ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕಬಡ್ಡಿ ಲೀಗ್ ನಲ್ಲಿ ತೊಡೆ ತಟ್ಟಿದ ರಾಕಿಂಗ್ ಸ್ಟಾರ್ ಯಶ್

By Mahesh

ಬೆಂಗಳೂರು, ಜ. 25: ಸಲ್ಮಾನ್ ಖಾನ್, ಅಭಿಶೇಕ್ ಬಚ್ಚನ್, ಅಮೀರ್ ಖಾನ್, ಅಕ್ಷಯ್ ಕುಮಾರ್, ಜಾನ್ ಅಬ್ರಹಾಂ ಸೇರಿದಂತೆ ಹಲವಾರು ತಾರೆಯರ ಅಚ್ಚು ಮೆಚ್ಚಿನ ಪ್ರೊ ಕಬಡ್ಡಿ ಲೀಗ್ ಪರ ತೊಡೆ ತಟ್ಟಲು ಕನ್ನಡದ ರಾಕಿಂಗ್ ಸ್ಟಾರ್ ಯಶ್ ಸಿದ್ಧರಾಗಿದ್ದಾರೆ. ಮೂರನೇ ಆವೃತ್ತಿಯ ಸ್ಟಾರ್ ಸ್ಫೋರ್ಟ್ಸ್ ಪ್ರೊ ಕಬಡ್ಡಿ ಪರ ರಾಯಭಾರಿಯಾಗಿ ಯಶ್ ಕಾಣಿಸಿಕೊಳ್ಳಲಿದ್ದಾರೆ.

ಈ ಬಾರಿ ಕನ್ನಡ ಸಿನಿಮಾ ರಂಗದಿಂದ ಯಶ್ ಹಾಗೂ ತೆಲುಗಿನಿಂದ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾತಿ ಅವರನ್ನು ಲೀಗ್ ನ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಸ್ಟಾರ್ ಇಂಡಿಯಾ ಸಂಸ್ಥೆ ಹೇಳಿದೆ. [ಕನ್ನಡದಲ್ಲೂ ಪ್ರೋ ಕಬಡ್ಡಿ ಲೀಗ್ ವೀಕ್ಷಕ ವಿವರಣೆ]

ಯಶ್ ಪ್ರತಿಕ್ರಿಯೆ: ಸ್ಟಾರ್ ಇಂಡಿಯಾ ಭಾರತದಲ್ಲಿ ಕಬಡ್ಡಿ ಪ್ರಚಾರ ಮಾಡುವ ರೀತಿ ನನಗೆ ಸಕತ್ ಇಷ್ಟವಾಯಿತು. ಮೂರನೇ ಆವೃತ್ತಿ ಲೀಗ್ ಪಂದ್ಯ ಶುರುವಾಗಲು ಕಾತುರದಿಂದ ಕಾದಿದ್ದೇನೆ. ಆಟಗಾರರ ಜೊತೆ ಕಬಡ್ಡಿ ಆಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ. ಕನ್ನಡದಲ್ಲೇ ಕಾಮೆಂಟರಿ ಕೂಡಾ ಸಿಗುವುದರಿಂದ ನಮ್ಮ ಹಳ್ಳಿಯಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸಬಹುದು.[ಬೆಂಗಳೂರು ಬುಲ್ಸ್ ಮಣಿಸಿ ಯು ಮುಂಬಾ ಕಬಡ್ಡಿ ಸಾಮ್ರಾಟ]

ಕಳೆದ ಸೀಸನ್ ನ ಅಂತಿಮ ಹಣಾಹಣಿಯಲ್ಲಿ ಆಗಸ್ಟ್ 23ರ ಭಾನುವಾರ ರಾತ್ರಿ ನಡೆದ ನ ಫೈನಲ್‌ ನಲ್ಲಿ ಯು ಮುಂಬಾ ತಂಡವು ಬೆಂಗಳೂರು ಬುಲ್ಸ್‌ ತಂಡವನ್ನು 36-30 ಅಂಕಗಳಿಂದ ಸೋಲಿಸಿ ಕಬಡ್ಡಿ ಕಿರೀಟ ಧರಿಸಿತ್ತು. ಕಬಡ್ಡಿ ಲೀಗ್ ಪರ ಯಶ್ ತೊಡೆ ತಟ್ಟಿದ ಪ್ರೋಮೋ ವಿಡಿಯೋ ಲಿಂಕ್

ಈಗ ವರ್ಷಕ್ಕೆ ಎರಡು ಬಾರಿ ಕಬಡ್ಡಿ ಲೀಗ್

ಈಗ ವರ್ಷಕ್ಕೆ ಎರಡು ಬಾರಿ ಕಬಡ್ಡಿ ಲೀಗ್

ಮೊದಲ ಎರಡು ಸೀಸನ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರಿಂದ ವರ್ಷಕ್ಕೆ ಒಮ್ಮೆ ನಡೆಯುತ್ತಿದ್ದ ಕಬಡ್ಡಿ ಲೀಗ್ ಈಗ ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತಿದೆ. ಕ್ರಿಕೆಟ್ ನಂತರ ಕಬಡ್ಡಿಗೆ ಅತಿ ಹೆಚ್ಚು ಕ್ರೀಡಾ ಪ್ರೇಮಿಗಳು ಇದ್ದಾರೆ ಹಾಗೂ ಟಿವಿಯಲ್ಲಿ ವೀಕ್ಷಣೆ ಹೆಚ್ಚಾಗಿದೆ.

ಕನ್ನಡದಲ್ಲೂ ಕಬಡ್ಡಿ ಕಾಮೆಂಟರಿ

ಕನ್ನಡದಲ್ಲೂ ಕಬಡ್ಡಿ ಕಾಮೆಂಟರಿ

ಕನ್ನಡ, ಇಂಗ್ಲೀಷ್, ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ಕಾಮೆಂಟರಿ ಫೀಡ್ ಸಿಗುತ್ತಿದೆ. ಸುಮಾರು 100ಕ್ಕೂ ಅಧಿಕ ದೇಶಗಳಿಗೆ ಸ್ಟಾರ್ ಇಂಡಿಯಾದ ಪ್ರಸಾರ ತಲುಪುತ್ತಿದೆ.

ಜ. 30 ರಂದು ಪ್ರೊ ಕಬಡ್ಡಿ ಲೀಗ್ ನ ಮೂರನೇ ಆವೃತ್ತಿ

ಜ. 30 ರಂದು ಪ್ರೊ ಕಬಡ್ಡಿ ಲೀಗ್ ನ ಮೂರನೇ ಆವೃತ್ತಿ

ಜನವರಿ 30 ರಂದು ವಿಶಾಖಪಟ್ಟಣಂನಲ್ಲಿ ಪ್ರೊ ಕಬಡ್ಡಿ ಲೀಗ್ ನ ಮೂರನೇ ಆವೃತ್ತಿ ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಯು ಮುಂಬಾ ತಂಡವನ್ನು ತೆಲುಗು ಟೈಟಾನ್ಸ್ ಎದುರಿಸಲಿದೆ.

ನವದೆಹಲಿಯಲ್ಲಿ ಪ್ಲೇ ಆಫ್ ಪಂದ್ಯಗಳು

ನವದೆಹಲಿಯಲ್ಲಿ ಪ್ಲೇ ಆಫ್ ಪಂದ್ಯಗಳು

ಲೀಗ್ ನಂತರ ಪ್ಲೇ ಆಫ್ ಪಂದ್ಯಗಳು ನವದೆಹಲಿಯ ಇಂದಿರಾಗಾಂಧಿ ಒಳಾಂಗಣ ಸ್ಟೇಡಿಯಂನಲ್ಲಿ ಮಾರ್ಚ್ 4 ಹಾಗೂ 5ರಂದು ನಡೆಯಲಿದೆ.

 ಮೊದಲ ಎರಡು ಲೀಗ್ ಯಶಸ್ವಿ

ಮೊದಲ ಎರಡು ಲೀಗ್ ಯಶಸ್ವಿ

ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್ಡಮ್, ಮಧ್ಯಪ್ರಾಚ್ಯ ಹಾಗೂ ಲ್ಯಾಟಿನ್ ಅಮೆರಿಕಕ್ಕೂ ಕಬಡ್ಡಿ ರಂಗು ತುಂಬುವಲ್ಲಿ ಮೊದಲ ಎರಡು ಲೀಗ್ ಯಶಸ್ವಿಯಾಗಿದೆ.

Story first published: Wednesday, January 3, 2018, 10:15 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X