ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ವಿಶ್ವಕಪ್ ಅರ್ಹತೆ: ಬೆಂಗಳೂರಲ್ಲಿ ಭಾರತ vs ಒಮಾನ್

By Mahesh

ಬೆಂಗಳೂರು, ಜೂ.11: 2018ರ ಫಿಫಾ ವಿಶ್ವಕಪ್ 2ನೇ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಒಮಾನ್ ತಂಡವನ್ನು ಭಾರತ ಎದುರಿಸಲಿದೆ. ಶ್ರೀಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ(7 PM) ಈ ಪಂದ್ಯ ಉಭಯ ತಂಡಕ್ಕೂ ಅತ್ಯಂತ ಮಹತ್ವದ್ದಾಗಿದೆ.

ಫೀಫಾ ಶ್ರೇಯಾಂಕ ಪಟ್ಟಿಯಲ್ಲಿ ಭಾರತ 141ನೇ ಸ್ಥಾನದಲ್ಲಿದ್ದರೆ, ಒಮಾನ್ 101ನೇ ಸ್ಥಾನದಲ್ಲಿದೆ. ಜರ್ಮನಿ ಟಾಪ್ ನಂ.1 ಸ್ಥಾನದಲ್ಲಿದ್ದರೆ ಅರ್ಜೆಂಟೀನಾ, ಬೆಲ್ಜಿಯಂ, ಕೊಲಂಬಿಯಾ ಹಾಗೂ ಬ್ರೆಜಿಲ್ ಮೊದಲ ಟಾಪ್ ಸ್ಥಾನದಲ್ಲಿವೆ.

ಇಂಗ್ಲೆಂಡ್​ನ ಕೋಚ್ ಸ್ಟೀಫನ್ ಕಾನ್​ಸ್ಟಂಟೈನ್ ಮಾರ್ಗದರ್ಶನ, ಕಳೆದ ಕೆಲ ದಿನಗಳಿಂದ ಸೇನಾ ಮಾದರಿಯಲ್ಲಿ ತರಬೇತಿ ಪಡೆದಿರುವ ಭಾರತ ತಂಡ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದೆ. [ಚಾಂಪಿಯನ್ಸ್ ಗಳ ಚಾಂಪಿಯನ್ ಬಾರ್ಸಿಲೋನಾ ಎಫ್ ಸಿ]

ನಾಯಕ ಸುಬ್ರತಾ ಪಾಲ್ ಬದಲು ಅರ್ನಾಬ್ ಮಂಡಲ್ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತ ತಂಡ ನೇಪಾಳ ವಿರುದ್ಧದ 1ನೇ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ 2-0ಯಿಂದ ಗೆದ್ದಿದ್ದರೆ, 2ನೇ ಪಂದ್ಯದಲ್ಲಿ ಗೋಲು ರಹಿತ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟಿತ್ತು.

ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯ

ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯ

ಶ್ರೀಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ(7 PM) ಈ ಪಂದ್ಯ ಉಭಯ ತಂಡಕ್ಕೂ ಅತ್ಯಂತ ಮಹತ್ವದ್ದಾಗಿದೆ.

ಪಂದ್ಯ ವೀಕ್ಷಣೆಗೆ ಟಿಕೆಟ್ ಲಭ್ಯ

ಪಂದ್ಯ ವೀಕ್ಷಣೆಗೆ ಟಿಕೆಟ್ ಲಭ್ಯ

ಪಂದ್ಯ ವೀಕ್ಷಿಸಲು ಕಂಠೀರವ ಕ್ರೀಡಾಂಗಣ ಹಾಗೂ ವೆಬ್​ಸೈಟ್​ನಲ್ಲೂ ಲಭ್ಯವಿದೆ. ಟಿಕೆಟ್ ದರ 30, 50, 100 ಹಾಗೂ 200 ರು. ಅಲ್ಲದೆ ಎಐಎಫ್​ಎಫ್ ಈ ಪಂದ್ಯ ವೀಕ್ಷಿಸಲು ಭಾರತೀಯ ಸೇನೆಗೆ 5 ಸಾವಿರ ಟಿಕೆಟ್​ಗಳನ್ನು ಉಚಿತವಾಗಿ ನೀಡಿರುವುದು ವಿಶೇಷ.

ಪ್ರಬಲ ಆಟಗಾರರು

ಪ್ರಬಲ ಆಟಗಾರರು

ಜಾಕಿ ಚಂದ್ ಸಿಂಗ್ ಹಾಗೂ ಅನುಭವಿ ಆಟಗಾರ ಸುನಿಲ್ ಛೇಟ್ರಿ, ಸಿಕೆ ವಿನೀತ್, ಎಗ್ಯುನ್ಸೆನ್ ಲೈಹಿಂಗ್ಡೋ ಭಾರತದ ಪ್ರಮುಖ ಆಟಗಾರರು.

ಒಮಾನ್ ಮುಖ್ಯ ಆಟಗಾರರು.

ಒಮಾನ್ ಮುಖ್ಯ ಆಟಗಾರರು.

ಜಬೇರ್ ಅಲ್ ಒವೈಸಿ, ಅಲಿ ಸಲೀಂ ನಹರ್, ಮಹಮದ್ ಅಲ್ ಶಿಯಾಬಿ ಅಬ್ದುಲ್ ಅಜೀಜ್ ಅಲ್ ಇವರು ಒಮಾನ್ ಮುಖ್ಯ ಆಟಗಾರರು.

ಬಲಾಬಲ ಪರೀಕ್ಷೆಯಲ್ಲಿ ಒಮಾನ್ ಫೇವರೀಟ್

ಬಲಾಬಲ ಪರೀಕ್ಷೆಯಲ್ಲಿ ಒಮಾನ್ ಫೇವರೀಟ್

ಇಲ್ಲಿ ತನಕ 4 ಪಂದ್ಯಗಳಲ್ಲಿ ಓಮನ್ 2 ಪಂದ್ಯ ಜಯಿಸಿದ್ದರೆ, ಭಾರತ ಕೇವಲ 1 ಪಂದ್ಯ ಗೆದ್ದಿದೆ. ಇನ್ನುಳಿದಂತೆ 1 ಪಂದ್ಯ ಡ್ರಾ ಕಂಡಿದೆ.

2ನೇ ಸುತ್ತಿನ ಆವೃತ್ತಿ ಪಂದ್ಯಗಳು

2ನೇ ಸುತ್ತಿನ ಆವೃತ್ತಿ ಪಂದ್ಯಗಳು

ಡಿ ಗುಂಪಿನಲ್ಲಿ 3ನೇ ಸ್ಥಾನದಲ್ಲಿರುವ ಭಾರತ 2ನೇ ಸ್ಥಾನದಲ್ಲಿರುವ ಓಮನ್ ಸೇರಿದಂತೆ, ಗುವಾಮ್ ಇರಾನ್, ಟರ್ಕ್​ವೆುನಿಸ್ತಾನ್ ತಂಡಗಳನ್ನು ತಲಾ ಎರಡು ಬಾರಿ ಮುಖಾಮುಖಿಯಾಗಲಿದೆ

ಮಿಲಿಟರಿ ಕ್ಯಾಂಪಲ್ಲಿ ತರಬೇತಿ

ಮಿಲಿಟರಿ ಕ್ಯಾಂಪಲ್ಲಿ ತರಬೇತಿ

ಭಾರತ ಫುಟ್ಬಾಲ್ ತಂಡ ಕೆಲ ದಿನಗಳ ಕಾಲ ಮಿಲಿಟರಿ ಕ್ಯಾಂಪಲ್ಲಿ ತರಬೇತಿ ಪಡೆದುಕೊಂಡು ಬಂದಿದೆ.

ಇನ್ನೂ ಒಂದು ಅರ್ಹತಾ ಸುತ್ತಿನ ಪಂದ್ಯವಿದೆ

ಇನ್ನೂ ಒಂದು ಅರ್ಹತಾ ಸುತ್ತಿನ ಪಂದ್ಯವಿದೆ

ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ 8 ಗುಂಪುಗಳಿದ್ದು, ಎಲ್ಲಾ ಗುಂಪುಗಳಿಂದ ಅತ್ಯುತ್ತಮ 4 ರನ್ನರ್​ಅಪ್ ತಂಡಗಳು 3ನೇ ಅರ್ಹತಾ ಸುತ್ತು ಹಾಗೂ ಏಷ್ಯನ್ ಕಪ್​ಗೆ ಅರ್ಹತೆ ಪಡೆಯಲಿದೆ.

Story first published: Wednesday, January 3, 2018, 10:13 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X