟ್ಟಮೊದಲ ಬಾರಿಗೆ ವಿಶ್ವಕಪ್ ಆಡುವ ಯುವ ಕ್ರಿಕೆಟರ್ ಗಳ ಮೇಲೆ ಸದಾ ಕಣ್ಣಿರುತ್ತದೆ.

ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ</a> | <a class=ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ" title="ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ" />ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ

ವಿಶ್ವಕಪ್ ವೇಳೆಯಲ್ಲಿ ಹೊಸ ಹೊಸ ಸ್ಟಾರ್ ಗಳು ಏಕದಿನ ಕ್ರಿಕೆಟ್ ನಲ್ಲಿ ಉದಯಿಸುತ್ತಾರೆ. ಟೂರ್ನಿ ವೇಳೆಗೆ ಕ್ರಿಕೆಟ್ ತಂಡಗಳ ಶ್ರೇಯಾಂಕ ಏನೇ ಇರಲಿ, ಆಟಗಾರರು ಲಯಕ್ಕೆ ಬಂದರೆ ಎದುರಾಳಿ ತಪ್ಪಿದ್ದಲ್ಲ ತೊಂದರೆ.

ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

ವಿಶ್ವಕಪ್ ಟೂರ್ನಿಯಲ್ಲಿ ಹೊಸ ದಾಖಲೆ ನಿರ್ಮಿಸುವುದರ ಜೊತೆಗೆ ಮುಂದಿನ ತಮ್ಮ ವೃತ್ತಿ ಬದುಕಿಗೂ ಅಡಿಪಾಯ ಹಾಕಿಕೊಳ್ಳಬಹುದಾಗಿದೆ.[ಹೆಚ್ಚು ವೈಯಕ್ತಿಕ ಮೊತ್ತ ದಾಖಲಿಸಿದವರ ಪಟ್ಟಿ]

11ನೇ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ನಿರೀಕ್ಷೆ ಹುಟ್ಟಿಸಿರುವ ಮೊದಲ ಬಾರಿಗೆ ವಿಶ್ವಕಪ್ ಅಂಗಳಕ್ಕೆ ಜಿಗಿದಿರುವ ಟಾಪ್ 10 ಆಟಗಾರರ ವಿವರ ಮುಂದಿದೆ ತಪ್ಪದೇ ಓದಿ...

ರೋಹಿತ್ ಶರ್ಮ, ಭಾರತ

ರೋಹಿತ್ ಶರ್ಮ, ಭಾರತ

ರೋಹಿತ್ ಶರ್ಮ ಲಯಕ್ಕೆ ಮರಳಿದರೆ ಆತನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಏಕದಿನ ಕ್ರಿಕೆಟ್ ನಲ್ಲಿ ಎರಡು ಬಾರಿ ದ್ವಿಶತಕ ಬಾರಿಸಿರುವ ಏಕೈಕ ಆಟಗಾರ ರೋಹಿತ್ ಶರ್ಮಗೆ ನಿಧಾನವಾಗಿ ದ್ವೀಪರಾಷ್ಟ್ರದ ಹವೆ ಒಗ್ಗುತ್ತಿದೆ. ಬ್ಯಾಟಿಂಗ್ ಗೆ ಹಿಡಿದ ಮಂಕು ತಗ್ಗುತ್ತಿದೆ.

2013ರಲ್ಲಿ 209 ರನ್ ಚೆಚ್ಚಿದ ರೋಹಿತ್, ಶ್ರೀಲಂಕಾ ವಿರುದ್ಧ 173 ಎಸೆತಗಳಲ್ಲಿ 264 ರನ್ ಬಾರಿಸಿ ಎಲ್ಲರ ಕಣ್ಣು ತನ್ನತ್ತ ಸೆಳೆದಿದ್ದಾರೆ. ಇತ್ತೀಚಿಗೆ ಅಭ್ಯಾಸ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಅಬ್ಬರಿಸಿರುವುದರಿಂದ ಟೂರ್ನಿಯಲ್ಲಿ ಅದೇ ರೀತಿ ಪ್ರದರ್ಶನದ ನಿರೀಕ್ಷೆಯಿದೆ.

ಕೋರೆ ಆಂಡರ್ಸನ್

ಕೋರೆ ಆಂಡರ್ಸನ್

36 ಚೆಂಡುಗಳಲ್ಲಿ ವೆಸ್ ಇಂಡೀಸ್ ವಿರುದ್ಧ 2014ರಲ್ಲಿ ಶತಕ ಗಳಿಸುತ್ತಿದ್ದಂತೆ ಕೋರೆ ಆಂಡರ್ಸನ್ ಹೆಸರು ಎಲ್ಲರ ಕಿವಿಗೆ ಬಿದ್ದಿತು. ಕಿವೀಸ್ ತಂಡದಲ್ಲಿ ಪ್ರಮುಖ ಆಲ್ ರೌಂಡರ್ ಆಗಿ ಬೆಳೆಯುತ್ತಿರುವ ಕೋರೆ ಆಂಡರ್ಸನ್ ಅವರು ಏಕದಿನ ಕ್ರಿಕೆಟ್ ನಲ್ಲಿ 130 ಸ್ಟ್ರೈಕರ್ ರೇಟ್ ನಲ್ಲಿ ಸ್ಕೋರ್ ಮಾಡುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಗ್ಲೆನ್ ಮ್ಯಾಕ್ಸ್ ವೆಲ್

ಗ್ಲೆನ್ ಮ್ಯಾಕ್ಸ್ ವೆಲ್

2012ರಲ್ಲಿ ಏಕದಿನ ಕ್ರಿಕೆಟ್ ವೃತ್ತಿ ಆರಂಭಿಸಿದ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಸ್ಪಿನ್ ಹಾಗೂ ವೇಗದ ಬೌಲರ್ ಗಳನ್ನು ಲೀಲಾಜಾಲವಾಗಿ ಎದುರಿಸಬಲ್ಲ ಆಟಗಾರ. ಬ್ಯಾಟಿಂಗ್ ಜೊತೆಗೆ ಆಫ್ ಸ್ಪಿನ್ ಬೌಲಿಂಗ್ ಮೂಲಕ ಆಸೀಸ್ ತಂಡಕ್ಕೆ ಬಲ ಹೆಚ್ಚಿಸಿದ್ದಾರೆ. ಅಭ್ಯಾಸ ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿರುವ ಮ್ಯಾಕ್ಸ್ ವೆಲ್ ಇತ್ತೀಚೆಗೆ 248 ರನ್ ಬಾರಿಸಿರುವುದರಲ್ಲಿ 172 ರನ್ ಬೌಂಡರಿಗಳಲ್ಲಿ ಬಂದಿರುವುದನ್ನು ಗಮಿಸಿದರೆ ಈತನ ಪವರ್ ಏನೆಂದು ತಿಳಿಯುತ್ತದೆ.

ಹ್ಯಾಮಿಲ್ಟನ್ ಮಸಕಡ್ಜ

ಹ್ಯಾಮಿಲ್ಟನ್ ಮಸಕಡ್ಜ

ಬಲಗೈ ಬ್ಯಾಟ್ಸ್ ಮನ್ ಹಾಗೂ ಆಗಾಗ ಲೆಗ್ ಸ್ಪಿನ್ ಬೌಲಿಂಗ್ ಮಾಡುವ ಜಿಂಬಾಬ್ವೆಯ ಭರವಸೆಯ ಆಟಗಾರ ಹ್ಯಾಮಿಲ್ಟನ್ ಮಸಕಡ್ಜ 2001ರಿಂದ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಲೋಕದಲ್ಲಿದ್ದಾರೆ.

ಹಾಗೆ ನೋಡಿದರೆ ಐಸಿಸಿ ವಿಶ್ವಕಪ್ 2015ನಲ್ಲಿ ಮೊಟ್ಟ ಮೊದಲ ಪಂದ್ಯ ಆಡುತ್ತಿರುವವರ ಪೈಕಿ ಅತ್ಯಂತ ಹಿರಿಯ ಆಟಗಾರರಾಗಿದ್ದಾರೆ. 3 ಶತಕ 24 ಅರ್ಧ ಶತಕ ಬಾರಿಸಿರುವ 140 ಏಕದಿನ ಪಂದ್ಯಗಳ ನಂತರ ಮಸಕಡ್ಜ ವಿಶ್ವಕಪ್ ನಲ್ಲಿ ಉತ್ತಮ ಆಟ ಪ್ರದರ್ಶಿಸುವ ನಿರೀಕ್ಷೆ ತೋರಿದ್ದಾರೆ.
ಹಮೀದ್ ಹಸನ್, ಅಫ್ಘಾನಿಸ್ತಾನ

ಹಮೀದ್ ಹಸನ್, ಅಫ್ಘಾನಿಸ್ತಾನ

ಪಾಕಿಸ್ತಾನದ ಪೇಶಾವಾರ್ ನ ನಿರಾಶ್ರಿತ ತಾಣಗಳಲ್ಲಿ ಬೆಳೆದ ಹಮೀದ್ ಹಸನ್ ಅವರು ಅಫ್ಘಾನಿಸ್ತಾನ ಪರ 2009 ರಿಂದ ಆಡುತ್ತಿದ್ದು ಈಗಾಗಲೇ 40 ವಿಕೆಟ್ ಕಿತ್ತು ಸುದ್ದಿ ಮಾಡಿದ್ದಾರೆ. ಯುಎಇ ವಿರುದ್ಧ 45 ರನ್ನಿತ್ತು 5 ವಿಕೆಟ್ ಕಿತ್ತು ಭರವಸೆ ಮೂಡಿಸಿದ್ದಾರೆ.

ಕ್ವಿಂಟನ್ ಡಿ ಕಾಕ್, ದಕ್ಷಿಣ ಆಫ್ರಿಕಾ

ಕ್ವಿಂಟನ್ ಡಿ ಕಾಕ್, ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾ ಪರ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ ಮನ್ ಆಗಿ ಕ್ವಿಂಟನ್ ಡಿ ಕಾಕ್ ಕಿರಿಯ ವಯಸ್ಸಿನಲ್ಲೇ ಹೆಚ್ಚು ಸುದ್ದಿ ಮಾಡಿದ್ದಾರೆ. ಮೊದಲ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ.21 ವರ್ಷ ವಯಸ್ಸಿನಲ್ಲೇ ತನ್ನ ವಾರಿಗೆಯ ಇತರೆ ಆಟಗಾರರಿಗಿಂತ ಹೆಚ್ಚಿನ ಸಾಧನೆ ಮಾಡಿದ್ದಾರೆ.

ಜೋ ರೂಟ್, ಇಂಗ್ಲೆಂಡ್

ಜೋ ರೂಟ್, ಇಂಗ್ಲೆಂಡ್

ಇಂಗ್ಲೆಂಡಿನ ಯಾರ್ಕ್ ಷೈರ್ ನ ಕಲಾತ್ಮಕ ಬ್ಯಾಟ್ಸ್ ಮನ್ ಜೋ ರೂಟ್ ಭರವಸೆಯ ಆಟಗಾರನಾಗಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ ಮಿನುಗುತ್ತಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ 2013ರಿಂದ ಇರುವ ರೂಟ್ ಅವರು 3 ಶತಕ, 8 ಅರ್ಧ ಶತಕ ಗಳಿಸಿದ್ದರೂ ಇನ್ನೂ ಹೆಚ್ಚಿನ ಸಾಧನೆ ನೀಡುವ ತವಕದಲ್ಲಿದ್ದಾರೆ.

ಜಾಸನ್ ಹೋಲ್ಡರ್, ವೆಸ್ಟ್ ಇಂಡೀಸ್

ಜಾಸನ್ ಹೋಲ್ಡರ್, ವೆಸ್ಟ್ ಇಂಡೀಸ್

23 ವರ್ಷದ ಯುವ ಆಟಗಾರ ಉತ್ತಮ ಬೌಲರ್ ಆಗಿ ವಿಂಡೀಸ್ ತಂಡಕ್ಕೆ ಆಸರೆಯಾಗಿದ್ದಾರೆ. ವೆಸ್ಟ್ ಇಂಡೀಸ್ ನ ವೇಗದ ಬೌಲರ್ ಗಳ ಗತ ಇತಿಹಾಸ ಮತ್ತೊಮ್ಮೆ ನೆನಪಿಸುವಂತೆ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. 2014ರಿಂದ ತಂಡವನ್ನು ಸಮರ್ಥವಾಗಿ ಮುನ್ನಡೆಸುತ್ತಾ ಹೊಸ ಹುರುಪು ತುಂಬಿದ್ದಾರೆ.

ದಿನೇಶ್ ಚಂಡಿಮಾಲ್, ಶ್ರೀಲಂಕಾ

ದಿನೇಶ್ ಚಂಡಿಮಾಲ್, ಶ್ರೀಲಂಕಾ

2009ರಿಂದ ಶ್ರೀಲಂಕಾದ ತಂಡದ ಬ್ಯಾಟಿಂಗ್ ಬೆನ್ನಲುಬಾಗಿ ರೂಪುಗೊಳ್ಳುತ್ತಿರುವ ದಿನೇಶ್ ಚಂಡಿಮಾಲ್ ಗೆ ಇದು ಮೊದಲ ವಿಶ್ವಕಪ್ ಟೂರ್ನಿ. ಸೆಂಚುರಿ ಮೂಲಕ ಏಕದಿನ ಕ್ರಿಕೆಟ್ ಗೆ ಎಂಟ್ರಿಕೊಟ್ಟ ದಿನೇಶ್ 12 ಅರ್ಧ ಶತಕ ಗಳಿಸಿದ್ದು 30 ರನ್ ಸರಾಸರಿ ಹೊಂದಿದ್ದಾರೆ. ಶ್ರೀಲಂಕಾಕ್ಕೆ ವಿಶ್ವಕಪ್ ನಲ್ಲಿ ಬ್ಯಾಟಿಂಗ್ ಶಕ್ತಿಯಾಗಬಲ್ಲರು.

ಡೇವಿಡ್ ವಾರ್ನರ್, ಆಸ್ಟ್ರೇಲಿಯಾ

ಡೇವಿಡ್ ವಾರ್ನರ್, ಆಸ್ಟ್ರೇಲಿಯಾ

2009ರಿಂದ ಆಸ್ಟ್ರೇಲಿಯಾ ತಂಡದಲ್ಲಿರುವ ಡೇವಿಡ್ ವಾರ್ನರ್ ಈಗಲೂ ಉತ್ತಮ ಲಯದಲ್ಲಿದ್ದಾರೆ. ಇಂಡಿಯಾ ವಿರುದ್ಧದ ಸರಣಿಯಲ್ಲಿ ಶತಕ ಸಿಡಿಸಿದ್ದಲ್ಲದೆ ಪ್ರಥಮ ದರ್ಜೆ ಪಂದ್ಯವಾಡದೆ ತಂಡಕ್ಕೆ ಆಯ್ಕೆಯಾದ(1877ರ ನಂತರ ಇದೇ ಮೊದಲು) ಆಟಗಾರ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಅರೋನ್ ಫಿಂಚ್ ಜೊತೆಗೂಡಿ ವಾರ್ನರ್ ಉತ್ತಮ ಕಲೆ ಹಾಕುತ್ತಿದ್ದು, ಆಸೀಸ್ ಬ್ಯಾಟಿಂಗ್ ಶಕ್ತಿ ತೋರಿಸಲು ಸಿದ್ದರಾಗಿದ್ದಾರೆ.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X