ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ 3ನೇ ಸ್ಥಾನಕ್ಕೇರಿದ ಸಿಂಧು

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 20 : ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಭಾರತದ ಸ್ಟಾರ್ ಶೆಟ್ಲರ್ ಪಿವಿ ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಶ್ರೇಯಾಂಕ ಪಟ್ಟಿಯಲ್ಲಿ 2 ಸ್ಥಾನ ಮೇಲಕ್ಕೆ ಜಿಗಿದಿದ್ದಾರೆ.

ಗುರುವಾರ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಪ್ರಕಟಿಸಿದ ಶ್ರೇಯಾಂಕ ಪಟ್ಟಿಲ್ಲಿ 21 ವರ್ಷದ ಹೈದರಾಬಾದಿನ ಬೆಡಗಿ ಸಿಂಧು ಐದನೇ ಸ್ಥಾನದಿಂದ 3ನೇ ಸ್ಥಾನಕ್ಕೇರಿದ್ದಾರೆ. ಇದು ಸಿಂಧು ಅವರ ಕ್ರೀಡಾ ಜೀವನದ ಶ್ರೇಷ್ಠ ಸಾಧನೆಯಾಗಿದೆ.[ಸಿಂಗಪುರ ಸೂಪರ್ ಸೀರಿಸ್: ಸಿಂಧು 2ನೇ ಸುತ್ತಿಗೆ ಲಗ್ಗೆ]

PV Sindhu climbs two spots be world no 3 latest bwf rankings

ಮಲೇಷ್ಯಾ ಓಪನ್ ಮತ್ತು ಸಿಂಗಾಪುರ ಓಪನ್ ಸೂಪರ್ ಸೀರಿಸ್ ನ ಸೋಲಿನಿಂದಾಗಿ ಕಳೆದ ವಾರ ಸಿಂಧು 5ನೇ ಸ್ಥಾನಕ್ಕೆ ಕುಸಿದಿದ್ದರು.

ಮತ್ತೋರ್ವ ಭಾರತದ ಶೆಟ್ಲರ್ ಲಂಡನ್ ಒಲಿಂಪಿಕ್ಸ್ ಕಂಚು ವಿಜೇತೆ ಸೈನಾ ನೆಹ್ವಾಲ್ ಅವರು ಈ ಹೊಸ ಶ್ರೇಯಾಂಕ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಇನ್ನು ಪುರುಷರ ಸಿಂಗಲ್ಸ್ ವಿಭಾದಲ್ಲಿ ಸಿಂಗಪುರ ಓಪನ್ ಗೆದ್ದ ಭಾರತದ ಶೆಟ್ಲರ್ಸ್ ಸಾಯಿ ಪ್ರಣೀತ್ ಹಾಗೂ ಸಿಂಗಪುರ ಓಪನ್ ರನ್ ಅಪ್ ಕಿಡಾಂಬಿ ಶ್ರೀಕಾಂತ್ ಈ ಇಬ್ಬರು 8ನೇ ಸ್ಥಾನವನ್ನು ಸಮನಾಗಿ ಅಲಂಕರಿಸಿದ್ದಾರೆ.

ಮತ್ತೊಬ್ಬ ಶೆಟ್ಲರ್ ಅಜಯ್ ಜಯರಾಮ್ ಅವರು 13ನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ.

English summary
Rio Olympics silver medallist PV Sindhu today (April 20) climbed up two places to be at No. 3 in the latest BWF ranking released today.
Please Wait while comments are loading...