ರಿಯೋ : ಸೆಮಿಫೈನಲ್ ತಲುಪಿದ ಸಾನಿಯಾ-ಬೋಪಣ್ಣ ಜೋಡಿ

By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 13: ರಿಯೋ ಒಲಿಂಪಿಕ್ಸ್ 2016 ರ ಟೆನ್ನಿಸ್ ಪಂದ್ಯಗಳಲ್ಲಿ ಭಾರತಕ್ಕೆ ಪದಕ ಗೆಲ್ಲುವ ಆಸೆ ಚಿಗುರೊಡೆದಿದೆ. ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಸಾನಿಯ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿ ಸೆಮಿ ಫೈನಲ್ ತಲುಪಿದೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಕ್ವಾರ್ಟರ್ ಫೈನಲ್​ನಲ್ಲಿ ಗ್ರೇಟ್ ಬ್ರಿಟನ್​ನ ಆಂಡಿ ಮರ್ರೆ ಹಾಗೂ ಹಿದರ್ ವಾಟ್ಸನ್ ಜೋಡಿಯನ್ನು ಭಾರತೀಯ ಜೋಡಿ ಸೋಲಿಸಿ ಸೆಮಿಫೈನಲ್ ಹಂತ ತಲುಪಿದ್ದಾರೆ. ಸೆಮಿಫೈನಲ್ ನಲ್ಲಿ ಗೆದ್ದರೆ ಪದಕ ಖಚಿತವಾಗಲಿದೆ.

Rio 2016 Sania-Rohan reach SF; Vikas Krishan into QF


ಒಲಿಂಪಿಕ್ಸ್ ಟೆನಿಸ್ ಸೆಂಟರ್ ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಸಾನಿಯಾ -ಬೋಪಣ್ಣ ಅವರು 6-4, 6-4ರಲ್ಲಿ ಸುಲಭ ಜಯ ದಾಖಲಿಸಿದರು. [36 ವರ್ಷಗಳ ಬಳಿಕ ಹಾಕಿ ಇಂಡಿಯಾದ ಸಾಧನೆ]

ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಸ್ಯಾಮ್ ಸ್ಟೊಸುರ್ ಹಾಗೂ ಜೋನಾಥನ್ ಪೀರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಬೋಪಣ್ಣ -ಸಾನಿಯಾ ಜೋಡಿ ಸುಲಭ ಜಯ ದಾಖಲಿಸಿ ಕ್ವಾರ್ಟರ್ ಫೈನಲ್ ಹಂತ ತಲುಪಿದ್ದರು.

ಬಾಕ್ಸಿಂಗ್ : ಭಾರತದ ವಿಕಾಸ್ ಕೃಷ್ಣನ್ ಅವರು 74 ಕೆಜಿ ವಿಭಾಗದ ಮಿಡ್ಲ್ ವೇಯ್ಟ್ ಬಾಕ್ಸಿಂಗ್ ನಲ್ಲಿ ಟರ್ಕಿಯ ಸಿಪಾಲ್ ಓಂಡರ್ ವಿರುದ್ಧ 3-0 ಅಂತರದಲ್ಲಿ ಸುಲಭ ಜಯ ದಾಖಲಿಸಿ ಕ್ವಾರ್ಟರ್ ಫೈನಲ್ ಹಂತ ತಲುಪಿದ್ದಾರೆ. ಕ್ವಾರ್ಟರ್ ಫೈನಲ್ ನಲ್ಲಿ ಉಜ್ಬೇಕಿಸ್ತಾನದ ಬೆಕ್ತೆಮಿರ್ ಮಿಲಿಕುಜಿವ್ ಅವರನ್ನು ಎದುರಿಸಲಿದ್ದಾರೆ.

English summary
The star Indian duo of Sania Mirza and Rohan Bopanna entered the semi-finals of the mixed doubles tennis event at the ongoing Rio Olympics by defeating Andy Murray and Heather Watson of Britain in straight sets
Please Wait while comments are loading...