ರಿಯೋ ಅರ್ಚರಿ: ಗುರಿ ತಪ್ಪಿದ ಅತನು ದಾಸ್ ಬಾಣ

Written by: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೋ ಆಗಸ್ಟ್, 12 : ಆರ್ಚರಿಯಲ್ಲಿ ಪದಕದ ಭರವಸೆ ಮೂಡಿಸಿದ್ದ ಬಿಲ್ಲುಗಾರ ಅತನು ದಾಸ್ ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಗುರಿ ನೋಡಿ ಬಾಣ ಬಿಡಲು ವಿಫಲರಾಗಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಶುಕ್ರವಾರ (ಅ.12) ನಡೆದ ಆರ್ಚರಿ ಪುರುಷರ ವಯಕ್ತಿಕ ವಿಭಾಗ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಈ ಹಿಂದೆ ವಿಶ್ವ ಶ್ರೇಯಾಂಕದಲ್ಲಿ 5ನೇ ಸ್ಥಾನದಲ್ಲಿದ್ದ ದಕ್ಷಿಣ ಕೊರಿಯಾದ ಬಿಲ್ಲುಗಾರ ಲೀ ಸಿಯುಂಗ್ ವಿರುದ್ದ 4-6 (28-30, 30-28, 27-27, 27-28, 28-28) ಅಂತರದಲ್ಲಿ ಪರಾಭವಗೊಂಡು ರಿಯೋ ಒಲಿಂಪಿಕ್ಸ್ ನಿಂದ ಹೊರ ನಡೆದರು. [7ನೇ ದಿನವೂ ಭಾರತೀಯರಿಗೆ ನಿರಾಸೆ]

Rio 2016: Archer Atanu Das bows out of Olympics

ಮಂಗಳವಾರ (ಅ.09) ರಂದು ನಡೆದ ಆರ್ಚರಿ (ಬಿಲ್ಲುಗಾರಿಕೆ) ವೈಯಕ್ತಿಕ ವಿಭಾಗದ ಪಂದ್ಯದಲ್ಲಿ ಅತನು ಮೊದಲನೇ ಪಂದ್ಯದಲ್ಲಿ ನೇಪಾಳದ ಜೀತ್ ಬಹದ್ದೂರ್ ಮುಕ್ತಾನ್​ರನ್ನು 6-0 ಅಂತರದಿಂದ ಸುಲಭವಾಗಿ ಸೋಲಿಸಿ 32ರ ಘಟ್ಟಕ್ಕೆ ಎಂಟ್ರಿಕೊಟ್ಟಿದ್ದರು.

ಇನ್ನು 32ರ ಘಟ್ಟದ ಎರಡನೇ ಪಂದ್ಯದಲ್ಲಿ ದಾಸ್ 6-4ರಿಂದ ಕ್ಯೂಬಾದ ಆಡ್ರಿಯನ್ ಪ್ಯುಂಟೇಸ್ ಪರೇಜ್​ರನ್ನು ಮಣಿಸಿ ಶುಭಾರಂಭ ಮಾಡುವ ಮೂಲಕ ಕ್ವಾರ್ಟರ್ ಫೈನಲ್ ಎಂಟ್ರಿಕೊಟ್ಟಿದ್ದರು. ಆದರೆ ಕ್ವಾರ್ಟರ್ ಫೈನಲ್ ನಲ್ಲಿ ವಿಶ್ವ ಶ್ರೇಯಾಂಕಿತ ದಕ್ಷಿಣ ಕೋರಿಯಾದ ಲೀ ವಿರುದ್ದ ಗುರಿ ನೋಡಿ ಬಾಣ ಬಿಡಲು ದಾಸ್ ವಿಫಲಗೊಂಡಿದ್ದಾರೆ.

English summary
In yet another setback to India's Olympic dreams, archer Atanu Das's campaign in Rio Games ended on Friday (Aug 12).
Please Wait while comments are loading...