ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೋ ಕಬಡ್ಡಿ ಲೀಗ್ ನಲ್ಲಿ ಪಾಕಿಸ್ತಾನಿಗಳಿಗೆ ಅವಕಾಶವಿಲ್ಲ : ಭಾರತ ಸರ್ಕಾರ

ಐದನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್ (ಪಿಕೆಎಲ್) ಜೂನ್ 25ರಂದು ಆರಂಭವಾಗಲಿದ್ದು, ಪಿಕೆಎಲ್ ನಲ್ಲಿ ಭಾಗವಹಿಸಲು ಪಾಕಿಸ್ತಾನದ ಆಟಗಾರರಿಗೆ ಅವಕಾಶ ನಿರಾಕರಿಸಲಾಗಿದೆ ಎಂದು ಕ್ರೀಡಾ ಸಚಿವ ವಿಜಯ್ ಗೋಯಲ್ ಸ್ಪಷ್ಟಪಡಿಸಿದ್ದಾರೆ.

By Mahesh

ನವದೆಹಲಿ, ಮೇ 23: ಐದನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್ (ಪಿಕೆಎಲ್) ಜೂನ್ 25ರಂದು ಆರಂಭವಾಗಲಿದ್ದು, ಪಿಕೆಎಲ್ ನಲ್ಲಿ ಭಾಗವಹಿಸಲು ಪಾಕಿಸ್ತಾನದ ಆಟಗಾರರಿಗೆ ಅವಕಾಶ ನಿರಾಕರಿಸಲಾಗಿದೆ ಎಂದು ಕ್ರೀಡಾ ಸಚಿವ ವಿಜಯ್ ಗೋಯಲ್ ಸ್ಪಷ್ಟಪಡಿಸಿದ್ದಾರೆ.

ಗಡಿಯಾಚೆಗಿನ ಭಯೋತ್ಪಾದನಾ ಕೃತ್ಯಗಳಿಗೆ ಕುಮ್ಮುಕ್ಕು ನೀಡುತ್ತಿರುವ ಪಾಕಿಸ್ತಾನದ ಆಟಗಾರರಿಗೆ ಭಾರತದಲ್ಲಿ ಕಬಡ್ಡಿ ಆಡಲು ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. [ಪ್ರೊ ಕಬಡ್ಡಿ: ಅತಿ ಹೆಚ್ಚು ಮೌಲ್ಯಕ್ಕೆ ಹರಾಜಾದ ಟಾಪ್ 10 ಆಟಗಾರರು ]

Vijay Goel

ಪ್ರೋ ಕಬಡ್ಡಿ ಲೀಗ್ ನ ಆಯೋಜಕರು ಪಾಕಿಸ್ತಾನಿ ಆಟಗಾರರನ್ನು ಹರಾಜು ಪ್ರಕ್ರಿಯೆಯಲ್ಲಿ ಪರಿಗಣಿಸಬಹುದು. ಆದರೆ ಆಯ್ಕೆಯಾದ ಪಾಕ್ ಆಟಗಾರರು ಕಬಡ್ಡಿ ಲೀಗ್ ನಲ್ಲಿ ಆಡಬೇಕೋ ಬೇಡವೋ ಎಂಬುದನ್ನು ಭಾರತ ಸರಕಾರ ಮಾತ್ರ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.

ಜೂ.25 ರಿಂದ ಕಬಡ್ಡಿ ಲೀಗ್ ನ 5 ನೇ ಸೆಷನ್ ಪ್ರಾರಂಭವಾಗಲಿದ್ದು, ಪಾಕಿಸ್ತಾನ ಉಗ್ರವಾದದಿಂದ ಮುಕ್ತಿ ಪಡೆಯುವವರೆಗೂ ನಾವು ಪಾಕಿಸ್ತಾನಿ ಆಟಗಾರರಿಗೆ ಕಬಡ್ಡಿ ಲೀಗ್ ನಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದರು.

ಕಬಡ್ಡಿ ಲೀಗ್‍ ಮಾತ್ರವಲ್ಲದೇ, ಹಾಕಿ ಹಾಗೂ ಕ್ರಿಕೆಟ್ ಗಳಲ್ಲೂ ಪಾಕಿಸ್ತಾನಿ ಆಟಗಾರರಿಗೆ ಆಡಲು ಅವಕಾಶ ಮಾಡಿಕೊಟ್ಟಿಲ್ಲ. ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದ್ದು, ಇತ್ತೀಚಿನ ಕುಲಭೂಷಣ್ ಜಾಧವ್ ಪ್ರಕರಣದ ನಂತರ ಪರಿಸ್ಥಿತಿ ಇನ್ನಷ್ಟು ಉಲ್ಬಣಿಸಿದೆ.

Story first published: Wednesday, January 3, 2018, 10:15 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X