ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಚಿತ್ರಗಳಲ್ಲಿ: ಫಿಲ್ ಹ್ಯೂಸ್ ಗೆ ಅಂತಿಮ ವಿದಾಯ

By Mahesh

ಸಿಡ್ನಿ, ಡಿ.3: ಆಸ್ಟ್ರೇಲಿಯಾದ ಕ್ರಿಕೆಟ್ ಪಟು 25ರ ಹರೆಯದ ಫಿಲಿಪ್ ಹ್ಯೂಸ್ ಅಕಾಲಿಕ ಮರಣದ ಶೋಕ ಕ್ರಿಕೆಟ್ ಲೋಕವನ್ನು ಆವರಿಸಿದೆ. ಮಾರ್ಕ್ಸ್ ವಿಲ್ಲೆ ಗ್ರಾಮದ ಚಿತಾಗಾರದಲ್ಲಿ ಸಾವಿರಾರು ಮಂದಿ ಸಮ್ಮುಖದಲ್ಲಿ ಹ್ಯೂಸ್ ಅಂತಿಮ ಸಂಸ್ಕಾರ ಕಾರ್ಯವನ್ನು ಬುಧವಾರ ನೆರವೇರಿಸಲಾಗಿದೆ. ಟೀಂ ಇಂಡಿಯಾ ಆಟಗಾರರು ಸೇರಿದಂತೆ ವಿಶ್ವ ಕ್ರಿಕೆಟ್ ನ ಹಲವು ಆಟಗಾರರು ಈ ಶೋಕಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಭಾರತೀಯ ತಂಡದ ಕ್ರಿಕೆಟಿಗರು, ಆಸ್ಟ್ರೇಲಿಯಾ ಪ್ರಧಾನಿ ಅಬೊಟ್ ಸೇರಿದಂತೆ ಸಾವಿರ ಸಾವಿರ ಸಂಖ್ಯೆಯ ಕ್ರೀಡಾಭಿಮಾನಿಗಳ ಶೋಕಸಾಗರದ ನಡುವೆ ದೇಶದ ಭರವಸೆಯ ಕ್ರಿಕೆಟ್ ಪಟು (ಬ್ಯಾಟ್ಸ್‌ಮನ್) 25ರ ಹರೆಯದ ಫಿಲಿಪ್ ಹ್ಯೂಸ್ ಅವರ ಅಂತ್ಯಕ್ರಿಯೆ ಇಂದು ಬೆಳಿಗ್ಗೆ ಆಸ್ಟ್ರೇಲಿಯದ ಪೂರ್ವ ಕಡಲ ತೀರದ ಮ್ಯಾಕ್ಸ್‌ವಿಲ್ಲೆಯಲ್ಲಿ ನಡೆಯಿತು.

ಮ್ಯಾಕ್ಸ್‌ವಿಲ್ಲೆಯಲ್ಲಿ ನಡೆದ ಅಂತ್ಯಕ್ರಿಯೆಗೆ ಭಾರತ ಕ್ರಿಕೆಟ್ ತಂಡದ ಮ್ಯಾನೇಜರ್, ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ, ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಮುರಳಿ ವಿಜಯ್ ಮತ್ತು ರೋಹಿತ್ ಶರ್ಮಾ, ಆಸ್ಟ್ರೇಲಿಯದ ಪ್ರಧಾನಿ ಅಬೊಟ್, ಆಸ್ಟ್ರೇಲಿಯ ತಂಡದ ಎಲ್ಲ ಹಾಲಿ ಹಾಗೂ ಮಾಜಿ ಆಟಗಾರರು ಆಗಮಿಸಿದ್ದರು. [ದುರಂತ ಅಂತ್ಯ ಕಂಡ ಕ್ರಿಕೆಟರ್ಸ್]

ಹ್ಯೂಸ್ ಕುಟುಂಬದ ಸದಸ್ಯರನ್ನು ಪ್ರಧಾನಿ ಅಬೊಟ್ ಸಂತೈಸಿದರು. ಹ್ಯೂಸ್ ಮನೆಯವರು ಅಂತ್ಯಕ್ರಿಯೆಗೆ ಊರಿನ ಸಮಸ್ತರನ್ನೂ ಆಹ್ವಾನಿಸಿದ್ದರು. ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ತಮ್ಮ ನೆಚ್ಚಿನ ಆಟಗಾರನಿಗೆ ಅತ್ಯಂತ ವೇದನೆಯ ಅಂತಿಮ ವಿದಾಯ ಹೇಳಿದರು. [ಕಂಬಿನಿ ಮಿಡಿದ ಟ್ವೀಟ್ ಲೋಕ]

ಶೇಫಿಲ್ಡ್ ಶೀಲ್ಡ್ ಪಂದ್ಯವೊಂದರಲ್ಲಿ ತಲೆಗೆ ಪೆಟ್ಟು ತಿಂದು ಗಾಯಗೊಂಡಿದ್ದ ಫಿಲಿಫ್ ಹ್ಯೂಸ್ ಅವರು ನ.27ರಂದು ಸಿಡ್ನಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಬುಧವಾರ ನಡೆದ ಅಂತ್ಯಕ್ರಿಯೆ ಸಮಾರಂಭವನ್ನು ಆಸ್ಟ್ರೇಲಿಯಾ ಸುದ್ದಿ ವಾಹಿನಿಗಳು ನೇರ ಪ್ರಸಾರ ಮಾಡಿ ಶ್ರದ್ಧಾಂಜಲಿ ಅರ್ಪಿಸಿದ್ದವು. ಹ್ಯೂಸ್ ಅಂತಿಮ ಯಾತ್ರೆಯ ಚಿತ್ರಗಳು ಇಲ್ಲಿವೆ... [ಕುತ್ತಿಗೆಯನ್ನೇ ಸೀಳಿದ್ದ ಮಾರಕ ಬೌನ್ಸರ್]

ಮ್ಯಾಕ್ಸ್‌ವಿಲ್ಲೆ ಗ್ರಾಮದ ತುಂಬಾ ಶೋಕಾಚರಣೆ

ಮ್ಯಾಕ್ಸ್‌ವಿಲ್ಲೆ ಗ್ರಾಮದ ತುಂಬಾ ಶೋಕಾಚರಣೆ

ಮ್ಯಾಕ್ಸ್‌ವಿಲ್ಲೆ ಊರಿನ ತುಂಬಾ ದುಃಖ ಸೂಚಕವಾದ ರಿಬ್ಬನ್‌ಗಳನ್ನು ಕಟ್ಟಲಾಗಿತ್ತು. ಪ್ರೌಢಶಾಲೆಯಿಂದ ಅಲಂಕೃತ ಶವ ಪೆಟ್ಟಿಗೆಯಲ್ಲಿ ಹ್ಯೂಸ್ ಪಾರ್ಥಿವ ಶರೀರ ಸ್ಮಶಾನದತ್ತ ಮೆರವಣಿಗೆ ಹೊರಡುತ್ತಿದ್ದಂತೆ ಜನಸಾಗರದ ದುಃಖದ ಕಟ್ಟೆಯೊಡೆದಿತ್ತು. ಹ್ಯೂಸ್‌ನ ಪಾರ್ಥಿವ ದೇಹವನ್ನು ಎಲ್ಲರೂ ಮೌನದಿಂದ ಹಿಂಬಾಲಿಸಿದರು.

ಚಿತ್ರದಲ್ಲಿ: ಆಸ್ಟ್ರೇಲಿಯಾದ ನಾಯಕ ಮೈಕಲ್ ಕ್ಲಾರ್ಕ್
ಎಲ್ಲರೂ ಪಾಲ್ಗೊಂಡು ದುಃಖತಪ್ತರಾದರು

ಎಲ್ಲರೂ ಪಾಲ್ಗೊಂಡು ದುಃಖತಪ್ತರಾದರು

ಸುಮಾರು 2,500 ಜನಸಂಖ್ಯೆ ಹೊಂದಿರುವ ಮ್ಯಾಕ್ಸ್ ವಿಲ್ಲೆ ಗ್ರಾಮಕ್ಕೆ ಹೊರಗಿನಿಂದ ಸುಮಾರು 5-6 ಸಾವಿರ ಜನ ಬಂದಿದ್ದರು. ಹ್ಯೂಸ್ ಅಂತ್ಯಕ್ರಿಯೆಯಲ್ಲಿ ಎಲ್ಲರೂ ಪಾಲ್ಗೊಂಡು ದುಃಖತಪ್ತರಾದರು.

ಶವಪೆಟ್ಟಿಗೆ ಹೊತ್ತ ಅರೋನ್ ಫಿಂಚ್

ಶವಪೆಟ್ಟಿಗೆ ಹೊತ್ತ ಅರೋನ್ ಫಿಂಚ್

ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟ್ ತಾರೆಗಳಾದ ಶೇನ್‌ವಾರ್ನ್, ರಿಕಿ ಪಾಂಟಿಂಗ್, ಡೇವಿಡ್ ವಾರ್ನರ್, ನ್ಯೂಜಿಲೆಂಡ್ ನ ರಿಚರ್ಡ್ ಹ್ಯಾಡ್ಲಿ, ವೆಸ್ಟ್ ಇಂಡೀಸ್‌ನ ಬ್ರಿಯಾನ್ ಲಾರಾ ಮುಂತಾದ ಕ್ರಿಕೆಟ್ ದಿಗ್ಗಜರು ಕಂಬನಿ ಮಿಡಿದರು.

ಲಿಟ್ಲ್ ಬ್ರದರ್ ಕಳೆದುಕೊಂಡ ಮೈಕಲ್ ಕಾರ್ಕ್

ಲಿಟ್ಲ್ ಬ್ರದರ್ ಕಳೆದುಕೊಂಡ ಮೈಕಲ್ ಕಾರ್ಕ್

ಹ್ಯೂಸ್ ರನ್ನು ಲಿಟ್ಲ್ ಬ್ರದರ್ ಎಂದು ಕರೆಯುತ್ತಿದ್ದ ಮೈಕಲ್ ಕಾರ್ಕ್ ಅವರು ಹ್ಯೂಸ್ ಕುಟುಂಬಸ್ಥರನ್ನು ಸಂತೈಸುತ್ತಿದ್ದಾರೆ.

ಪುತ್ರ ಶೋಕಂ ನಿರಂತರಂ

ಪುತ್ರ ಶೋಕಂ ನಿರಂತರಂ

ಫಿಲ್ ಹ್ಯೂಸ್ ಅವರ ತಾಯಿ ವರ್ಜಿನಾ ಹ್ಯೂಸ್ (ಮಧ್ಯೆ) ಅವರು ಶವಪೆಟ್ಟಿಗೆ ಕಡೆಗೆ ಕಣ್ಣೀರಿಡುತ್ತಾ ಹೋಗುವ ದೃಶ್ಯ ಮನಕಲುಕುವಂತಿತ್ತು.

ತಂದೆ ಗ್ರೆಗೋರಿ ಹ್ಯೂಸ್ ನೋವು

ತಂದೆ ಗ್ರೆಗೋರಿ ಹ್ಯೂಸ್ ನೋವು

ಶವಪೆಟ್ಟಿಗೆ ಹೊತ್ತು ಕಣ್ಣೀರಿಡುತ್ತಾ ಸಾಗಿದ ಗ್ರೆಗೋರಿ ಹ್ಯೂಸ್(ಚಿತ್ರದಲ್ಲಿ ಮೊದಲನೆಯವರು)

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X