ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಶ್ವದ ದುಬಾರಿ ಕುಸ್ತಿ ಲೀಗ್ ಗೆ ಭಾರತದಲ್ಲಿ ಚಾಲನೆ

By Mahesh

ನವದೆಹಲಿ, ಜುಲೈ 27: ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಸೋಮವಾರ ವಿಶ್ವದ ಅತ್ಯಂತ ದುಬಾರಿ ಕುಸ್ತಿ ಲೀಗ್ ಗೆ ಚಾಲನೆ ಸಿಕ್ಕಿದೆ. ಕ್ರಿಕೆಟ್, ಹಾಕಿ, ಫುಟ್ಬಾಲ್, ಟೆನಿಸ್ ಹಾಗೂ ಕಬಡ್ಡಿ ಲೀಗ್ ನಂತರ ಕುಸ್ತಿ ಲೀಗ್ ಕ್ರೀಡಾಸಕ್ತರ ಮುಂದೆ ಬಂದಿದೆ.

ಡಬ್ಲ್ಯು ಎಫ್ ಐ ಹಾಗೂ ಪ್ರೊ ಸ್ಫೋರ್ಟಿಫಿ ಆಯೋಜನೆಯ ಪ್ರೋ ರೆಸ್ಲಿಂಗ್ ಲೀಗ್ (PWL) ಗೆ ಚಾಲನೆ ನೀಡಲು ಕುಸ್ತಿಪಟು ಸುಶೀಲ್ ಕುಮಾರ್, ಯೋಗೇಶ್ವರ್ ದತ್, ಗೀತಾ ಫೋಗಟ್, ಬಬಿತಾ ಮುಂತಾದವರು ಆಗಮಿಸಿದ್ದರು. ದೇಶದ ಆರು ನಗರಗಳಲ್ಲಿ ನವೆಂಬರ್ 8 ರಿಂದ 29ರ ತನಕ ನಡೆಯಲಿದೆ. [ಜಗದೇಕ ಮಲ್ಲ ಸುಶೀಲ್ ಗೆ ಚಿನ್ನ ಕೈ ತಪ್ಪಿದ ರಹಸ್ಯ]

ಬ್ರೆಜಿಲ್ಲಿನ ರಿಯೋದಲ್ಲಿರುವ ಒಲಿಂಪಿಕ್ಸ್ ಗೆ ಪೂರ್ವ ತಯಾರಿಯಾಗಿ ಪ್ರೋ ರೆಸ್ಲಿಂಗ್ ಲೀಗ್ ಬಂದಿರುವ ದೇಶಿ ಪ್ರತಿಭೆಗಳಿಗೆ ಉತ್ತಮ ವೇದಿಕೆ ಒದಗಿಸಲಿದೆ. ಆರು ನಗರಗಳಿಂದ 66 ಕ್ಕೂ ಅಧಿಕ ಕುಸ್ತಿಪಟುಗಳು ಸ್ಥಾನ ಪಡೆಯಲಿದ್ದಾರೆ. [ಮೈಸೂರಿನ ಖ್ಯಾತಿ ಏರಿಸಿದ ಗರಡಿ ಮನೆಗಳು]

ಪ್ರೋ ರೆಸ್ಲಿಂಗ್ ಲೀಗ್ ಯಾವ ಚಾನೆಲ್ ನಲ್ಲಿ ಪ್ರಸಾರವಾಗಲಿದೆ ಎಂಬುದು ಆಗಸ್ಟ್ 30ಕ್ಕೆ ತಿಳಿಯಲಿದೆ. ಸೆಪ್ಟೆಂಬರ್ 15ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ವಿಶ್ವದ ಟಾಪ್ 20 ಕುಸ್ತಿಪಟುಗಳು ಈ ಟೂರ್ನಿಯಲ್ಲಿ ಭಾಗವಹಿಸಲು ಒಪ್ಪಿದ್ದಾರೆ ಎಂದು ಪ್ರೋ ಸ್ಫೋಟಿಫಿ ನಿರ್ದೇಶಕರಾದ ಕಾರ್ತಿಕಿ ಶರ್ಮ ಹೇಳಿದ್ದಾರೆ.

ಕುಸ್ತಿಪಟು ಸುಶೀಲ್ ಕುಮಾರ್

ಕುಸ್ತಿಪಟು ಸುಶೀಲ್ ಕುಮಾರ್

ವಿಶ್ವದ ದುಬಾರಿ ಕುಸ್ತಿ ಲೀಗ್ ಚಾಲನೆ ನೀಡುವ ಸಂದರ್ಭದಲ್ಲಿ ಕುಸ್ತಿಪಟು ಸುಶೀಲ್ ಕುಮಾರ್ ಅವರು ರೂಪದರ್ಶಿ ಜೊತೆ ಬೆಕ್ಕಿನ ನಡಿಗೆ ಇಟ್ಟರು.

ಕುಸ್ತಿಪಟು ಗೀತಾ ಫೋಗಟ್

ಕುಸ್ತಿಪಟು ಗೀತಾ ಫೋಗಟ್

2010ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕುಸ್ತಿಪಟು ಗೀತಾ ಫೋಗಟ್ ಅವರು 55 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ಗೀತಾ.

ಪ್ರತಿ ತಂಡದ ಮೂಲಧನ 3ಕೋಟಿ ರು

ಪ್ರತಿ ತಂಡದ ಮೂಲಧನ 3ಕೋಟಿ ರು

21 ದಿನಗಳ ಈ ಟೂರ್ನಿಯಲ್ಲಿ 15 ಲೀಗ್ ಪಂದ್ಯಗಳು, 2 ಸೆಮಿಫೈನಲ್ಸ್ ಹಾಗೂ ಫೈನಲ್ ಪಂದ್ಯಗಳಿರುತ್ತದೆ. ಸೆಪ್ಟೆಂಬರ್ 7ಕ್ಕೆ ಆರು ತಂಡಗಳ ಘೋಷಣೆ ಮಾಡಲಾಗುತ್ತದೆ. ಪ್ರತಿ ತಂಡದ ಮೂಲಧನ 3ಕೋಟಿ ರು ಇಡಲಾಗಿದ್ದು, ಇದು ಬೇರೆ ಲೀಗ್ ಗಳಿಗೆ ಹೋಲಿಸಿದರೆ ಅತ್ಯಂತ ದುಬಾರಿ ಎನಿಸಿಕೊಂಡಿದೆ

 ಪ್ರತಿ ಫ್ರಾಂಚೈಸಿಯಲ್ಲಿ 11 ಆಟಗಾರರು

ಪ್ರತಿ ಫ್ರಾಂಚೈಸಿಯಲ್ಲಿ 11 ಆಟಗಾರರು

ಪ್ರತಿ ಫ್ರಾಂಚೈಸಿಯಲ್ಲಿ 11 ಆಟಗಾರರಿರುತ್ತಾರೆ 5 ಜನ ಪುರುಷರು ಹಾಗೂ 5 ಜನ ಮಹಿಳಾ ಕುಸ್ತಿಪಟುಗಳಿರುತ್ತಾರೆ. ಆರು ಭಾರತೀಯ ಕುಸ್ತಿಪಟು ಹಾಗೂ ಐವರು ವಿದೇಶಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಅಪಾಚಿ ಇಂಡಿಯನ್ ಸಂಗೀತ ಕಾರ್ಯಕ್ರಮ

ಅಪಾಚಿ ಇಂಡಿಯನ್ ಸಂಗೀತ ಕಾರ್ಯಕ್ರಮ

ಡಬ್ಲ್ಯು ಎಫ್ ಐ ಹಾಗೂ ಪ್ರೊ ಸ್ಫೋರ್ಟಿಫಿ ಆಯೋಜನೆಯ ಪ್ರೋ ರೆಸ್ಲಿಂಗ್ ಲೀಗ್ (PWL) ಗೆ ಚಾಲನೆ ನೀಡಲು ಕುಸ್ತಿಪಟು ಸುಶೀಲ್ ಕುಮಾರ್, ಯೋಗೇಶ್ವರ್ ದತ್, ಗೀತಾ ಫೋಗಟ್, ಬಬಿತಾ ಮುಂತಾದವರು ಆಗಮಿಸಿದ್ದರು.ಅಪಾಚಿ ಇಂಡಿಯನ್ ಸಂಗೀತ ಕಾರ್ಯಕ್ರಮ ಕಳೆ ಕಟ್ಟಿತು.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X