ಹಾಂಕಾಂಗ್ ಓಪನ್: ಸಿಂಧು ಸೆಮೀಸ್ ಗೆ, ಸೈನಾ ಹೊರಕ್ಕೆ!

ಶುಕ್ರವಾರ ನಡೆದ ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಕ್ವಾರ್ಟರ್ ಫೈನಲ್ ನಲ್ಲಿ ಭಾರತದ ಪಿವಿ ಸಿಂಧು ಗೆದ್ದು ಸೆಮೀಸ್ ಗೆ ಎಂಟ್ರಿಕೊಟ್ಟಿದ್ದಾರೆ. ಇನ್ನೊಂದೆಡೆ ಭಾರತದ ಸೈನಾ ಸೆಹ್ವಾಲ್ ಇದೇ ಟೂರ್ನಿಯ ಕ್ವಾರ್ಟರ್ ಫೈನಲ್ ನಲ್ಲಿ ಮುಗ್ಗರಿಸಿದ್ದಾರೆ.

Written by:
Subscribe to Oneindia Kannada

ಹಾಂಕಾಂಗ್, ನವೆಂಬರ್, 25 : ಚೀನಾ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಭಾರತದ ಸ್ಟಾರ್ ಶೆಟ್ಲರ್ ಪಿವಿ ಸಿಂಧು ಅವರು ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲೂ ಸೆಮೀಸ್ ಗೆ ಲಗ್ಗೆ ಇಟ್ಟಿದ್ದಾರೆ.

ಇನ್ನೊಂದೆಡೆ ಸೈನಾ ನೆಹ್ವಾಲ್ ಅವರು ಹಾಂಕಾಂಗ್ ಓಪನ್ ನ ಬ್ಯಾಡ್ಮಿಂಟನ್ 8 ಘಟ್ಟದಲ್ಲಿ ಪರಾಭವಗೊಂಡು ನಿರಾಸೆ ಮೂಡಿಸಿದರು.

ಶುಕ್ರವಾರ(ನವೆಂಬರ್ 25) ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಿಯೋ ಒಲಿಂಪಿಕ್ಸ್ ಬೆಳ್ಳಿ ತಾರೆ ಪಿವಿ ಸಿಂಧು ಅವರು ಸಿಂಗಾಪೂರದ ಆಟಗಾರ್ತಿ ಲಿಯಾಂಗ್ ಕ್ಷಿಯೊಯು ಅವರನ್ನು 21-17, 21-23, 21-18 ನೇರ ಸೆಟ್ ಗಳಿಂದ ಮಣಿಸಿ ಸೆಮಿಫೈನಲ್ ಗೆ ಪ್ರವೇಶಿಸಿದರು. [ಸಿಂಧು ಮುಡಿಗೆ ಚೀನಾ ಓಪನ್ ಸೂಪರ್ ಸೀರೀಸ್ ಕಿರೀಟ!]

Hong Kong Open: PV Sindhu enters semis, Saina Nehwal exits

ಸಿಂಧು ಅವರು ಭಾನುವಾರ(ನವೆಂಬರ್ 27)ದಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಹಾಂಕಾಂಗ್ ನ ಚೆಯುಂಗ್ ಯಿ ವಿರುದ್ಧ ಸೆಣಸಲಿದ್ದಾರೆ.

ಇನ್ನು ಮೊಣಕಾಲು ಶಸ್ತ್ರ ಚಿಕಿತ್ಸೆ ನಂತರ ಎರಡನೇ ಟೂರ್ನಿ ಆಡುತ್ತಿರುವ ಭಾರತದ ಶೆಟ್ಲರ್ ಸೈನಾ ನೆಹ್ವಾಲ್ ಅವರು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಾಂಕಾಂಗ್ ನ ಚೆಯುಂಗ್ ಯಿ ಅವರ ವಿರುದ್ಧ 8-21, 18-21, 19-21 ಸೆಟ್ ಗಳಿಂದ ಪರಾಭವಗೊಂಡು ಹಾಂಕಾಂಗ್ ಟೂರ್ನಿಯಿಂದ ಹೊರ ಬಂದರು.

ಚೀನಾ ಓಪನ್ ಟೂರ್ನಿಯಲ್ಲೂ ಸೈನಾ ಮೊದಲ ಸುತ್ತಿನಲ್ಲಿ ಸೋತು ಟೂರ್ನಿಯಿಂದ ಔಟ್ ಆಗಿದ್ದರು.

English summary
India's star shuttler PV Sindhu won a tough three-set battle to defeat Xiaoyu Liang of Singapore and enter the semi-finals of the Hong Kong Open badminton tournament here on Friday (November 25). But Saina Nehwal crashed out, losing in the last-8 stage.
Please Wait while comments are loading...